Belapu;ತಯಾರಾಗುತ್ತಿವೆ ಲವ್ ಮಾರ್ಕ್ ಬ್ಯೂಟಿ ಸೋಪ್, ಕ್ಯಾಲ್ಸಿಬ್ರೈಟ್ ಟೂತ್‌ಪೇಸ್ಟ್
ದಕ್ಷಿಣ ಭಾರತದಲ್ಲಿ ಭಾರೀ ಬೇಡಿಕೆ, ಗ್ರಾಮೀಣ ಭಾಗದ ನಿರುದ್ಯೋಗಿಗಳ ಪಾಲಿಗೆ ವರದಾನ
Team Udayavani, Oct 7, 2023, 5:33 PM IST
ಕಾಪು: ಬೆಳಪು ಕೆಐಎಡಿಬಿ ಕೈಗಾರಿಕಾ ಪಾರ್ಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂಡೋಕೇರ್ ಇಂಡಿಯಾ ಪ್ರೈ. ಲಿ.ನ ಲವ್ ಮಾರ್ಕ್ ಬ್ಯೂಟಿ ಸೋಪ್ ಮತ್ತು ಕ್ಯಾಲ್ಸಿಬ್ರೈಟ್ ಟೂತ್ ಪೇಸ್ಟ್ ದಕ್ಷಿಣ ಭಾರತದಾದ್ಯಂತ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕರಾವಳಿ ಕರ್ನಾಟಕದ ಪ್ರಪ್ರಥಮ ಕೈಗಾರಿಕಾ ಸ್ಥಾವರದಲ್ಲಿ ಕಡಲೆ ಹಿಟ್ಟು, ಸ್ಯಾಂಡಲ್, ನೀಮ್, ಟರ್ಮರಿಕ್, ಕಾಫಿ ಪ್ಲೇವರ್, ಮ್ಯಾಂಗೋ ಬಟರ್, ಜಾಸ್ಮಿನ್ ಪೇಯ್ ಸಹಿತವಾಗಿ 20 ಕ್ಕೂ ಅಧಿಕ ಫ್ಲೆವರ್‌ಗಳಲ್ಲಿ ಲವ್ ಮಾರ್ಕ್ ಬ್ಯೂಟಿ ಸೋಪ್‌ಗ ಳನ್ನು ಉತ್ಪಾದಿಸಿ ಸ್ಯಾಚೆಟ್, ಬಾಕ್ಸ್‌ಗಳಲ್ಲಿ ತುಂಬಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಕಡಲೆಹಿಟ್ಟು ಸೋಪ್‌ಗೆ ಹೆಚ್ಚಿನ ಬೇಡಿಕೆಯಿದ್ದು ಪ್ರತೀ ತಿಂಗಳು ಲಕ್ಷಕ್ಕೂ ಅಧಿಕ ಸೋಪ್‌ಗಳು ಮಾರಾಟಗೊಳ್ಳುತ್ತಿವೆ.
ಆರು ರಾಜ್ಯಗಳಲ್ಲಿ ಬೇಡಿಕೆ
ಕರಾವಳಿ ಕರ್ನಾಟಕದ ಪ್ರಪ್ರಥಮ ಸೋಪ್ ಮತ್ತು ಟೂತ್ ಪೇಸ್ಟ್ ಉತ್ಪಾದನಾ ಘಟಕ ಇದಾಗಿದ್ದು ಲವ್ ಮಾರ್ಕ್ ಬ್ಯೂಟಿ ಸೋಪ್‌ಗಳಿಗೆ ಕರ್ನಾಟಕ ಮಾತ್ರವಲ್ಲದೇ ಕೇರಳ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಭಾರೀ ಬೇಡಿಕೆಯಿದ್ದರೆ, ಉತ್ತರ ಭಾಗದ ಕೆಲವು ಕಡೆಗಳಲ್ಲೂ ಬೇಡಿಕೆಯಿದೆ. ಲವ್ ಮಾರ್ಕ್ ಬ್ಯೂಟಿ ಸೋಪ್ ಮತ್ತು ಕ್ಯಾಲ್ಸಿಬ್ರೈಟ್ ಟೂತ್ ಪೇಸ್ಟ್ 250ಕ್ಕೂ ಅಧಿಕ ಡಿಸ್ಟ್ರಿಬ್ಯೂಟರ್‌ಗಳ ಮೂಲಕ 30 ಸಾವಿರಕ್ಕೂ ಅಧಿಕ ಶಾಪ್‌ಗಳಿಗೆ ರವಾನೆಯಾಗುತ್ತಿದೆ.
ಪರಿಸರ ಸಹ್ಯ ಸ್ಥಾವರ
ಸಂಪೂರ್ಣ ಸ್ವಯಂಚಾಲಿತ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಯಂತ್ರಗಳನ್ನು ಹೊಂದಿರುವ ಸ್ಥಾವರದಲ್ಲಿ ದಿನಕ್ಕೆ 24 ಟನ್‌ನಷ್ಟು ಸಾಬೂನು ಉತ್ಪಾದನೆಯಾಗುತ್ತಿದೆ. ಉತ್ಪಾದನಾ ಪ್ರಮಾಣವನ್ನು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ 72 ಟನ್‌ಗಳಿಗೆ ವಿಸ್ತರಿಸಲು ಅವಕಾಶವಿದೆ. ದಿನಕ್ಕೆ 8 ಟನ್‌ನಷ್ಟು ಟೂತ್ ಪೇಸ್ಟ್ ಉತ್ಪಾದನಾ ಸಾಮರ್ಥಯವನ್ನು ಹೊಂದಿದ್ದು ಬೇಡಿಕೆಗೆ ಅನುಗುಣವಾಗಿ 24 ಟನ್‌ಗಳಿಗೆ ವಿಸ್ತರಿಸಲು ಅವಕಾಶವಿದೆ. ಪ್ರತೀ ನಿಮಿಷಕ್ಕೆ 120 ಟೂತ್ ಪೇಸ್ಟ್ ಟ್ಯೂಬ್‌ಗಳನ್ನು ಉತ್ಪಾದಿಸುವ ಮತ್ತು ಪ್ಯಾಕ್ ಮಾಡುವ ಸ್ವಯಂಚಾಲಿತ ಪ್ಯಾಕೇಜಿಂಗ್ ಯಂತ್ರಗಳನ್ನು ಒಳಗೊಂಡಿದೆ. ಸ್ಥಾವರದಲ್ಲಿ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಅತ್ಯಾಧುನಿಕ ಗುಣಮಟ್ಟದ ಉಪಕರಣ ಮತ್ತು ಸೂಕ್ಷ್ಮ ಜೀವ ವಿಜ್ಞಾನ ಪ್ರಯೋಗಾಲಯವಿದೆ. ಸುಮಾರು 1200 ಲೀ. ಸಾಮರ್ಥ್ಯದ ವಾಟರ್ ಪ್ಲಾಂಟ್, ಮಳೆ ನೀರು ಕೊಯ್ಲು ವ್ಯವಸ್ಥೆ, ಸ್ವತಂತ್ರ ಕೊಳಚೆ ನೀರು ಮತ್ತು ತ್ಯಾಜ್ಯ ಸಂಸ್ಕರಣಾ ಘಟಕವಿದ್ದು ಪರಿಸರ ಸಹ್ಯವಾಗಿಯೂ ಗುರುತಿಸಲ್ಪಟ್ಟಿದೆ.
ಗ್ರಾಮೀಣ ಜನರಿಗೆ ಉದ್ಯೋಗ
ಸ್ಥಾವರದಲ್ಲಿ 55-60 ಮಂದಿ ಉದ್ಯೋಗ ಮಾಡುತ್ತಿದ್ದು ಬೆಳಪು ಆಸುಪಾಸಿನವರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಮಾರುಕಟ್ಟೆ ಮತ್ತು ಪ್ರಸರಣ ವಿಭಾಗದಲ್ಲಿ 100ಕ್ಕೂ ಅಧಿಕ ಮಂದಿ ಕಾರ್ಯ ನಿರ್ವಹಿಸುತ್ತಿದ್ದು ಕೈಗಾರಿಕಾ ಘಟಕದಲ್ಲಿ ನಿರ್ವಹಣೆ, ಪ್ಯಾಕೇಂಜಿಗ್, ಮಾರುಕಟ್ಟೆ ವಿಭಾಗದಲ್ಲಿ ಸ್ಥಳೀಯರಿಗೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾವಕಾಶವನ್ನು ಒದಗಿಸಿಕೊಡುವ ಮೂಲಕ ಗ್ರಾಮೀಣ ಭಾಗದ ನಿರುದ್ಯೋಗಿಗಳ ಪಾಲಿಗೆ ವರದಾನವಾಗಿದೆ.
