ವರ್ಷದೊಳಗೆ ನಗರಕ್ಕೆ ಸುಂದರ ಪಾರ್ಕ್
ಎಂಆರ್‌ಪಿಎಲ್‌ನ ಸಿಎಸ್‌ಆರ್ ಫ0ಡ್ ಬಳಕೆ, 1.5 ಕೋ.ರೂ. ವೆಚ್ಚ
Team Udayavani, Mar 25, 2022, 11:01 AM IST
ಕಾರ್ಕಳ: ತಾ|ನ ಹೃದಯ ಭಾಗದಲ್ಲಿ ಸುಂದರ ಉದ್ಯಾನವನ ನಿರ್ಮಾಣವಾಗಲಿದೆ. ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆ ಸಿಎಸ್‌ಆರ್ ಫಂಡ್‌ನಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪಾರ್ಕ್ ಅನ್ನು 1.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸುತ್ತಿದೆ. ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿ ಪ್ರಕ್ರಿಯೆಗಳು ಆರಂಭಗೊಂಡಿದೆ. ನಿರ್ಮಿತಿ ಕೇಂದ್ರದವರು ನಿರ್ಮಾಣ ಜವಾಬ್ದಾರಿ ವಹಿಸಿಕೊಳ್ಳಲಿರುವರು.
ಪೂರ್ಣಗೊಂಡ ಬಳಿಕ ಕುಕ್ಕುಂದೂರು ಗ್ರಾಮ ಪಂಚಾಯತ್‌ಗೆ ಹಸ್ತಾಂತರಗೊಂಡು ಅವರು ನಿರ್ವಹಿಸಲಿದ್ದಾರೆ. ಮುಂದಿನ 1 ವರ್ಷದೊಳಗೆ ಪಾರ್ಕ್ ನಿರ್ಮಾಣವಾಗಲಿದೆ. ಕಾರ್ಕಳಕ್ಕೆ ಸೌಭಾಗ್ಯ ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ಯಂತ್ರೋಪಕರಣ, ಕಟ್ಟಡ, ಶೌಚಾಲಯ ಹೀಗೆ ಹತ್ತಾರು ಸಮಾಜಮುಖೀ ಕಾರ್ಯಗಳಿಗೆ ಸಿಎಸ್‌ಆರ್ ಫಂಡ್ ನಿಂದ ಅನುದಾನ ಒದಗಿಸುತ್ತಿದೆ. ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ವಿವಿಧ ಕಾರ್ಯಗಳಿಗೆ ಅನುದಾನ ನೀಡಿದ್ದು, ಸಣ್ಣಪುಟ್ಟ ಪಾರ್ಕ್ ನಿರ್ಮಾಣಕ್ಕೂ ಆರ್ಥಿಕ ನೆರವು ನೀಡುತ್ತ ಬಂದಿದೆ. ಆದರೆ ಇದೇ ಮೊದಲ ಬಾರಿಗೆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಕಾರ್ಕಳ ಪಾರ್ಕ್‌ಗೆ ಹಣ ನೀಡುತ್ತಿದೆ.
ವರ್ಷದೊಳಗೆ ಸುಂದರ ಪಾರ್ಕ್
ನೆಲವನ್ನು ಸಿದ್ಧಗೊಳಿಸಿ, ಇಂಟರ್ ಲಾಕ್ ಅಳವಡಿಸಲಾಗುತ್ತದೆ. ಬಳಿಕ ಸುತ್ತಲೂ ಕಾಂಪೌಂಡ್ ವಾಲ್ ನಿರ್ಮಿಸಲಾಗುತ್ತಿದೆ. ಮಕ್ಕಳ ಆಟಿಕೆಗಳು, ಓಪನ್ ಜಿಮ್, ಕಿಡ್ಸ್ ಗಾರ್ಡನ್, ವಾಕಿಂಗ್ ಟ್ರ್ಯಾಕ್, ಹೂದೋಟ, ಉದ್ಯಾನವನ, ಬೆಂಚ್‌ಗಳು, ವಿವಿಧ ಮೂರ್ತಿಗಳು ಇದರಲ್ಲಿರಲಿದೆ. ಸಾರ್ವಜನಿಕರಿಗೆ, ಮಕ್ಕಳಿಗೆ ಅನುಕೂಲವಾಗುವ ಎಲ್ಲ ಪರಿಕರಗಳು ಇರಲಿದೆ.
