ವರ್ಷಕ್ಕೊಮ್ಮೆ ತಂಪೆರೆಯುವ ನಾಗಬನದಲ್ಲಿ ವಾರ್ಷಿಕ ಪೂಜೆ
ಕುತ್ಯಾರು ಮೂಲ್ದೊಟ್ಟು ನಾಗಬನ
Team Udayavani, May 23, 2020, 5:07 AM IST
ಶಿರ್ವ: ಕಾಪು ತಾಲೂಕಿನ ಕುತ್ಯಾರು ಸಮೀಪದ ಮೂಲ್ದೊಟ್ಟು ನಾಗಬನದಲ್ಲಿ ವರ್ಷಕ್ಕೊಮ್ಮೆ ತುಳು ಬೇಷ ತಿಂಗಳ ಮೊದಲ ಗುರುವಾರ ನಡೆಯುವ ನಾಗಾರಾಧನೆ ಪೂಜೆಯು ಶಿರ್ವ ಸೊರ್ಪು ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಗುರಿಕಾರ ರವೀಂದ್ರನಾಥ .ಎಸ್ ಅವರ ನೇತೃತ್ವದಲ್ಲಿ ಸೀಮಿತ ಜನರ ಉಪಸ್ಥಿತಿಯಲ್ಲಿ ಮೇ 21ರಂದು ಸಂಪನ್ನಗೊಂಡಿತು.
ನೈಸರ್ಗಿಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡ ಈ ವಿಶಿಷ್ಟ ನಾಗಬನದಲ್ಲಿ ನಾಗರಪಂಚಮಿ ಯಂತಹ ಪರ್ವದಿನದಲ್ಲಾಗಲೀ, ಭಕ್ತರು ಬಯಸಿದ ಇತರ ದಿನದಲ್ಲಾಗಲೀ ಪೂಜೆಗೆ ಅವಕಾಶವಿಲ್ಲ. ವರ್ಷಕ್ಕೊಮ್ಮೆ ಮಾತ್ರ ವಿವಿಧ ಜಿಲ್ಲೆಗಳ ಪರಿಶಿಷ್ಟ ವರ್ಗದ ಮೊಗೇರ ಸಮುದಾಯದವರಿಂದ ಈ ನಾಗಬನದಲ್ಲಿ ಪೂಜೆ ನಡೆಯುವುದು ಸಂಪ್ರದಾಯವಾಗಿದೆ.
ಪ್ರತಿವರ್ಷ ಇಲ್ಲಿನ ನಾಗಾರಾಧನೆ ಪೂಜೆಗೆ ವಿವಿಧ ಜಿಲ್ಲೆಗಳಿಂದ ಮೊಗೇರ ಸಮುದಾಯದ ಸುಮಾರು 500 ಭಕ್ತರು ಪಾಲ್ಗೊಳ್ಳುತ್ತಿದ್ದು ಈ ಬಾರಿ ಕೋವಿಡ್-19 ಮಹಾಮಾರಿಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೀಮಿತ ಜನರು ಭಾಗವಹಿಸಿ ಪೂಜೆ ನೆರವೇರಿಸಲಾಗಿದೆ ಎಂದು ಗುರಿಕಾರ ರವೀಂದ್ರನಾಥ ಎಸ್. ತಿಳಿಸಿದ್ದಾರೆ.
ಕುತ್ಯಾರು ದೈವಸ್ಥಾನದ ಗುರಿಕಾರ ಸಾಧು ಮುಗ್ಗೇರ, ಶಿರ್ವ ದೈವಸ್ಥಾನದ ಒತ್ತು ಗುರಿಕಾರ ಸತೀಶ್ ಮುಗ್ಗೇರ ಶಿರ್ವ ಉಪಸ್ಥಿತರಿದ್ದರು.
ವಿಶಿಷ್ಟ ನಾಗಬನ
ಪರಿಶಿಷ್ಟ ವರ್ಗದ ಮೊಗೇರ ಸಮುದಾಯದ 16 ಬಳಿ ಸಾವಿರ ಮಾಗಣೆಯ ಪ್ರಧಾನ ನಾಗಬನವಾಗಿದ್ದು ಈ ವಾರ್ಷಿಕ ಆರಾಧನೆ ಪುರಾತನ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದೆ. ಶಿರ್ವ ಸೊರ್ಪು ಶ್ರೀಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಗುರಿಕಾರರಿಗೆ ಮಾತ್ರ ಸನ್ನಿಧಿಯಲ್ಲಿ ತಂಪೆರೆಯುವ ಪೂಜೆ ಸಲ್ಲಿಸುವ ಅಧಿಕಾರವಿದ್ದು , ಈ ನಾಗಬನದಲ್ಲಿ ಮಾತ್ರ ತುಳು ಬೇಷ ತಿಂಗಳ ಮೊದಲ ಗುರುವಾರ ನಾಗಾರಾಧನೆ ನಡೆಯುವುದು ಕರಾವಳಿಯಲ್ಲಿ ವಿಶೇಷವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.