ಭೂಮಿಯಲ್ಲಿ ಜನನ, ವಿಗ್ರಹಕ್ಕೆ ಅರ್ಚನ, ರೋಗಿಗಳ ದೇಹ ಪೋಷಣ
Team Udayavani, Apr 30, 2019, 6:30 AM IST
ವಿವಿಧೆಡೆ ತುಳಸಿ ವನಗಳು, ನಿತ್ಯ ತುಳಸಿ ಕುಡಿಗಳ ಸಂಗ್ರಹ, ಶ್ರೀಕೃಷ್ಣಮಠದಲ್ಲಿ ಅವುಗಳಿಂದ ನಿತ್ಯ ಅರ್ಚನೆ, ಅರ್ಚನೆಯಾದ ತುಳಸಿ ಕುಡಿಗಳು ಉದ್ಯಾವರ ಕುತ್ಪಾಡಿಯ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಗೆ ರವಾನೆ. ಅವುಗಳಿಂದ ಔಷಧಿ ತಯಾರಿ…. ಇವು ಉಡುಪಿ ಶ್ರೀಕೃಷ್ಣಮಠದಲ್ಲಿ ಪ್ರಸ್ತುತ ಪರ್ಯಾಯ ಪೂಜಾವಧಿಯಲ್ಲಿ ಲಕ್ಷ ತುಳಸಿ ಅರ್ಚನೆಯ ವಿವಿಧ ಮಜಲುಗಳು…
ಮೊದಲ ಹಂತ
ನಗರದ ನಾಲ್ಕು ಕಡೆ ಅಮೆರಿಕದ ಒಂಭತ್ತು ಪೇಟೆಂಟ್‌ಗಳನ್ನು, ಒಂದು ಜಾಗತಿಕ ಪೇಟೆಂಟ್ ಪಡೆದು ಉಡುಪಿಯಲ್ಲಿದ್ದು, ಇಲ್ಲಿದ್ದು, ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ ಪೆಜತ್ತಾಯ ವಿವಿಧ ಹೆಸರುಗಳ ತುಳಸಿವನಗಳನ್ನು ನಿರ್ವ ಹಿಸುತ್ತಿದ್ದಾರೆ. ಮುಂಬೈನ ಜ್ಯೋತಿಷಿ ಗುರುರಾಜ ಉಪಾಧ್ಯಾಯರು ಉಡುಪಿಯಲ್ಲಿದ್ದು, ಪಡುಬೆಳ್ಳೆಯಲ್ಲಿ ನಿರ್ವಹಿಸುತ್ತಿರುವ ತುಳಸಿ ವನ, ಶ್ರೀಅದಮಾರು ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಶೀರೂರಿನ ಪೂರ್ವಾಶ್ರಮದ ಮನೆಯಲ್ಲಿ ಬೆಳೆಸುತ್ತಿರುವ ತುಳಸಿ, ಬಲಾಯಿಪಾದೆಯಲ್ಲಿ ಪುಂಡರೀಕ್ಷಾಕ ಭಟ್ ಅವರ ತುಳಸಿವನ, ಕೋಟೇಶ್ವರದ ಹಂಗಳೂರು ಬಡಾಕೆರೆ ರಾಮಚಂದ್ರ ವರ್ಣರು ವೇಣುಗೋಪಾಲಕೃಷ್ಣ ಸೇವಾ ಸಂಘದ ಆಶ್ರಯದಲ್ಲಿ ನಡೆಸುತ್ತಿರುವ ತುಳಸಿ ವನ-ಹೀಗೆ ವಿವಿಧೆಡೆಗಳಿಂದ ನಿತ್ಯ ತುಳಸಿ ಕುಡಿಗಳು ಹರಿದುಬರುತ್ತಿವೆ.
ರಾಮಚಂದ್ರ ವರ್ಣರಿಂದ ನಿತ್ಯ ಒಂದು ಲಕ್ಷ ಕುಡಿ ಬಂದರೆ, ಉಪ್ಪಳ ಕೊಂಡೆವೂರು ಸ್ವಾಮೀಜಿಯವರು ಬಸ್ ಮೂಲಕ ನಿತ್ಯ ತುಳಸಿ ಕುಡಿಗಳನ್ನು ಕಳುಹಿಸುತ್ತಾರೆ. ಕಟೀಲಿನ ಹರಿನಾರಾಯಣ ಆಸ್ರಣ್ಣ, ವಾಸುದೇವ ಆಸ್ರಣ್ಣರು ವಾರಕ್ಕೊಮ್ಮೆ ಕಳುಹಿಸಿದರೆ, ಕಾಸರಗೋಡು ತಾಲೂಕು ವರ್ಕಾಡಿಯ ಶ್ರೀವಿಷ್ಣುಮೂರ್ತಿ ದೇವಸ್ಥಾನದ ರಾಘವೇಂದ್ರ ಭಟ್ ಪ್ರತಿ ದ್ವಾದಶಿಗೆ ತುಳಸಿ ದಳಗಳನ್ನು ಸಮರ್ಪಿಸುತ್ತಾರೆ. ಪೆರಂಪಳ್ಳಿಯ ಸಾಯಿರಾಧಾ ಪ್ಯಾರಡೈಸ್ ವಠಾರ ಮನೋಹರ ಶೆಟ್ಟಿಯವರ ಜಾಗದಲ್ಲಿ ತುಳಸಿ ಬೆಳೆಸಲಾಗುತ್ತಿದೆ.
