ಕೊಲ್ಲೂರು ಬಳಿ ಪ್ರಾಚೀನ ನಾಗಶಿಲ್ಪ ಪತ್ತೆ
Team Udayavani, Jul 25, 2020, 8:49 AM IST
ಉಡುಪಿ: ಕೊಲ್ಲೂರು ಸಮೀಪ ಹಾಲ್ಕಲ್ ಕೋಟೆ ಜೈನ ಜಟ್ಟಿಗೇಶ್ವರ ದೈವಸ್ಥಾನದ ಆವರಣವನ್ನು ವಿಸ್ತರಿಸುವ ವೇಳೆ ಪ್ರಾಚೀನ ನಾಗಶಿಲ್ಪಗಳು ಕಂಡು ಬಂದಿವೆ.
ಈ ಶಿಲ್ಪ ಮೂರು ಪ್ರಧಾನ ಹೆಡೆ ಮತ್ತು ಮೂರು ಪವಿತ್ರ ಗಂಟುಗಳನ್ನು ಒಳಗೊಂಡಿದೆ. ಆ ಮೂರು ಪವಿತ್ರ ಗಂಟುಗಳಲ್ಲಿ ಮೂರು ನಾಗಾಂಡಗಳಿವೆ, ಆ ನಾಗಾಂಡಗಳಿಂದ ಹೊರಬಂದ ಮೂರು ನಾಗಮರಿಗಳು ಹೆಡೆಬಿಚ್ಚಿ ನಿಂತಿರುವಂತೆ ಶಿಲ್ಪದಲ್ಲಿ ತೋರಿಸಲಾಗಿದೆ. ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ನಾಗಾರಾಧನೆ ಬಹಳ ಮಹತ್ವದ ಸಂಗತಿಯಾಗಿದೆ. ಸ್ಥಳೀಯ ಐತಿಹ್ಯದ ಪ್ರಕಾರ ಆ ಸ್ಥಳವನ್ನು ಜೈನ ಜಟ್ಟಿಗೇಶ್ವರ ಎಂದು ಕರೆಯಲಾಗುತ್ತಿದೆ, ಆದ್ದರಿಂದ ಪ್ರಸ್ತುತ ಪತ್ತೆಯಾಗಿರುವ ನಾಗಶಿಲ್ಪ ಜೈನ ಧರ್ಮಕ್ಕೆ ಸಂಬಂಧಿಸಿದ ನಾಗಶಿಲ್ಪವಾಗಿರುವ ಸಾಧ್ಯತೆ ಇದೆ ಎಂದು ಶಿರ್ವ ಸುಂದರ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪ್ರೊ| ಟಿ. ಮುರುಗೇಶಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.