![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 1, 2022, 12:03 PM IST
ಮಲ್ಪೆ: ಇಲ್ಲಿನ 3ನೇ ಹಂತದ ಮೀನುಗಾರಿಕೆ ಬಂದರಿನ ಬಾಪುತೋಟ ದಕ್ಕೆಗೆ ಹೋಗುವ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ರಸ್ತೆಯ ಬದಿಯಲ್ಲಿ ವಾರಾಹಿ ಕುಡಿಯುವ ನೀರಿನ ಪೈಪ್‌ಲೈನ್‌ಗಾಗಿ ಆಗೆತ ಮಾಡಿದ ಜಾಗದಲ್ಲಿ ದಿನನಿತ್ಯ ಅಪಘಾತಗಳು ನಡೆಯುತ್ತದೆ.
ಇದಕ್ಕೆ ಮುಖ್ಯ ಕಾರಣ ಅಗೆತ ಮಾಡಿ ಜಾಗವನ್ನು ಮುಚ್ಚಿ ರಸ್ತೆಯ ಉದ್ದಕ್ಕೆ ಸದ್ಯ ಜಲ್ಲಿ ಕಲ್ಲಿನ ರಾಶಿಯನ್ನು ಸುರಿಯಲಾಗಿದೆ. ದ್ವಿಚಕ್ರ ಸವಾರರು ರಸ್ತೆ ಬದಿಗೆ ಸರಿದರೆ ಬೈಕ್‌ನಿಂದ ಜಾರಿ ಬಿದ್ದು ಅಪಘಾತಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ ಬಿಟ್ಟಿದೆ.
ಕಳೆದ ಮೂರು ತಿಂಗಳ ಹಿಂದೆ ರಸ್ತೆಯ ಬದಿಯಲ್ಲಿ ವಾರಾಹಿಯ ಕುಡಿಯುವ ನೀರಿನ ಪೈಪ್‌ಲೈನ್ ಆಳವಡಿಸುವ ಕಾರ್ಯ ನಡೆದಿದೆ. 3ನೇ ಹಂತದ ಬಂದರಿನ ಆರಂಭದಿಂದ ಪಡುಕರೆ ಸೇತುವೆವರೆಗೆ ರಸ್ತೆಯನ್ನು ಅಗೆದು ಮುಚ್ಚಲಾಗಿತ್ತು. ಸಾಮಾನ್ಯವಾಗಿ ಆಗೆದ ರಸ್ತೆಯ ಮಣ್ಣನ್ನು ಸಮತಟ್ಟುಗೊಳಿಸಿ ರಸ್ತೆಯನ್ನು ಮೊದಲಿದ್ದಂತೆ ಮಾಡಿ ಹೋಗಬೇಕಾಗಿರುವುದು ಇಲಾಖೆಯ ಕೆಲಸ. ಆದರೆ ಇಲ್ಲಿ ಮಾತ್ರ ಡಾಮರು ಹಾಕದೇ ಜಲ್ಲಿ ಸುರಿದು ಹೋಗಿದ್ದರು ಎನ್ನಲಾಗಿದೆ.
ಮೀನುಗಾರಿಕೆ ಬಂದರು ರಸ್ತೆಯಾದ್ದರಿಂದ ರಾತ್ರಿ ಹಗಲೆನ್ನದೇ ಇಲ್ಲಿ ನಿತ್ಯ ಸಂಚಾರ ಇರುತ್ತದೆ. ಮಾತ್ರವಲ್ಲದೆ ವಾರಾಂತ್ಯದಲ್ಲಿ ಪಡುಕರೆ ಬೀಚ್‌ಗೆ ಹೋಗುವ ಪ್ರವಾಸಿಗರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಅಪಘಾತಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ.
ಶೀಘ್ರ ಕ್ರಮ
ವಾರಾಹಿ ಕುಡಿಯುವ ನೀರಿನ ಯೋಜನೆಗೆ ಕೆಲವು ಭಾಗದ ರಸ್ತೆಯನ್ನು ಅಗೆದಿದ್ದಾರೆ. ಅಗೆದ ರಸ್ತೆಯನ್ನು ಮೊದಲಿನಂತೆಯೇ ಸರಿಪಡಿಸಬೇಕಾದದ್ದು ಅದಕ್ಕೆ ಸಂಬಂಧಪಟ್ಟವರ ಕೆಲಸ. ವಾರದೊಳಗೆ ಅವರನ್ನು ಕರೆಸಿ ಮಲ್ಪೆ ಬಂದರು ಭಾಗದ ರಸ್ತೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. -ಸುಮಿತ್ರಾ ನಾಯಕ್, ಅಧ್ಯಕ್ಷರು, ಉಡುಪಿ ನಗರಸಭೆ
ನಿತ್ಯ ಅಪಘಾತ
ರಸ್ತೆ ಬದಿ ಅಗೆದ ಹೊಂಡದ ಮಣ್ಣು ಹಾಗೂ ಇದರ ಮೇಲೆ ಹಾಕಿದ ಜಲ್ಲಿ ರಾಶಿಯಿಂದಾಗಿ ಇಲ್ಲಿ ನಿತ್ಯ ಅಪಘಾತಗಳು ನಡೆಯುತ್ತವೆ. ಸಾಕಷ್ಟು ಮಂದಿ ಕೈಕಾಲು ಮುರಿದು ಕೊಂಡಿದ್ದಾರೆ. ಸಂಬಂಧಪಟ್ಟವರು ತತ್‌ಕ್ಷಣ ಸರಿಪಡಿಸಿಬೇಕು. -ಬೂದ ಪೂಜಾರಿ, ಸ್ಥಳೀಯ ಅಂಗಡಿ ಮಾಲಕರು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.