ಇದಲ್ಲದೆ ಅಲ್ಪಸ್ವಲ್ಪ ತುಳಸಿಗಳನ್ನು ತಂದುಕೊಡುವವರು ಪ್ರತ್ಯೇಕ. ಇವರಲ್ಲಿ ಬಹುತೇಕರು ವಿಷ್ಣುಸಹಸ್ರನಾಮವನ್ನು ಪಠಿಸುತ್ತ ಕುಡಿಗಳನ್ನು ಕೀಳುವಂತಹ ಶಿಸ್ತನ್ನು ಬೆಳೆಸಿಕೊಂಡವರು.
ಎರಡನೆಯ ಹಂತ
ಬಂದ ತುಳಸಿ ಕುಡಿಗಳನ್ನು ನಿತ್ಯವೂ ಶ್ರೀಕೃಷ್ಣಮಠದಲ್ಲಿ ಸರಿಪಡಿಸಲು ಮೂರ್‍ನಾಲ್ಕು ಸಿಬಂದಿ ಇದ್ದಾರೆ. ಬೆಳಗ್ಗೆ 9 ಕ್ಕೆ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಮಹಾಪೂಜೆಗೆ ಕುಳಿತರೆ 60 ಜನ ವೈದಿಕರು ಎರಡು ಬಾರಿ ವಿಷ್ಣುಸಹಸ್ರನಾಮ ಪಾರಾಯಣ ಮಾಡುತ್ತಾರೆ. ಈ ಸಾವಿರ ನಾಮದ ಸಂಖ್ಯೆ ಲಕ್ಷ ದಾಟುತ್ತದೆ. ಈ ಅವಧಿಯಲ್ಲಿ ತುಳಸಿದಳಗಳನ್ನು ಸ್ವಾಮೀಜಿಯವರು ಶ್ರೀಕೃಷ್ಣನಿಗೆ ಅರ್ಚನೆ ಮಾಡುತ್ತಾರೆ. ಈ ತೆರನಾಗಿ ಅರ್ಚನೆಗೊಂಡ ತುಳಸಿಯಲ್ಲಿ ಒಂದಿಷ್ಟು ಅಂಶ ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಣೆಯಾಗುತ್ತದೆ.
ಮೂರನೆಯ ಹಂತ
ಪರ್ಯಾಯ ಪೂಜೆ ಆರಂಭಗೊಂಡ ದಿನದ ದರ್ಬಾರ್ ಸಭೆಯಲ್ಲಿ ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದಂತೆ ಅರ್ಚನೆಗೊಂಡ ತುಳಸಿಕುಡಿಗಳು ಕುತ್ಪಾಡಿಯಲ್ಲಿರುವ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಫಾರ್ಮಸಿ ವಿಭಾಗದಲ್ಲಿ ಔಷಧಿ ತಯಾರಿಸಲು ಬಳಕೆಯಾಗುತ್ತಿದೆ.
ಫಾರ್ಮಸಿ ವಿಭಾಗದಲ್ಲಿ ಇತರ ಕಚ್ಚಾ ಸಾಮಗ್ರಿಗಳ ಸಂಸ್ಕರಣೆಯೂ ಸೇರಿದಂತೆ ಇತ್ತೀಚಿಗೆ 1.5 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಕರಣಗಳನ್ನು ಸ್ಥಾಪಿಸಲಾಗಿದೆ. ಕಶಾಯವನ್ನು 35 ಅಡಿಯಿಂದ ಕೆಳಗೆ ಸ್ಪ್ರೆ ಮಾಡಿ ಬರುವಾಗ ಒಣಗಿ ಪೌಡರ್ ಆಗುವ ಸ್ಪ್ರೆ ಡ್ರೈಯರ್‌ಗೆ ಸುಮಾರು 40 ಲ.ರೂ. ವೆಚ್ಚವಾಗಿದೆ. ಇದಲ್ಲದೆ ಗಿಡಮೂಲಿಕೆಗಳ ಸತ್ತÌವನ್ನು ಪಡೆಯುವ ಹರ್ಬ್ ಎಕ್ಸಾ$r$Åಕ್ಟರ್, ವ್ಯಾಕ್ಯೂಮ್ ಕಾನ್‌ಸೆಂಟ್ರೇಟರ್, ತೈಲ ಸಂಸ್ಕರಣ ಪಾತ್ರೆ, ಸ್ಪ್ರೆ ವಿದ್ ಸ್ಟೀಮ್ ಬಾಯ್ಲರ್ ಇತ್ಯಾದಿ ಯಂತ್ರಗಳನ್ನು ಅಳವಡಿಸಲಾಗಿದೆ.
