ಬಿಸಿ ಮುಟ್ಟಿಸಿದ ಐಸ್‌ಕ್ಯಾಂಡಿ
ನಾಲಿಗೆ ರುಚಿ ತಿನಿಸು: ಇರಲಿ ಸೂಕ್ತ ಎಚ್ಚರ
Team Udayavani, Mar 28, 2019, 6:31 AM IST
ಕುಂದಾಪುರ: ಬಿಸಿಲ ಬೇಗೆಗೆ ನಾಲಿಗೆ ತಂಪು ಮಾಡಲು ಐಸ್‌ಕ್ಯಾಂಡಿ ತಿಂದ ಕಾರಣಕ್ಕಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಕುಂದಾಪುರ, ಉಡುಪಿ ಹಾಗೂ ಕಾರ್ಕಳ ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ನೂರಾರು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಬೀದಿಬದಿ ಅಂಗಡಿಗಳಲ್ಲಿ ತೆರೆದಿಟ್ಟ, ಪ್ರಮಾಣೀಕೃತವಲ್ಲದ ಸಂಸ್ಥೆಯ ಆಹಾರ ಖರೀದಿಸುವವರು ತುಸು ಎಚ್ಚರಿಕೆ ವಹಿಸಬೇಕಿದೆ.
ಎಲ್ಲೆಲ್ಲಿ
ಉಡುಪಿ, ಕುಂದಾಪುರ, ಹಾಲಾಡಿ, ಕೋಟೇಶ್ವರ, ಬೆಳ್ವೆ, ಹೆಂಗವಳ್ಳಿ, ಬಿದ್ಕಲ್‌ಕಟ್ಟೆ, ನಾಲೂ¤ರು, ಕೊರ್ಗಿ, ಆವರ್ಸೆ, ಹಿಲಿಯಾಣ, ಗೋಳಿಯಂಗಡಿ, ಹೆಬ್ರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಾಂತಿ ಹಾಗೂ ಭೇದಿಯ ಕಾರಣದಿಂದ ಕೆಲವರು ದಾಖಲಾಗಿದ್ದು ಅನೇಕರು ಚೇತರಿಸಿಕೊಂಡಿದ್ದಾರೆ.
ಏನಾಯ್ತು?
ಹೆಂಗವಳ್ಳಿ ಗ್ರಾಮದ ಹೆಂಗವಳ್ಳಿ, ತೊಂಭತ್ತು, ಹಣೆಜೆಡ್ಡು, ಬೆಳ್ವೆ ಗ್ರಾಮದ ಬೆಳ್ವೆ, ಗುಮ್ಮೊàಲ, ಗೋಳಿಯಂಗಡಿ, ಆರ್ಡಿ, ಬಿಲ್ಲಾಡಿ, ಹೆಗ್ಗುಂಜೆ, ನಂಚಾರು, ಹೆಸ್ಕಾಂದ, ಆವರ್ಸೆ, ಹಿಲಿಯಾಣ, ಕೇಚೂರು, ಪರಿಸರದಲ್ಲಿ ಶನಿವಾರ ಹಾಗೂ ರವಿವಾರ ದ್ವಿಚÅವಾಹನಗಳಲ್ಲಿ ಮನೆಮನೆಗೆ ಮಾರಾಟ ಮಾಡಿಕೊಂಡು ಬಂದ ಐಸ್‌ಕ್ಯಾಂಡಿ ತಿಂದಿದ್ದೇ ಅನಾರೋಗ್ಯಕ್ಕೆ ಕಾರಣ ಎನ್ನಲಾಗಿದೆ.
ಆಹಾರ ಸುರಕ್ಷತಾ ಕಾಯ್ದೆ
ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಕಾಯ್ದೆ ಜಾರಿಯಾದ ಬಳಿಕ ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ಪ್ರಯೋಗಾಲಯಗಳನ್ನು ಉನ್ನತೀಕರಿಸಲಾ ಗಿದೆ.
ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿಯಲ್ಲಿ ಪ್ರಯೋಗಾಲಯಗಳಿವೆ. ಕಾಯ್ದೆಯ ನಿಯಮಾವಳಿಯ ಪ್ರಕಾರ ಪ್ರತಿ ತಾಲೂಕಿನ 5 ಮಾದರಿಗಳನ್ನು ತಿಂಗಳಿ ಗೊಮ್ಮೆ ಪರೀಕ್ಷಿಸಬೇಕಿದೆ. ಅಕ್ಕಿ, ಬೇಳೆ, ಹಿಟ್ಟು, ಬಿಸ್ಕೇಟ್, ಸೇವಿಸಲು ಸಿದ್ಧವಾದ ಪದಾರ್ಥ, ಬೇಕರಿ ತಿನಿಸು, ಚಿಪ್ಸ್, ತಂಪು ಪಾನೀಯದಂಥ ಕೆಲವು ಪದಾರ್ಥಗಳನ್ನು ಮಾತ್ರ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ.
ಮಾದರಿ
ಐಸ್ ಕ್ಯಾಂಡಿ ಪ್ರಕರಣದಲ್ಲಿ ಕೇಸು ದಾಖಲಾದರೂ ಬಂಧನ ಅಸಾಧ್ಯವಾಗಿದೆ. ಐಸ್‌ಕ್ಯಾಂಡಿ ತಯಾರಿಕಾ ಸಂಸ್ಥೆಯಿಂದ ಐಸ್‌ಕ್ಯಾಂಡಿಗಳನ್ನು ವಶಪಡಿಸಿಕೊಂಡಿದ್ದು ವೈದ್ಯಕೀಯ ಹಾಗೂ ಪ್ರಯೋಗಾಲಯದ ವರದಿಗಾಗಿ ಮಾದರಿ ಕಳುಹಿಸಲಾಗಿದೆ. ಇಲ್ಲಿ ತಯಾರಾದ ಕ್ಯಾಂಡಿಗಳಿಂದಲೇ ಅನಾರೋಗ್ಯವಾಗಿದೆ ಎಂದು ಪ್ರಯೋಗಾಲಯ ವರದಿ ಬಂದರಷ್ಟೇ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಸಾಧ್ಯ.
ಕಲುಷಿತ ನೀರು ಕಾರಣ?
ಐಸ್‌ಕ್ಯಾಂಡಿಯನ್ನು ಮಲ್ಪೆಯ ಕಲ್ಮಾಡಿಯಲ್ಲಿ ತಯಾರಿಸಿ ಮಾರಾಟ ಮಾಡಲಾಗಿದೆ. ಆದರೆ ಇದೇ ಕ್ಯಾಂಡಿಯಿಂದ ಅನಾರೋಗ್ಯವಾಗಿದೆ ಎಂದು ದೃಢಪಟ್ಟಿಲ್ಲ. ಅನಾರೋಗ್ಯಕ್ಕೆ ಕಾರಣ ಕಲುಷಿತ ನೀರು ಬಳಸಿರಬಹುದು, ಅಸುರಕ್ಷಿತ ಪ್ರದೇಶದಲ್ಲಿ ತಯಾರಿಸಿರಬಹುದು ಎಂಬ ಸಂಶಯಗಳಿವೆ. ಇದರ ವಿರುದ್ಧ ಆಹಾರ ಸುರಕ್ಷತಾ ಅಧಿಕಾರಿಗಳು ಕಠಿನ ಕ್ರಮ ಕೈಗೊಳ್ಳಬೇಕಾದ ಆಗತ್ಯವಿದೆ. ಇಲ್ಲದಿದ್ದರೆ ಬೇಸಗೆ ಬೇಗೆಗೆ ಜನ ಹಾಗೂ ರಜೆಯಲ್ಲಿ ಮಕ್ಕಳು ಇಂತಹ ಕ್ಯಾಂಡಿ ಮೋಹಕ್ಕೆ ಇನ್ನಷ್ಟು ಒಳಗಾಗಿ ಸಾಮೂಹಿಕವಾಗಿ ಅಸ್ವಸ್ಥರಾಗುವ ಸಾಧ್ಯತೆಗಳಿವೆ. ಐಸ್‌ಕ್ಯಾಂಡಿ ಎಂದಲ್ಲ ಬೀದಿಬದಿ ಮಾರಾಟವಾಗುವ, ಅಂಗಡಿಗಳಲ್ಲಿ ಪ್ರಮಾಣೀಕೃತವಲ್ಲದ ಯಾವುದೇ ತಯಾರಕ ಸಂಸ್ಥೆಯಿಂದ ಮಾಡಲ್ಪಟ್ಟ ಆಹಾರ ಪದಾರ್ಥ ಖರೀದಿಸುವಾಗಲೂ ಈ ಎಚ್ಚರ ನಾಗಕರಿಕರಲ್ಲಿ ಇರಬೇಕಿದೆ. ಅಧಿಕಾರಿಗಳು ಕೂಡ ಇಂತಹ ಆಹಾರ ತಯಾರಿ ಹಾಗೂ ಮಾರಾಟ ಮಾಡುವವರ ವಿರುದ್ಧ ಕಠಿನ ಕ್ರಮಕ್ಕೆ ಮುಂದಾಗಬೇಕಿದೆ.
ಸಾರ್ವಜನಿಕರು ಗಮನಿಸಿ
ಯಾವುದೇ ತೆರೆದ ಆಹಾರ ಸೇವಿಸಬಾರದು, ಯಾವುದೇ ತಯಾರಕರ ಹೆಸರಿಲ್ಲದ, ಅವಧಿ ಮೀರುವ ದಿನಾಂಕ ನಮೂದಿಸದ ಆಹಾರವನ್ನು ಖರೀದಿಸಬಾರದು, ಯಾವುದೇ ಆಹಾರ ಉದ್ಯಮ ನಡೆಸುವವರು
ಎಫ್.ಎಸ್.ಎಸ್.ಎ.ಐ. ಪರವಾನಗಿ/ ನೊಂದಣಿ ಮಾಡಿಸಿರಲೇಬೇಕು,
ಯಾವುದೇ ಅನಧಿಕೃತ ಆಹಾರ ತಯಾರಿಕಾ ಘಟಕಗಳ ಮಾಹಿತಿಯನ್ನು ಉಡುಪಿ ಜಿಲ್ಲೆಯ ಹಿರಿಯ ಆಹಾರ ಸುರಕ್ಷತಾಧಿಕಾರಿಯವರಿಗೆ ಅಥವಾ ಕುಂದಾಪುರ, ಕಾರ್ಕಳದ ತಾಲೂಕು ಆರೋಗ್ಯಾಧಿಕಾರಿಗೆ ತಿಳಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು .
– ಅಂಕಿತಾಧಿಕಾರಿ, ಉಡುಪಿ ಆಹಾರ ಸುರಕ್ಷತಾ ವಿಭಾಗ
ಮಾರುವಂತಿಲ್ಲ
ಇಂತಹ ಪ್ರಕರಣ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. “ಆಹಾರ ಪದಾರ್ಥ ಅಸುರಕ್ಷಿತ ಅಥವಾ ಕಲಬೆರಕೆ’ ಖಚಿತವಾದರೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಕಲಬೆರಕೆ ಸಾಬೀತಾದಲ್ಲಿ ಕಠಿನ ಶಿಕ್ಷೆಗೆ ಅವಕಾಶವಿದೆ.
– ರವಿಕಿರಣ್ ಮುಡೇìಶ್ವರ, ನ್ಯಾಯವಾದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.