ಬ್ರಹ್ಮಾವರ-ಚೇರ್ಕಾಡಿ ರಸ್ತೆ: ಕೆಸರುಮಯ
Team Udayavani, Jun 19, 2020, 5:45 AM IST
ಬ್ರಹ್ಮಾವರ: ಬ್ರಹ್ಮಾವರ ಚೇರ್ಕಾಡಿ ಚತುಷ್ಪಥ ರಸ್ತೆ ಕಾಮಗಾರಿ ಯಿಂದ ಅಲ್ಲಲ್ಲಿ ಹೊಂಡ ಹಾಗೂ ಕೆಸರಿ ನಿಂದ ಕೂಡಿದೆ. ಹಲವು ಕಡೆಗಳಲ್ಲಿ ಮೋರಿ ಅಳವಡಿಕೆಗಾಗಿ ರಸ್ತೆ ಅಗೆತದಿಂದ ಹೊಂಡ ಉಂಟಾಗಿ ಸಂಚಾರಕ್ಕೆ ತೊಡಕಾಗಿದೆ.
ಚಾಂತಾರು ರೈಲ್ವೇ ಅಂಡರ್ಪಾಸ್ ಬಳಿ ನಡೆಯುತ್ತಿರುವ ಕಾಮಗಾರಿ ಯಿಂದ ಸಮಸ್ಯೆ ಉಂಟಾಗಿದೆ. ಮಳೆ ಹಾನಿ ಯೋಜನೆಯಡಿ ಕಾಂಕ್ರೀಟ್ನಿಂದ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಪ್ರತಿದಿನ ಅಡಚಣೆಯಾಗುತ್ತಿದೆ. ಪ್ರತಿವರ್ಷ ಮಳೆಗಾಲದಲ್ಲಿ ಭಾರೀ ಮಳೆ ಸುರಿದಾಗ ಚರಂಡಿ ಇದ್ದರೂ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಆದರೆ ಈ ಬಾರಿ ರಸ್ತೆ ಕಾಮಗಾರಿಯಿಂದ ಇದ್ದ ಚರಂಡಿ ಮುಚ್ಚಿ ಹೋಗಿದ್ದು, ರಸ್ತೆಯಲ್ಲಿಯೇ ನೀರು ಹರಿಯುತ್ತಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯನ್ನು ತಾತ್ಕಾಲಿಕವಾಗಿಯಾದರೂ ಸಂಬಂಧಪಟ್ಟ ಇಲಾಖೆ, ಗುತ್ತಿಗೆದಾರರು ಕೂಡಲೇ ದುರಸ್ತಿ ಗೊಳಿಸಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.
ಟ್ರಾಫಿಕ್ ಜಾಮ್
ಶಿಕ್ಷಣ ಸಂಸ್ಥೆಗಳ ಮತ್ತು ಖಾಸಗಿ ಬಸ್ಸಂಚಾರ ಇನ್ನೂ ಆರಂಭವಾಗಿಲ್ಲ. ಆದರೂ ರೈಲ್ವೇ ಸೇತುವೆ ಬಳಿ ಅವೈಜ್ಞಾನಿಕ ಕಾಮಗಾರಿ ಮತ್ತು ಏಕಮುಖ ಸಂಚಾರ ದಿಂದ ಪ್ರತಿದಿನ ವಾಹನ ಸವಾರರು ಪರದಾಡುತ್ತಿದ್ದಾರೆ. ಶಾಲೆ ಆರಂಭ ಗೊಂಡರೆ ದುಃಸ್ಥಿತಿ ಇನ್ನಷ್ಟು ಬಿಗಡಾಯಿ
ಸುವ ಸಾಧ್ಯತೆ ಇದೆ. ಪಾದಚಾರಿಗಳಿಗೆ ಮಾತ್ರ ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.