ಸಹಜ ತುಳಸಿ, ಕೃತಕ ತುಳಸಿ
ತೋಟ, ಗದ್ದೆಯ ಅಂಚಿನಲ್ಲಿ ಸಹಜವಾಗಿ ಕದಿರು ಬಿದ್ದು ಹುಟ್ಟಿ ಬೆಳೆಯುವ ತುಳಸಿಗೂ ಪೋಷಿಸಿ ಬೆಳೆಸುವ ತುಳಸಿಗೂ ಗುಣಧರ್ಮದಲ್ಲಿ ವ್ಯತ್ಯಾಸವಿರುತ್ತದೆ. ಗಿಡಮೂಲಿಕೆ ಗಳು ಸಹಜವಾಗಿ ಬೆಳೆದಾಗ ಬಲಿಷ್ಠವಾಗಿರುತ್ತದೆ. ಇದು ನಾಟಿ ದನಗಳಿಗೂ (ದೇಸೀ ತಳಿ) ಕೃತಕ ಮಿಶ್ರತಳಿ ದನಗಳಿಗೂ, ನಾಟಿ ಕೋಳಿಗಳಿಗೂ ಬ್ರಾçಯ್ಲರ್ ಕೋಳಿಗಳಿಗೂ ವ್ಯತ್ಯಾಸವಿರುವಂತೆ. ಇದು ಮನುಷ್ಯ ಸಹಿತ ಎಲ್ಲ ಗಿಡ, ಪ್ರಾಣಿಗಳಿಗೂ ಅನ್ವಯ. ಈ ಸಿದ್ಧಾಂತದ ಪ್ರಕಾರ ಇಂದು ಮನುಷ್ಯ- ಕೃತಕ ಪ್ರಭಾವದ ಪ್ರಾಣಿಗಳ ದೇಹಗಳಲ್ಲಿ ರೋಗ ನಿರೋಧಕ ಶಕ್ತಿ ಕುಂದಲು ಕೃತಕ ಉತ್ತೇಜನಗಳು ಕಾರಣವೆನ್ನಬಹುದು. ಸುಮಾರು ಐದಾರು ದಶಕಗಳ ಹಿಂದೆ ಕೆಲವರಲ್ಲಿರುತ್ತಿದ್ದ ವಿಶಿಷ್ಟ ಶಕ್ತಿಗಳು ಈಗಿನ ತಲೆಮಾರಿನಲ್ಲಿ ಕಣ್ಮರೆಯಾಗಲೂ ಜೀವನಶೈಲಿ ಬದಲಾವಣೆ ಕಾರಣವಿರಬಹುದು.
ಆರಂಭದಲ್ಲಿ ಸಾರ್ವಜನಿಕರ ಸಹಭಾಗಿತ್ವ ಕಡಿಮೆ ಇತ್ತು. ಈಗ ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಸುಮಾರು 150 ಭಕ್ತರು ಮನೆಗಳಿಂದಲೋ, ಬೇರೆ ಮನೆಗಳಿಂದಲೋ ತುಳಸಿ ಕುಡಿಗಳನ್ನು ತಂದುಕೊಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಜನಜಾಗೃತಿಯಾಗಿದೆ. ಜನರ ಸ್ಪಂದನೆಯಿಂದ ಯಶಸ್ವಿಯಾಗಿ ನಡೆಯುತ್ತಿದೆ.
– ಪ್ರಹ್ಲಾದ ರಾವ್, ಆಡಳಿತಾಧಿಕಾರಿ, ಶ್ರೀಕೃಷ್ಣಮಠ ಪರ್ಯಾಯ ಶ್ರೀಪಲಿಮಾರು ಮಠ, ಉಡುಪಿ.
