ಜಿಲ್ಲೆಯಲ್ಲಿ ರಕ್ತದ ಕೊರತೆ: ದಾನಿಗಳ ನಿರೀಕ್ಷೆಯಲ್ಲಿ ರಕ್ತನಿಧಿ
Team Udayavani, Apr 24, 2020, 6:14 AM IST
ಸಾಂದರ್ಭಿಕ ಚಿತ್ರ..
ಉಡುಪಿ: ಲಾಕ್‌ಡೌನ್‌ನಿಂದ ಸಂಘ -ಸಂಸ್ಥೆಗಳು ನಡೆಸುತ್ತಿದ್ದ ರಕ್ತದಾನ ಕಾರ್ಯಕ್ರಮಗಳು ನಿಂತು ಸದ್ಯ ಜಿಲ್ಲೆಯ ರಕ್ತನಿಧಿಗಳಲ್ಲಿ ರಕ್ತದ ಅಭಾವ ಉಂಟಾಗಿದೆ. ಜಿಲ್ಲಾ ಮತ್ತು ಮಣಿಪಾಲ ಆಸ್ಪತ್ರೆಯ ರಕ್ತ ನಿಧಿಯಲ್ಲಿ ಎಂದಿಗಿಂತ ಕಡಿಮೆ ರಕ್ತ ಸಂಗ್ರಹವಾಗುತ್ತಿದೆ.
ತಿಂಗಳಲ್ಲಿ ಸಾವಿರಕ್ಕೂ ಹೆಚ್ಚಿನ ರಕ್ತದ ಸಂಗ್ರಹ. ಸ್ವಯಂಪ್ರೇರಿತ ರಕ್ತದಾನಿಗಳು, ಕ್ಯಾಂಪ್ ಮತ್ತು ವಿದ್ಯಾರ್ಥಿಗಳಿಂದ ಆಗುತ್ತಿದ್ದವು. ಆದರೆ ಸದ್ಯ ರಕ್ತ ಸಂಗ್ರಹಣೆ ಶೇ. 60 ರಷ್ಟು ಕಡಿಮೆಯಾಗಿದೆ. ಇದು ತುರ್ತು ಆವಶ್ಯಕ ಸರ್ಜರಿ ಹೊರತಾಗಿ ಇತರ ಸಣ್ಣ ಸರ್ಜರಿಗೆ ರಕ್ತದ ಅಭಾವವಾಗಿದೆ.
ಜಿಲ್ಲಾ ರಕ್ತ ನಿಧಿಯಿಂದ ಭಟ್ಕಳ ಉಡುಪಿ, ಕಾರ್ಕಳ, ನಿಟ್ಟೆ ಭಾಗದ ಆಸ್ಪತ್ರೆಗಳಿಗೆ ಅಗತ್ಯ ರಕ್ತಗಳು ಪೂರೈಕೆ ಆಗುತ್ತದೆ. ಹಿಂದೆ ತಿಂಗಳಿಗೆ 900ಯುನಿಟ್‌ಗಳಷ್ಟು ರಕ್ತ ಸಂಗ್ರವಾಗುತ್ತಿತ್ತು ಮತ್ತು ದಿನಕ್ಕೆ 50, 60 ಯುನಿಟ್ ಸಂಗ್ರವಾಗುತ್ತಿತ್ತು ಆದರೆ ಸದ್ಯ ಇದರ ಅರ್ಧಾಂಶ ಮಾತ್ರ ಸಂಗ್ರವಾಗುತ್ತಿದೆ.
ಮಾರ್ಚ್‌ನಲ್ಲಿ 572 ಯುನಿಟ್ ಸಂಗ್ರಹವಾದರೆ, ಈ ತಿಂಗಳ ಎ. 23ರ ವರೆಗೆ 148 ಯುನಿಟ್ ಮಾತ್ರ ರಕ್ತ ಸಂಗ್ರವಾಗಿದ್ದು, ಎ. 19ರಿಂದ ಸಂಗ್ರಹ ಪ್ರಮಾಣ ಇಳಿಕೆ ಕಾಣುತ್ತಾ ಬಂದಿದೆ. ಹಾಗೆಯೇ ಕೆಎಂಸಿ ರಕ್ತನಿಧಿಗೆ ಪ್ರತಿ ವಾರ ಕ್ಯಾಂಪ್ ಮೂಲಕ ದಾನಿಗಳಿಂದ 250 ಯುನಿಟ್ ಹಾಗೂ ತಿಂಗಳಿಗೆ 1500 ಯುನಿಟ್‌ಗಳಷ್ಟು ರಕ್ತಗಳ ಸಂಗ್ರವಾಗುತ್ತಿದ್ದವು. ಆದರೆ ಲಾಕ್‌ಡೌನ್ ಬಳಿಕ ಈ ಪ್ರಮಾಣ ಇಳಿಕೆಯಾಗಿದೆ. ದಿನಕ್ಕೆ 70 ಯುನಿಟ್ ಅಗತ್ಯವಿದ್ದು ಸದ್ಯ 20 ಯುನಿಟ್ ಮಾತ್ರ ಸಂಗ್ರವಾಗುತ್ತಿದೆ.
