ಬಂಟಕಲ್ಲು; ಬೃಹತ್ ಮಾವಿನ ಮರದ ಗೆಲ್ಲು ಮುರಿತ; ಸ್ವಲ್ಪದರಲ್ಲೆ ತಪ್ಪಿದ ಅನಾಹುತ
ವಿದ್ಯುತ್ ವ್ಯತ್ಯಯ
Team Udayavani, Feb 24, 2023, 9:55 PM IST
ಶಿರ್ವ: ಬಂಟಕಲ್ಲು ಪೇಟೆ ಬಸ್ಸು ನಿಲ್ದಾಣದ ಹಿಂದುಗಡೆ ಶುಕ್ರವಾರ ರಾತ್ರಿ 8.45 ರ ವೇಳೆ ಬೃಹತ್ ಮಾವಿನ ಮರದ ಗೆಲ್ಲು ಮುರಿದು ಬಿದ್ದು ವಿದ್ಯುತ್ ಕಡಿತಗೊಂಡಿದೆ.
2 ವಿದ್ಯುತ್ ಕಂಬಗಳು ವಾಲಿಕೊಂಡಿದ್ದು ಎಚ್.ಟಿ ಲೈನಿನ ವಿದ್ಯುತ್ ತಂತಿಗಳು ಕಡಿತಗೊಂಡಿವೆ. ದ್ವಿಚಕ್ರ ವಾಹನವನ್ನು ಅಂಗಡಿಯ ಎದುರು ನಿಲ್ಲಿಸಿ ಸಾಮಾನು ಖರೀದಿಸಲು ಅಂಗಡಿಗೆ ತೆರಳಿದ ಸಂಧರ್ಭ ಆ ವಾಹನದ ಮೇಲೆ ಕಡಿತಗೊಂಡ ವಿದ್ಯುತ್ ತಂತಿಗಳು ಹಾಗೂ ಅದರೊಂದಿಗಿನ ಭಾರವಾದ ಉಪಕರಣ ಬಿದ್ದಿದ್ದು ತಕ್ಷಣ ವಿದ್ಯುತ್ ಕಡಿತಗೊಂಡು ಸ್ವಲ್ಪದರಲ್ಲೆ ದೊಡ್ಡ ಅನಾಹುತ ತಪ್ಪಿದೆ.
ಬಸ್ಸು ನಿಲ್ದಾಣದ ಹಿಂದುಗಡೆ ನಿಲ್ಲಿಸಿದ್ದ ದ್ವಿಚಕ್ರವಾಹನಗಳಿಗೂ ಹಾನಿಯಾಗಿದೆ. ಮೆಸ್ಕಾಂ ಸಿಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಂಟಕಲ್ಲು ಅಸುಪಾಸು ವಿದ್ಯುತ್ ಕಡಿತಗೊಂಡಿದೆ.
ಸ್ಥಳೀಯ ಗ್ರಾ. ಪಂ. ಸದಸ್ಯ ಕೆ ಆರ್ ಪಾಟ್ಕರ್ ಹಾಗೂ ಸ್ಥಳೀಯರು ಮೆಸ್ಕಾಂ ಸಿಬಂದಿಯವರಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.