ಬಿದಿರು ಬೆಳೆದರೆ 50 ಸಾವಿರ ರೂ. ಪ್ರೋತ್ಸಾಹ ಧನ
ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಉತ್ತೇಜನ
Team Udayavani, Oct 15, 2020, 5:46 AM IST
ಕಾರ್ಕಳ: ಆರ್ಥಿಕ ಸಂಕಷ್ಟದ ಜತೆಗೆ ಉದ್ಯೋಗ ಸಮಸ್ಯೆಗೆ ಸಿಲುಕಿರುವ ಕೃಷಿಕರಿಗೆ ಕೇಂದ್ರ ಸರಕಾರ ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಬಿದಿರು ಬೆಳೆಗೆ ಪ್ರೋತ್ಸಾಹ ನೀಡುತ್ತಿದ್ದು, ಕೃಷಿ ಪ್ರೋತ್ಸಾಹ ಯೋಜನೆಯಡಿ ಸಹಾಯ ಧನವನ್ನೂ ಒದಗಿಸುತ್ತಿದೆ.
ರಾಷ್ಟ್ರೀಯ ಬಿದಿರು ಮಿಷನ್ ಯೋಜನೆ ಯಡಿ 2010-21ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯದ 60:40 ಅನುಪಾತದಲ್ಲಿ 2091.64 ರೂ. ಮೊತ್ತದ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ನೀಡಲಾಗಿದೆ. ವಿವಿಧ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗಗಳಿಗೆ ಭೌತಿಕ ಮತ್ತು ಆರ್ಥಿಕ ಗುರಿ ಹಂಚಿಕೆ ಮಾಡಿದೆ.
ಪ್ರತಿ ಸಸಿಗೆ 120 ರೂ. ನಿರ್ವಹಣೆ ವೆಚ್ಚ
ಪ್ರತಿ ಸಸಿಗೆ 120 ರೂ. ನಿರ್ವಹಣೆ ಹಣವನ್ನು ಬದುಕುಳಿದ ಸಸಿಗಳ ಅಧಾರದ ಮೇಲೆ ರೈತರಿಗೆ ನೀಡಲಾಗುತ್ತದೆ. ಪ್ರತಿ ಹೆಕ್ಟೇರಿಗೆ 375ರಿಂದ 450 ಸಸಿಗಳನ್ನು ನೆಡುವುದು. ಇದರಲ್ಲಿ 260 ಸಸಿಗಳು ಟಿಶ್ಯೂ ಕಲ್ಚರ್ ಒರಿಜಿನ್‌ನಿಂದ ಶಿಫಾರಸು ಪಡೆದ ಸಸಿಗಳಾಗಿರಬೇಕು. ಉಳಿದ 140 ಸಸಿಗಳನ್ನು ಸ್ಥಳಿಯ ನರ್ಸರಿಗಳಿಂದ ಪಡೆಯಬೇಕಿದೆ.
2018ರಲ್ಲಿ ಮರು ಚಾಲನೆ
ಕೇಂದ್ರ ಸರಕಾರ 2018ರಲ್ಲಿ ರಾಜ್ಯಗಳ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಮಿಷನ್‌ಗೆ ಮರು ಚಾಲನೆ ನೀಡಿತ್ತು. ಬಿದಿರು ಬೆಳೆ ಯಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಹಣ ಮೀಸಲಿಡುತ್ತ ಬಂದಿದೆ. ವಿವಿಧ ರಾಜ್ಯಗಳು ಬಿದಿರು ಬೆಳೆಸಲು ಯೋಜನೆಗಳನ್ನು ಪ್ರತಿ ವರ್ಷ ರೂಪಿಸುತ್ತಿವೆ. ಕುಂದಾಪುರ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಸುಮಾರು 1125 ಹೆಕ್ಟೇರ್ ಬಿದಿರು ಬೆಳೆಯಲು ಯೋಜನೆ ರೂಪಿಸಲಾಗಿದೆ.
2 ಹೆಕ್ಟೇರ್ ಭೂಮಿ ಮಿತಿ
ಬಿದಿರು ಬೆಳೆಯಲು ಯಾವುದೇ ಮಿತಿ ಇರುವುದಿಲ್ಲ. ಸಹಾಯಧನ ಪಡೆಯಲು 2 ಹೆಕ್ಟೇರ್‌ನ ಮಿತಿಯಿದೆ. ರೈತರು ಪಹಣಿಯಲ್ಲಿನ ಸರ್ವೆ ನಂಬರಿನ ಆಧಾರಿತ ಕನಿಷ್ಠ 400 ಬಿದಿರು ಸಸಿ ನೆಟ್ಟಲ್ಲಿ ಸಹಾಯಧನ ಸಿಗುತ್ತದೆ. ಒಂದೇ ಸ್ಥಳದಲ್ಲಿ ಅರಣ್ಯ ಕೃಷಿಯನ್ನಾಗಿ 1 ಎಕರೆ, ಅರ್ಧ ಎಕರೆ, ಎರಡು ಎಕರೆ ಹೀಗೆ ಎಷ್ಟೇ ಪ್ರದೇಶದಲ್ಲಿ ನಾಟಿ ಮಾಡಿಕೊಂಡಿದ್ದರೂ ಸಹಾಯಧನ ಸಿಗುತ್ತದೆ. 3 ವರ್ಷದಲ್ಲಿ 3 ಹಂತದಲ್ಲಿ ದೊರಕುತ್ತದೆ. ನಾಟಿ ಮಾಡಿದ ಗಿಡಗಳು ಶೇ. 100 ಬೆಳೆದಿರಬೇಕು. ಗಿಡಗಳು ಸತ್ತು ಹೋದಲ್ಲಿ ಅಥವಾ ಬೆಳವಣಿಗೆ ಆಗದೇ ಇದ್ದಲ್ಲಿ ಬದಲಿ ಗಿಡ ನಾಟಿ ಮಾಡಬೇಕಾಗುತ್ತದೆ.
