Bantakal ತಾಂತ್ರಿಕ ಕಾಲೇಜು; ISTE ಘಟಕದ ಅತ್ಯುತ್ತಮ ISTE ಫ್ಯಾಕಲ್ಟಿ ಚಾಪ್ಟರ್ ಪ್ರಶಸ್ತಿ
Team Udayavani, Jun 26, 2024, 4:19 PM IST
ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐಎಸ್‌ಟಿಇ ಬೋಧಕ ಘಟಕಕ್ಕೆ ಪ್ರತಿಷ್ಠಿತ ಕರ್ನಾಟಕ ರಾಜ್ಯ ವಿಭಾಗದ ಉತ್ತಮ ಐಎಸ್‌ಟಿಇ ಫ್ಯಾಕಲ್ಟಿ ಚಾಪ್ಟರ್ ಘಟಕ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಜೂ. 22ರಂದು ಭುವನೇಶ್ವರಮ್‌ನ ಕಳಿಂಗ ಇನ್ಸ್ಟಿಟ್ಯೂಟ್‌ಆಫ್ ಸೋಶಿಯಲ್ ಸೈನ್ಸ್‌ನಲ್ಲಿ ನೆರವೇರಿದ್ದು, ಈ ಸಂದರ್ಭದಲ್ಲಿ ನಡೆದ 53ನೇ ಐಎಸ್‌ಟಿಇ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಶಸ್ತಿಯನ್ನು ಕಾಲೇಜಿಗೆ ನೀಡಿ ಗೌರವಿಸಲಾಯಿತು.
ಕಾಲೇಜಿನ ಐಎಸ್‌ಟಿಇ ಅಧ್ಯಾಪಕರ ಘಟಕ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ 2022-23ನೇ ಸಾಲಿನಲ್ಲಿ ನಡೆಸಿದ ಹಲವಾರು ಕಾರ್ಯಕ್ರಮಗಳ ಆಧಾರದ ಮೇಲೆ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಐಎಸ್‌ಟಿಇ ವತಿಯಿಂದ ನೀಡಲಾಗಿದೆ. ಸಂಸ್ಥೆಯ ಪರವಾಗಿ ಐಎಸ್‌ಟಿಇ ಘಟಕದ ಸಂಯೋಜಕ ಚೇತನ್.ಆರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಎರಡನೇ ಬಾರಿ ಸಂಸ್ಥೆಗೆ ಈ ಪ್ರಶಸ್ತಿ ದೊರಕಿರುವುದಕ್ಕೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಕಾರ್ಯದರ್ಶಿ ರತ್ನಕುಮಾರ್ ಮತ್ತು ಪ್ರಾಂಶುಪಾಲ ಡಾ|ತಿರುಮಲೇಶ್ವರ ಭಟ್‌ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.