ಕರಕುಶಲಕರ್ಮಿಗಳಿಗೆ ಗೌರವ = ಪರಂಪರೆಗೆ ಗೌರವ

ಸಿಸಿಐ ಪ್ರಶಸ್ತಿ ವಿತರಿಸಿ ಡಾ| ಸಂಧ್ಯಾ ಪೈ

Team Udayavani, Apr 3, 2019, 12:15 PM IST

020419Astro05

ಉಡುಪಿ: ಕರಕುಶಲಕರ್ಮಿ ಗಳನ್ನು ಸಮ್ಮಾನಿಸುವುದೆಂದರೆ ನಮ್ಮ
ಪರಂಪರೆ, ಸಂಸ್ಕೃತಿಯನ್ನು ಸಮ್ಮಾನಿಸಿ ದಂತೆ ಎಂದು “ತರಂಗ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಬಣ್ಣಿಸಿದರು.
ಮಂಗಳವಾರ ಮಣಿಪಾಲದಲ್ಲಿ ನಡೆದ ಚೆನ್ನೈಯ ಭಾರತೀಯ ಕರಕುಶಲ ಮಂಡಳಿ (ಸಿಸಿಐ) ವಾರ್ಷಿಕ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿದ ಅವರು, ಕರಕುಶಲ ವೃತ್ತಿಪರರನ್ನು ಗುರುತಿಸದೆ ಹೋದರೆ ಮತ್ತು ಮುಂದಿನ ಪೀಳಿಗೆಗೆ ಇದನ್ನು ಹಸ್ತಾಂತರಿಸದಿದ್ದರೆ ಭವಿಷ್ಯದಲ್ಲಿ ಇದಿಲ್ಲವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಸಿಸಿಐ ಅಧ್ಯಕ್ಷೆ ಗೀತಾರಾಮ್‌ ವಹಿಸಿದ್ದರು. ವಿವಿಧ ಸಾಧಕ ಕರಕುಶಲಕರ್ಮಿಗಳಾದ ಮಧ್ಯಪ್ರದೇಶದ ಹಾಜಿ ಇಬ್ರಾಹಿಂ ಕತ್ರಿ, ಬೆಂಗಳೂರಿನ ಎನ್‌. ಗಣೇಶ್‌, ಅಹ್ಮದಾಬಾದ್‌ನ ಕಾರ್ತಿಕ್‌ ಚೌಹಾಣ್‌, ರಾಜಸ್ಥಾನ ಜೈಪುರದ ಮೋಹಿತ್‌ ಜಾಂಗೇಡ್‌, ತಮಿಳುನಾಡು ಕಾರೈಕುಡಿಯ ಎಸ್‌.ಪಿ. ಮುಖಯ್ಯ, ಪಶ್ಚಿಮ ಬಂಗಾಲ ನಾಡಿಯಾದ ಬರೇನ್‌ಕುಮಾರ್‌ ಬಸಿಕ್‌, ಒಡಿಶಾ ಪುರಿಯ ಪ್ರಶಾಂತ್‌ ಮಹಾರಾಣ ಅವರನ್ನು ತಲಾ 10,000 ರೂ., ಶಾಲು, ಹಾರವನ್ನು ಒಳಗೊಂಡ ವಾರ್ಷಿಕ ಪ್ರಶಸ್ತಿಗಳೊಂದಿಗೆ ಪುರಸ್ಕರಿಸ ಲಾಯಿತು. ಸಿಸಿಐ ಮಾಜಿ ಅಧ್ಯಕ್ಷೆ ಉಷಾ ಕೃಷ್ಣ ಸ್ವಾಗತಿಸಿ ಸುಧಾ ರವಿ ವಂದಿಸಿದರು.

ನೈಸರ್ಗಿಕ ಬುದ್ಧಿವಂತರು
ನಾವು ರ್‍ಯಾಂಕ್‌ ಗಳಿಸಿದವರನ್ನು ಗೌರವಿಸುತ್ತೇವೆ. ಬುದ್ಧಿಮತ್ತೆ ಹೊಂದಿದವರು ಸ್ಮರಣ ಶಕ್ತಿಯಿಂದ ಸಾಮರ್ಥ್ಯವನ್ನು ತೋರಿಸುತ್ತಾರೆ. ಕರಕುಶಲಕರ್ಮಿಗಳಾದರೋ ನೈಸರ್ಗಿಕ ಬುದ್ಧಿವಂತರು ಎಂದು ಕರೆಯಬಹುದು. ಅವರು ಸಹಜವಾದ ನೈಸರ್ಗಿಕ ಭಾವನೆಗಳನ್ನು ಸ್ಮರಣೀಯವಾಗುವಂತೆ ಮತ್ತು ಕಣ್ಣಿಗೆ ಕಾಣುವಂತೆ ಸೃಷ್ಟಿಸುತ್ತಾರೆ. ಈಗ ಮಕ್ಕಳಿಗೆ ನಡೆಯುತ್ತಿರುವ ವಿವಿಧ ಶಿಬಿರಗಳಲ್ಲಿ ಇಂತಹ ಕಲೆಗಳನ್ನೂ ಪರಿಚಯಿಸಬೇಕು. ನಾವೀಗ ಹಣ, ಐಷಾರಾಮಿತನ, ಅಂತಸ್ತು, ಅಧಿಕಾರಗಳ ಹಿಂದೆ ಹೋಗುತ್ತಿರುವುದರಿಂದ ಕರಕುಶಲಕಲೆಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸದೆ ಹೋದರೆ ಈ ಕಲೆ ಉಳಿಯುವುದಿಲ್ಲ ಎಂದರು.

ಟಾಪ್ ನ್ಯೂಸ್

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Udupi: ಕಲ್ಸಂಕ ಜಂಕ್ಷನ್‌; ಹಗಲು-ರಾತ್ರಿ ಟ್ರಾಫಿಕ್‌ ಕಿರಿಕಿರಿ

7(2

Padubidri: ಪಲಿಮಾರು ಉಪ್ಪು ನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ!

3

Karkala: ಬೀದಿ ವ್ಯಾಪಾರಿಗಳಿಂದ ಸುಗಮ ಸಂಚಾರಕ್ಕೆ ಅಡ್ಡಿ

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

puttige-6-

Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.