ವೆಜ್- ನಾನ್‌ವೆಜ್ ಕ್ಯಾಪ್ಸುಲ್
ಕ್ಯಾಪ್ಸುಲ್ ನಲ್ಲಿ ಹೊರಗೆ ಕಾಣುವ ಕವರ್‌ನಲ್ಲಿ ವೆಜ್ ಮತ್ತು ನಾನ್ ವೆಜ್ ಈ ಎರಡು ಬಗೆ ಇದೆ. ಆಯುರ್ವೇದ ಕ್ಯಾಪ್ಸುಲ್‌ನ್ನು ವೆಜ್ ಸೆಲ್ಯುಲೋಸ್ ಕ್ಯಾಪ್ಸುಲ್ ಎಂದೂ, ಇತರ ಕ್ಯಾಪ್ಸುಲ್ನ್ನು ಜಿಲೆಟಿನ್ ಕ್ಯಾಪುÕಲ್ ಎಂದೂ ಕರೆಯುತ್ತಾರೆ. ವೆಜ್ ಕ್ಯಾಪ್ಸುಲ್ ಕವರ್‌ನ್ನು ನಾರುಳ್ಳ ತರಕಾರಿ ಸಹಿತ ಗಿಡಮೂಲಿಕೆಗಳಿಂದ ತಯಾರಿಸಿದರೆ ನಾನ್ ವೆಜ್ ಕ್ಯಾಪ್ಸುಲ್ನ್ನು ಪ್ರಾಣಿಗಳ ಎಲುಬಿನ ಹೊರಕವಚದ ಮೂಲದ್ರವ್ಯವನ್ನು ಸಂಸ್ಕರಿಸಿ ತಯಾರಿಸಲಾಗುತ್ತದೆ.
ಸುಮಾರು 20 ಕೆ.ಜಿ.
ತುಳಸಿ ಕುಡಿಗಳನ್ನು ಸಂಸ್ಕರಿಸಲು ಹಾಕಿದರೆ ಒಣಗಿದಾಗ ಸಿಗುವುದು 2-3 ಕೆ.ಜಿ. ಮಾತ್ರ. ಇದನ್ನು ಬಹುವಿಧದ ಸಂಸ್ಕರಣೆಗೊಳಪಡಿಸಿ ಔಷಧಿ ತಯಾರಿಸಲಾಗುತ್ತಿದೆ.
– ಡಾ| ಮುರಳೀಧರ ಬಲ್ಲಾಳ್, ಪ್ರಧಾನ ವ್ಯವಸ್ಥಾಪಕ, ಶ್ರೀಧರ್ಮಸ್ಥಳ
ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿ, ಕುತ್ಪಾಡಿ, ಉದ್ಯಾವರ, ಉಡುಪಿ.
ಸರ್ವರೋಗಗಳಿಗೂ ಔಷಧಿ
ಜೀವನಶೈಲಿ ಬದಲಾವಣೆಯಿಂದ ಬರುವ ದೀರ್ಘಕಾಲೀನ ಕಾಯಿಲೆ (ಮಧುಮೇಹ ಇತ್ಯಾದಿ),ಮೆಟಬೊಲಿಕ್ ಸಿಂಡ್ರೋಮ್ (ಸಹಜವಾದ ರೋಗನಿರೋಧಕ ವ್ಯವಸ್ಥೆಯಲ್ಲಿ ವಿಪರೀತವಾಗುವುದು. ತಿಂದ ಆಹಾರದ ಅಣುಗಳು = ಮೊಲೆಕ್ಯುಲಸ್ ಬುದ್ಧಿಭ್ರಮಣೆಯಾಗಿ ಬ್ಯಾಕ್ಟೀರಿಯಾ, ವೈರಸ್ ಇತ್ಯಾದಿಗಳ ವಿರುದ್ಧ ಕೆಲಸ ಮಾಡುವ ಬದಲು ನಮ್ಮ ದೇಹದ ವಿರುದ್ಧವೇ ಕೆಲಸ ಮಾಡುವುದು), ಮಾನಸಿಕ ಒತ್ತಡ (ಸೈಕಾಲಾಜಿಕಲ್ ಸ್ಟ್ರೆಸ್) ಸಂಬಂಧಿತ ಕಾಯಿಲೆಗಳಿಗೆ ತುಳಸಿಯಿಂದ ಮಾಡಿದ ಔಷಧಿಗಳನ್ನು ಬಳಸುತ್ತಾರೆ. ಈ ಮೂರು ಬಗೆಯ ಗುಂಪುಗಳಲ್ಲಿ ಶೀತದಿಂದ ಹಿಡಿದು ಕ್ಯಾನ್ಸರ್‌ವರೆಗೆ ಎಲ್ಲ ವಿಧದ ಕಾಯಿಲೆಯೂ ಬರುತ್ತದೆ. ತುಳಸಿಯನ್ನು ಪೂರ್ತಿಯಾಗಿಯೂ, ಮಿಶ್ರಣವಾಗಿಯೂ ಬಳಸುತ್ತಾರೆ. ಮುಖ್ಯವಾಗಿ ಮಾತ್ರೆ, ಕ್ಯಾಪುÕಲ್,
ಕಫ್ ಸಿರಪ್, ಮೂಗಿಗೆ ಹಾಕುವ ಅಣು ತೈಲವನ್ನು ತಯಾರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.