ದೊಡ್ಡ ಪಾರ್ಕ್ ಆಗಲಿದೆ
ಕಾರ್ಕಳ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಕಡೆಗೆ ಸಾಗುತ್ತಿದೆ. ಆನೆಕೆರೆಯಲ್ಲಿ ಈಗಾಗಲೇ ಪಾರ್ಕ್ ಇದ್ದರೂ ಅದು ಸಣ್ಣ ಪಾರ್ಕ್ ಆಗಿದೆ. ತಾ| ಕಚೇರಿ ಬಳಿ ನಿರ್ಮಾಣವಾಗುತ್ತಿರುವುದು ದೊಡ್ಡ ಪ್ರಮಾಣದ ಪಾರ್ಕ್ ಆಗಲಿ.
ಎಲ್ಲಿ ಪಾರ್ಕ್ ನಿರ್ಮಾಣ?
ಬೈಪಾಸ್ ರಸ್ತೆ ಹಾದುಹೋಗುವ ಸರ್ವಜ್ಞ ವೃತ್ತದ ಬಳಿಯಿರುವ ತಾ| ಕಚೇರಿ, ತಾ.ಪಂ ಕಚೇರಿ, ತೋಟಗಾರಿಕೆ, ಕೃಷಿ ಇಲಾಖೆ, ಹತ್ತಿರದಲ್ಲೆ ಡಿವೈಎಸ್ಪಿ, ಸರ್ಕಲ್, ನಗರ, ಗ್ರಾಮಾಂತರ ಠಾಣೆ, ಮೆಸ್ಕಾಂ ಸಹಿತ ಆಸುಪಾಸಿನಲ್ಲಿ ವಿವಿಧ ಇಲಾಖೆಗಳ ಕಚೇರಿಗಳಿವೆ. ಈ ಎಲ್ಲ ಕಚೇರಿಗಳಿರುವ ಸನಿಹದಲ್ಲೆ ಪಾರ್ಕ್ ನಿರ್ಮಾಣವಾಗುತ್ತಿದೆ. ಸರ್ವಜ್ಞ ವೃತ್ತದಿಂದ ತಾ| ಕಚೇರಿಗೆ ತೆರಳುವ ಮಾರ್ಗದ ಬದಿಯಿಂದ ಪ್ರವೇಶ ಬಾಗಿಲು ಇರಲಿದೆ. ಪಕ್ಕದಲ್ಲೆ ಕುಕ್ಕುಂದೂರು ಗ್ರಾ.ಪಂ. ಕೂಡ ಇದ್ದು ಹುಡ್ಕೊ ಕಾಲನಿಯಂತಹ ಜನವಸತಿ ಪ್ರದೇಶಗಳಿವೆ. ನಗರ ಮತ್ತು ಗ್ರಾಮೀಣ ಭಾಗದ ಗಡಿಭಾಗದಲ್ಲಿ ಪಾರ್ಕ್ ನಿರ್ಮಾಣವಾಗುತ್ತಿರುವುದರಿಂದ ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗಲಿದೆ.
ದೊಡ್ಡ ಬಜೆಟ್‌ನಲ್ಲಿ ಪಾರ್ಕ್
ಎಂಆರ್‌ಪಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ಫಂಡ್ ಸಾಮಾಜಿಕ ಕಾರ್ಯದಲ್ಲಿ ಹಿಂದಿನಿಂದಲೂ ತೊಡಗಿಸಿಕೊಂಡು ನೆರವು ನೀಡುತ್ತ ಬಂದಿದೆ. ಸಣ್ಣ ಪುಟ್ಟ ಪಾರ್ಕ್ ನಿಮಾಣಕ್ಕೆ ಆರ್ಥಿಕ ನೆರವನ್ನು ಈ ಹಿಂದೆ ನೀಡಿದ್ದೆವು. ಆದರೆ ಇದೆ ಮೊದಲ ಬಾರಿಗೆ ಪಾರ್ಕ್ ನಿರ್ಮಾಣಕ್ಕೆಂದೇ ದೊಡ್ಡ ಮೊತ್ತವನ್ನು ಈ ಬಾರಿ ನೀಡುತ್ತಿದ್ದೇವೆ. -ಮಾಲತೇಶ್, ಜನರಲ್ ಮ್ಯಾನೇಜರ್, ಸಿಎಸ್‌ಆರ್ ಫಂಡ್ ವಿಭಾಗ, ಎಂಆರ್‌ಪಿಎಲ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.