ಲೋಕಲ್ ಬ್ರ್ಯಾಂಡ್ ಪರಿಚಯಿಸುವ ಮಹತ್ವಾಕಾಂಕ್ಷೆಯಿತ್ತು
ದೇಶಕ್ಕೆ ಕರ್ನಾಟಕದ ಸ್ಥಳೀಯ ಬ್ರಾಂಡ್‌ನ್ನು ಪರಿಚಯಿಸುವ ಪರಿಸರ ಸ್ನೇಹಿ ಮತ್ತು ಜನಸ್ನೇಹಿಯಾಗುವ ಕೈಗಾರಿಕೆಯನ್ನು ಸ್ಥಾಪಿಸಬೇಕು. ಆ ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವಂತಾಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಬೆಳಪುವಿನಲ್ಲಿ ಹಿಂಡೋಕೇರ್ ಇಂಡಿಯಾ ಪ್ರೈ. ಲಿ. ಅನ್ನು ಪ್ರಾರಂಭಿಸಲಾಗಿದೆ. ನಿರೀಕ್ಷೆಯಂತೆ ಕಾರ್ಖಾನೆಯು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಲವ್ ಮಾರ್ಕ್ ಬ್ಯೂಟಿ ಸೋಪ್, ಕ್ಯಾಲ್ಸಿಬ್ರೈಟ್ ಟೂತ್ ಪೇಸ್ಟ್‌ಗೆ ಎಲ್ಲೆಡೆ ಉತ್ತಮ ಬೇಡಿಕೆ ಬರುತ್ತಿದೆ. ನಮ್ಮಲ್ಲೂ ಬಹಳಷ್ಟು ಮಂದಿ ಉದ್ಯೋಗವನ್ನೂ ಪಡೆಯುತ್ತಿದ್ದು ನಮ್ಮ ಉದ್ದೇಶ ಈಡೇರಿದೆ.
– ಕರ್ಸ್ಟನ್ ಫರಾಯಾಸ್, ಆಡಳಿತ ನಿರ್ದೇಶಕ, ಹಿಂಡೋಕೇರ್ ಇಂಡಿಯಾ ಪ್ರೈ. ಲಿ., ಬೆಳಪು
ಗ್ರಾಮಾಭಿವೃದ್ಧಿಯಲ್ಲಿ ಬೆಳಪು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಗಿ ಬೆಳೆದಿದೆ. ಕಳೆದ ಹತ್ತು ವರ್ಷಗಳಲ್ಲಿ ಶೈಕ್ಷಣಿಕ, ಕೈಗಾರಿಕೆ ಮತ್ತು ಪ್ರವಾಸೋದ್ಯಮವಾಗಿಯೂ ಗ್ರಾಮ ಗುರುತಿಸಲ್ಪಡುತ್ತಿದೆ. ಕೆಐಎಡಿಬಿ ಮೂಲಕವಾಗಿ 58 ಎಕ್ರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಾಣ ಮಾಡಿ, ಪರಿಸರ ಸಹ್ಯ ಮತ್ತು ಜನಸ್ನೇಹಿಯಾದ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ. ಪ್ರಥಮ ಸಂಸ್ಥೆಯಾಗಿ ಹಿಂಡೋಕೇರ್ ಇಂಡಿಯಾ ಪ್ರೈ.ಲಿ. ಸ್ಥಾಪನೆಯಾಗಿದ್ದು ಇಲ್ಲಿನ ಲವ್ ಮಾರ್ಕ್ ಬ್ಯೂಟಿ ಸೋಪ್ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವುದಕ್ಕೆ ಖುಷಿಯಾಗುತ್ತಿದೆ.
– ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.