ಬಸ್ ನಿಲ್ದಾಣಗಳು ಶೀಘ್ರದಲ್ಲಿ ಮೇಲ್ದರ್ಜೆಗೆ
ಪಾರ್ಕಿಂಗ್ ಸಮಸ್ಯೆಗೆ ಸಿಗಲಿದೆ ಮುಕ್ತಿ; ಆರಂಭದಲ್ಲಿ ಮಣಿಪಾಲ ನಿಲ್ದಾಣ ಅಭಿವೃದ್ಧಿ
Team Udayavani, Oct 9, 2020, 1:42 AM IST
ಉಡುಪಿ ಸಿಟಿ ಬಸ್ ನಿಲ್ದಾಣ
ಉಡುಪಿ: ಡೆಲ್ಟ್ ಯೋಜನೆ ಮೂಲಕ ನಿರ್ಮಿಸಲು ಉದ್ದೇಶಿಸಿದ ಸುಸಜ್ಜಿತ ಮಾದರಿ ಬಸ್‌ಸ್ಟಾಂಡ್ ನಿರ್ಮಿಸುವ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಇದೀಗ ಮತ್ತೆ ಮರುಜೀವ ಪಡೆದಿದೆ. ವಾರದ ಹಿಂದೆ ಅಧಿಕಾರಿಗಳು ಮತ್ತೂಮ್ಮೆ ಸರ್ವೇ ನಡೆಸುವ ಮೂಲಕ ಕಾಮಗಾರಿ ಆರಂಭಕ್ಕೆ ಹಸುರು ನಿಶಾನೆ ತೋರಿದ್ದಾರೆ. ಮಲ್ಪೆ, ಉಡುಪಿ, ಮಣಿಪಾಲದ ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ ಇದಾಗಿದೆ. ಇದರಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಯೋಜನೆಯಲ್ಲಿ ಪ್ರಥಮ ಹಂತವಾಗಿ ಮಣಿಪಾಲದ ಬಸ್ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುತ್ತದೆ. ಪ್ರಸ್ತುತ ಇಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಪಾರ್ಕಿಂಗ್‌ಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.
ಮಲ್ಪೆಯಲ್ಲಿ ತುಸು ಗೊಂದಲ
ಮಲ್ಪೆಯಲ್ಲಿ ಪ್ರಸ್ತುತ ಇರುವ ಬಸ್ ನಿಲ್ದಾಣದ ಹಿಂಭಾಗದಲ್ಲಿ ಸುಮಾರು 70ರಿಂದ 80ರಷ್ಟು ಮೀನುಗಾರ ಮಹಿಳೆಯರು ಮೀನು ಒಣಗಿಸುತ್ತಿದ್ದಾರೆ. ಒಂದು ವೇಳೆ ಬಸ್ ನಿಲ್ದಾಣ ಯೋಜನೆ ರೂಪುಗೊಂಡದ್ದೇ ಆದಲ್ಲಿ ಆ ಜಾಗಕ್ಕೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಮಲ್ಪೆ ಬೀಚ್‌ಗೆ ಬಸ್ ನಿಲ್ದಾಣ ಸ್ಥಳಾಂತರಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಆದರೆ ಅದರ ಅನುಕೂಲ, ನಿರ್ಮಾಣ ಕುರಿತ ರೂಪುರೇಖೆ ಇತ್ಯಾದಿಗಳ ಬಗ್ಗೆ ಅಂತಿಮ ನಿರ್ಣಯ ಇನ್ನಷ್ಟೇ ಆಗಬೇಕಿದೆ ಎಂದು ಮೂಲಗಳು ಹೇಳಿವೆ.
ತಾಂತ್ರಿಕ ಸಮಸ್ಯೆ ನಿವಾರಣೆ
ಈ ಯೋಜನೆಯ ಪ್ರಾರಂಭದಲ್ಲಿ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಆದರೆ ಈ ಎಲ್ಲ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ ಮರುಪ್ರಸ್ತಾವನೆ ಕಳುಹಿಸಲಾಗಿದೆ. ಈಗಾಗಲೇ ಸಿಟಿ ಬಸ್ ನಿಲ್ದಾಣದ ಬಳಿಯೇ ನರ್ಮ್ ಬಸ್ ನಿಲ್ದಾಣವೂ ನಿರ್ಮಾಣವಾಗುತ್ತಿದ್ದು, ಎರಡೂ ಬಸ್ ನಿಲ್ದಾಣಗಳನ್ನು ಕೇಂದ್ರೀಕರಿಸಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಅದರಂತೆ ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ಸ್ಲಾéಬ್‌ಗಳನ್ನು ನಿರ್ಮಿಸಿ ಅದರ ಮೇಲ್ಭಾಗದಲ್ಲಿ ಪಾರ್ಕಿಂಗ್ ಮಾಡುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಇದು ಅಂತಿಮಗೊಂಡರೆ ಪೇಯ್ಡ ಪಾರ್ಕಿಂಗ್ ಮೂಲಕ ಸಾರ್ವಜನಿಕರು ವಾಹನವನ್ನು ಇದರಲ್ಲಿ ನಿಲುಗಡೆ ಮಾಡಬಹುದಾಗಿದೆ.
8.95 ಕೋ.ರೂ.ಯೋಜನೆ
ಮಣಿಪಾಲ ಬಸ್ ನಿಲ್ದಾಣವನ್ನು 3.50 ಕೋ.ರೂ. ಹಾಗೂ ಉಡುಪಿ ಬಸ್ ನಿಲ್ದಾಣವನ್ನು 5.45 ಕೋ.ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿ ಇದೆ. ಡೆಲ್ಟ್ ಯೋಜನೆ ಮೂಲಕ ಇದಕ್ಕಾಗಿ 8.95 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ.
ಸರ್ವೇ ಕಾರ್ಯ ಪೂರ್ಣ
ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಬಗೆಗಿನ ಸರ್ವೇ ಕಾರ್ಯ ಕೆಲವೆಡೆ ಪೂರ್ಣಗೊಂಡಿದೆ. ಇನ್ನು ಕೆಲವೆಡೆ ನಡೆಯುತ್ತಿದೆ. ಅತ್ಯಾಧುನಿಕ ರೀತಿಯಲ್ಲಿ ಎಲ್ಲ ಸೌಲಭ್ಯಗಳು ಈ ನಿಲ್ದಾಣದಲ್ಲಿರಲಿವೆ. ಇದರಿಂದ ಪಾರ್ಕಿಂಗ್ ಸಮಸ್ಯೆಯೂ ತಕ್ಕ ಮಟ್ಟಿಗೆ ನಿವಾರಣೆಯಾಗಲಿದೆ.
-ರಘುಪತಿ ಭಟ್, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?
Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.