ಸ್ಥಳೀಯ ಸರಕಾರಕ್ಕೆ ಪರಮಾಧಿಕಾರ ನೀಡಲು ಆಗ್ರಹ; ದೇವಿಪ್ರಸಾದ್‌ ಶೆಟ್ಟಿ ಬೆಳಪು


Team Udayavani, Aug 28, 2022, 6:20 AM IST

ಸ್ಥಳೀಯ ಸರಕಾರಕ್ಕೆ ಪರಮಾಧಿಕಾರ ನೀಡಲು ಆಗ್ರಹ; ದೇವಿಪ್ರಸಾದ್‌ ಶೆಟ್ಟಿ ಬೆಳಪುಸ್ಥಳೀಯ ಸರಕಾರಕ್ಕೆ ಪರಮಾಧಿಕಾರ ನೀಡಲು ಆಗ್ರಹ; ದೇವಿಪ್ರಸಾದ್‌ ಶೆಟ್ಟಿ ಬೆಳಪು

ಕಾಪು: ಗ್ರಾಮ ಪಂಚಾಯತ್‌ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಪ್ರಮುಖ ವ್ಯಕ್ತಿಗಳಾಗಿರುತ್ತಾರೆ. ಜನರು ಸಮಸ್ಯೆ ಎದುರಿಸಿದಾಗ ಶಾಸಕ, ಮಂತ್ರಿಗಳ ಹತ್ತಿರ ಹೋಗುವುದಿಲ್ಲ, ಗ್ರಾಮಸ್ಥರು ಮೊದಲು ಹೋಗಿ ತಮ್ಮ ಸಮಸ್ಯೆಗಳನ್ನು ಹೇಳುವುದು ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು ಅಥವಾ ಸದಸ್ಯರ ಬಳಿ. ಆದ್ದರಿಂದ ಸರಕಾರ ಗ್ರಾ.ಪಂ.ಗೆ ಇರುವ ಶಾಸನಬದ್ಧ ಅಧಿಕಾರವನ್ನು ಕಸಿಯಬಾರದು.
ಅವರಿಗೆ ಪರಿಪೂರ್ಣ ಅಧಿಕಾರ ನಿರ್ವ ಹಣೆಯ ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾ.ಪಂ. ಪ್ರತಿನಿಧಿಗಳ ಒಕ್ಕೂಟದ ಉಪಾಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಗ್ರಾ.ಪಂ. ವ್ಯಾಪ್ತಿಗೆ ಬರುವ ಅದೆಷ್ಟೊ ವಿಚಾರಗಳು ಸ್ಥಳೀಯಾಡಳಿತದ ಗಮನಕ್ಕೆ ಬಾರದೆ ನುಣುಚಿಕೊಳ್ಳುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿರುವ 5,628 ಗ್ರಾ.ಪಂ.ಗಳ ಪೈಕಿ 98,000 ಸದಸ್ಯರನ್ನೊಳಗೊಂಡ ಜನಪ್ರತಿನಿಧಿಗಳ ಅಧಿ
ಕಾರ ಮೊಟಕು ಗೊಳಿಸಿ ಪಂಚಾಯತ್‌ ಸದಸ್ಯರನ್ನು ಭ್ರಷ್ಟರೆಂಬ ಕಾರಣ ನೀಡಿ ಸದಸ್ಯರ ಹಕ್ಕನ್ನು ದಮನಿಸಲು ಸರಕಾರ ಪ್ರಯ ತ್ನಿಸಿದರೆ ರಾಜ್ಯಾದ್ಯಂತ ಪûಾತೀತವಾಗಿ ಪಂಚಾಯತ್‌ ಸದಸ್ಯರನ್ನು ಸಂಘಟಿಸಿ ವಿಧಾನಸೌದ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

1993ರಲ್ಲಿ ಜಾರಿಯಾದ ಪಂಚಾಯತ್‌ ರಾಜ್‌ ಕಾಯ್ದೆಯಲ್ಲಿ ಪ್ರತೀ ಗ್ರಾ.ಪಂ.ಗಳು ಸರಕಾರದಂತೆ ಸ್ವತಂತ್ರ ವಾಗಿ ಕಾರ್ಯಾಚರಿಸಬೇಕೆಂದಿದೆ. ಆದರೆ ಸರಕಾರಗಳು, ಮೇಲ್ಪಂಕ್ತಿಯ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಕೊಡಲಿಯೇಟು ನೀಡಲು ಪ್ರಯತ್ನಿಸಿ ವಿಫಲವಾಗಿದೆ.