ರಕ್ತದಾನಿಗಳಿಗೆ ಅವಕಾಶ
ರಕ್ತದಾನಿಗಳು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ಹಾಗೂ ಮಣಿಪಾಲ ರಕ್ತನಿಧಿಯಲ್ಲಿ ರಕ್ತದಾನ ಮಾಡಲು ನಿತ್ಯವು ಅವಕಾಶ ಒದಗಿಸಲಾಗಿದೆ. ರಕ್ತದಾನಿಗಳಿಗೆ ನಿಷೇಧಾಜ್ಞೆಯ ಸಮಯದಲ್ಲಿ ಬಂದು ಹೋಗಲು ಪಾಸ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕರೆಮಾಡಿ ಹೆಸರು ನೋಂದಾಯಿಸಿದ್ದಲ್ಲಿ ದಾನಿಗಳಿಗೆ ಪಾಸನ್ನು ವಾಟ್ಸಾಪ್ ಸಂಖ್ಯೆಗೆ ರವಾನಿಸಲಾಗುತ್ತದೆ. ದಾನಿಗಳು ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿಯ ದೂ.ಸಂ.:-08202531633ಕ್ಕೆ ಸಂಪರ್ಕಿಸಬಹುದಾಗಿದೆ.
ರಕ್ತದಾನಿಗಳಿಗೆ ಪಾಸ್
ಎ.19ರ ಬಳಿಕ ರಕ್ತದ ಸಂಗ್ರಹ ಪ್ರಮಾಣ ಇಳಿಕೆಯಾಗಿದೆ. ಹಿಂದೆ ರಸ್ತೆ ಅಪಘಾತದ ಪ್ರಕರಣಕ್ಕೆ ಹೆಚ್ಚಿನ ರಕ್ತದ ಆವಶ್ಯಕತೆ ಇತ್ತು. ಸದ್ಯ ರಸ್ತೆ ಅಪಘಾತದ ಪ್ರಕರಣ ಒಂದು ಇಲ್ಲ. ಹೆರಿಗೆ ಇತರ ಸರ್ಜರಿಗೆ ರಕ್ತದ ಅವಶ್ಯಕತೆ ಇದೆ. ಜಿಲ್ಲೆಯ ಎಲ್ಲ ಆಸ್ಪತ್ರೆಗೆ ಜಿಲ್ಲಾ ರಕ್ತನಿಧಿ ತಾಯಿ ರಕ್ತನಿಧಿ ಆಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಆವಶ್ಯಕತೆ ಇರುತ್ತದೆ. ದಾನಿಗಳಿಗಳು ಜಿಲ್ಲಾ ರಕ್ತನಿಧಿಯ ದೂ.ಸಂ: 08202531633ಕ್ಕೆ ಕರೆ ಮಾಡಿ ಪಾಸ್ ಪಡೆಯುವ ವ್ಯವಸ್ಥೆ ಇದೆ.
-ಡಾ| ವೀಣಾ ಕುಮಾರಿ
ಮುಖ್ಯಸ್ಥರು, ಉಡುಪಿ ರಕ್ತ ನಿಧಿ
ರಕ್ತದಾನಕ್ಕೆ ಅವಕಾಶ
ಲಾಕ್‌ಡೌನ್ ಹಂತಹಂತವಾಗಿ ಸಡಿಲಿಕೆ ಆದಂತೆ ರೋಗಿಗ ಸಂಖ್ಯೆ ಹಾಗೂ ಚಿಕಿತ್ಸೆಗೆ ರಕ್ತದ ಬೇಡಿಕೆ ಹೆಚ್ಚಳವಾಗಲಿದೆ. ದಿನಕ್ಕೆ 70 ಯುನಿಟ್ ರಕ್ತದ ಆವಶ್ಯವಿದೆ. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವುದರಿಂದ ಆವಶ್ಯಕತೆ ಇರುವವರಿಗೆ ಸಹಾಯವಾಗಲಿದೆ. ದಾನಿಗಳು ಕೆಎಂಸಿ ರಕ್ತ ನಿಧಿಗೆ ಭೇಟಿ ನೀಡಿ ರಕ್ತದಾನ ಮಾಡುವ ಅವಕಾಶವಿದೆ. ರಕ್ತದಾನ ಮಾಡ ಬಯಸುವ ದಾನಿಗಳು 0820-2922331 ಕರೆಮಾಡಿ ಪಾಸ್ ಅನ್ನು ಪಡೆಯಬಹುದಾಗಿದೆ.
-ಡಾ| ಶಮಿ ಶಾಸ್ತ್ರಿ
ಮುಖ್ಯಸ್ಥರು, ಕೆಎಂಸಿ ರಕ್ತ ನಿಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.