ಸಾಮಾನ್ಯ ಬಳಕೆಯ ವಸ್ತು!
ಬಿದಿರು ಉತ್ಪನ್ನಗಳ ವಹಿವಾಟು ಹಳ್ಳಿಗಳಲ್ಲಿ ಅಧಿಕ. ಬಿದಿರಿನ ಸಲಾಕೆ, ಬಿದಿರಿನ ಪಕ್ಕಾಸು ಬಳಕೆ ಒಂದು ಕಾಲದಲ್ಲಿ ಸಾಮಾನ್ಯವಾಗಿತ್ತು. ಕಾಲ ಕ್ರಮೇಣ ಮರ ಬಳಕೆ, ತಾರಸಿ ಮನೆಗಳು ಬಂದುದರಿಂದ ಬಿದಿರಿನ ಮನೆಗಳು ಕಾಣೆಯಾಗತೊಡಗಿವೆ. ಕೆಲ ಕಡೆಗಳಲ್ಲಿ ಅಲಂಕಾರಿನ ಮನೆಗಳಿಗೆ ಬಿದಿರನ್ನು ಈಗಲೂ ಉಪಯೋಗಿಸಲಾಗುತ್ತಿದೆ. ಬಿದಿರು ಗುಡ್ಡಗಾಡುಗಳಲ್ಲಿ ಬೆಳೆಯುವ ನೈಸರ್ಗಿಕ ಬೆಳೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿದಿರು ಕಾಣಲು ಸಾಧ್ಯ.
ಅರ್ಜಿ ಸಲ್ಲಿಸುವ ವಿಧಾನ
ಬಿದಿರು ಬೆಳೆಯಲು ಇಚ್ಛಿಸುವ ರೈತರು ಆನ್‌ಲೈನ್‌ನ ಮೂಲಕ ಅರ್ಜಿ ಹಾಕಬೇಕು. ಆನ್‌ಲೈನ್ ಅರ್ಜಿ ಖಾತರಿಪಡಿಸಿಕೊಂಡ ಬಳಿಕ ಲಿಖೀತ ಅರ್ಜಿಯನ್ನು ಹೆಸರು, ವಿಳಾಸ, ಸರ್ವೇ ನಂಬರ್, ವಿಸ್ತೀರ್ಣ, ವೈಯಕ್ತಿಕ ಬ್ಯಾಂಕ್ ಖಾತೆ ಸಹಿತ ಅಗತ್ಯ ವಿವರಗಳ ದಾಖಲೆ ಗಳೊಂದಿಗೆ ತಾ| ಅರಣ್ಯಾಧಿಕಾರಿ ಗಳಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿದ ಬಿದಿರು ಆಕರ್ಷಣೆ
ವಿನಾಶದ ಅಂಚಿನಲ್ಲಿರುವ ಬಿದಿರನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಅರಣ್ಯ ಇಲಾಖೆ ಮೂಲಕ ಪ್ರಯತ್ನ ನಡೆಸುತ್ತಿದೆ. ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ. ಕೇರಳ, ತಮಿಳುನಾಡು, ಮಹಾರಾಷ್ಟ್ರ ದಲ್ಲಿ ಹೆಚ್ಚು ಕೃಷಿಕರು ಇದರ ಪ್ರಯೋ ಜನವನ್ನು ಪಡೆದು ಕೊಂಡಿ¨ªಾರೆ. ಕರಾವಳಿ ಕೃಷಿಕರು ಬಿದಿರು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನುತ್ತಿದ್ದಾರೆ ಅಧಿಕಾರಿಗಳು.
ಅಂಕಿಅಂಶ
ಗರಿಷ್ಠ ಸಸಿಗಳು- 375ರಿಂದ 450
ಅವಧಿ-3ವರ್ಷ
ಪ್ರತಿ ಹೆಕ್ಟೇರಿಗೆ
ಒಟ್ಟು ಸಹಾಯಧನ-50 ಸಾವಿರ ರೂ.
ಮೊದಲ ವರ್ಷ-25 ಸಾವಿರ ರೂ.
ಎರಡನೇ ವರ್ಷ-15 ಸಾವಿರ ರೂ.
ಮೂರನೇ ವರ್ಷ-10 ಸಾವಿರ ರೂ.
ಅನ್‌ಲೈನ್ ವಿಳಾಸ- www.nbm.nic.in
ಆರ್ಥಿಕ ಸುಧಾರಣೆ
ಬಿದಿರು ಬೇಸಾಯಕ್ಕೆ ಸರಕಾರ ಅರಣ್ಯ ಇಲಾಖೆ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಕ್ರಷಿ ಭೂಮಿ ಹೊಂದಿದ ಆಸಕ್ತಿವುಳ್ಳ ಕೃಷಿಕರು ಇದರ ಸದುಪಯೋಪ ಪಡೆದು ಕೊಳ್ಳಬಹುದು. ಬಿದಿರಿ ನಿಂದ ಆರ್ಥಿಕ ಸುಧಾರಣೆ ಸಾಧ್ಯವಿದೆ.
-ವಾರಿಜಾಕ್ಷಿ, ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ಕಾರ್ಕಳ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್