ಪಂಚಾಯತ್‌ ರಾಜ್‌ ವ್ಯವಸ್ಥೆ ಉತ್ತಮ ಶೇಷ್ಠ ರಾಜಕಾರಣಿಗಳ ಸೃಷ್ಟಿಯ ಕೇಂದ್ರವಾಗಬೇಕು. ಗ್ರಾ. ಪಂ. ಅಧ್ಯಕ್ಷರನ್ನು, ಸದಸ್ಯರನ್ನು ಅಧಿಕಾರಿ ಶಾಹಿಗಳು ತೆಗೆದು ಹಾಕುವ ತಿದ್ದುಪಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ವಾಗುತ್ತದೆ. ಹಾಗಿದ್ದಲ್ಲಿ ಶಾಸಕರು- ಮಂತ್ರಿಗಳ ಸದಸ್ಯತ್ವ ತೆಗೆದು ಹಾಕುವ ಹಕ್ಕನ್ನು ಅಧಿಕಾರಿಗಳಿಗೆ ನೀಡುವ ಶಾಸನ ಜಾರಿಯಾಗಲಿ. ತಮ್ಮ ಭ್ರಷ್ಟಾಚಾರದ ಆರೋಪವನ್ನು ಪಂಚಾಯತ್‌ ಸದಸ್ಯರ ಮೇಲೆ ಹೇರಲು ಪ್ರಯತ್ನಿಸಿದರೆ ರಾಜ್ಯದ ಪ್ರತಿ ಹಳ್ಳಿಗಳಲ್ಲೂ ಸಂಘಟನಾತ್ಮಕ ಹೋರಾಟ ನಡೆಸಬೇಕಾದೀತೆಂದು ತಿಳಿಸಿದ್ದಾರೆ.

ಈ ಕುರಿತಾಗಿ ಸ್ಥಳೀಯ ಸರಕಾರದ ಸಮಸ್ಯೆಗಳಿಗೆ ಸ್ಪಂಧಿಸುವಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಜನ ಪ್ರತಿನಿಧಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಪರಮಾಧಿ ಕಾರ ನೀಡಲು ಮತ್ತು ಪಂಚಾಯತ್‌ ಸದಸ್ಯರನ್ನು ತೆಗೆದು ಹಾಕುವ ಪೂರಕವಾದ ಕಾಯ್ದೆ ತಿದ್ದುಪಡಿ ರದ್ದುಗೊಳಿಸಲು ಸರಕಾರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಇದರ ನೇತೃತ್ವ ವಹಿಸ ಬೇಕಿದೆ ಎಂದು ದೇವಿಪ್ರಸಾದ್‌ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

Hasana-HDK

By Poll: ಚನ್ನಪಟ್ಟಣ ಕ್ಷೇತ್ರಕ್ಕೆ ವಾರದೊಳಗೆ ಅಭ್ಯರ್ಥಿ ಘೋಷಣೆ: ಎಚ್‌.ಡಿ.ಕುಮಾರಸ್ವಾಮಿ

1-eq-weq

Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ

rain

Rain Alert: ರಾಜ್ಯದ 18 ಜಿಲ್ಲೆಗಳಲ್ಲಿ ಅ.17ರವರೆಗೆ ಭಾರೀ ಮಳೆ ಸಾಧ್ಯತೆ

1-goutham-gambhir

Gambhir; ಕೊಹ್ಲಿಗೆ ರನ್ ಗಳಿಸುವ ಹಸಿವಿದೆ, ಪ್ರತಿ ಪಂದ್ಯದ ಬಳಿಕ ತೀರ್ಪು ಅಗತ್ಯವಿಲ್ಲ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

By election: Liquor sale banned in Udupi district for two days

By election: ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Devadurga

Udupi: ಬಾಂಗ್ಲಾದೇಶದ ಅಕ್ರಮ ವಲಸಿಗರು ಪೊಲೀಸ್‌ ಕಸ್ಟಡಿಗೆ

By election: Liquor sale banned in Udupi district for two days

By election: ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ

Kambala: ನ. 27ಕ್ಕೆ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ

Kambala: ನ. 27ಕ್ಕೆ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ

8(1)

Santhekatte: ಪರ್ಯಾಯ ರಸ್ತೆಯೂ ಸಮಸ್ಯೆಗಳ ಆಗರ

7

Shutter Box: ಈಶಾನ್ಯದಲ್ಲಿ ಕರಾವಳಿ ಪ್ರವಾಸೋದ್ಯಮ ಪ್ರಚಾರ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ACT

Kundapura: ದನದ ಮಾಂಸ ಸಾಗಾಟ; ಓರ್ವನ ವಶ

Hasana-HDK

By Poll: ಚನ್ನಪಟ್ಟಣ ಕ್ಷೇತ್ರಕ್ಕೆ ವಾರದೊಳಗೆ ಅಭ್ಯರ್ಥಿ ಘೋಷಣೆ: ಎಚ್‌.ಡಿ.ಕುಮಾರಸ್ವಾಮಿ

1-wewewq

Actor Atul Parchure; ಖ್ಯಾತ ನಟ ಅತುಲ್ ಪರ್ಚುರೆ ವಿಧಿವಶ

de

Mangaluru: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆ

4

Mangaluru: ಪ್ರಾರ್ಥನೆಗೆ ಬಂದಿದ್ದ ವ್ಯಕ್ತಿ ಮೃತ್ಯು; ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.