Canara Bank: ಕೆನರಾ ಬ್ಯಾಂಕ್- ಮಣಿಪಾಲ್ ಟೌನ್‌ಹಾಲ್ ಮೀಟಿಂಗ್’
ಬ್ಯಾಂಕ್‌ನಲ್ಲಿ ಗ್ರಾಹಕಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಕುರಿತು ಸಮಗ್ರ ಮಾಹಿತಿ
Team Udayavani, Aug 10, 2023, 10:34 AM IST
ಮಣಿಪಾಲ: ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಸಾಗಲು ಸಿಬಂದಿಯ ಪ್ರಾಮಾಣಿಕ ಕಾರ್ಯಕ್ಷಮತೆ ಮತ್ತು ಗ್ರಾಹಕರ ನಿರಂತರ ಪ್ರೋತ್ಸಾಹವೇ ಕಾರಣ ಎಂದು ಕೆನರಾ ಬ್ಯಾಂಕ್ ಬೆಂಗಳೂರು ಪ್ರಧಾನ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ದೆಬಾಶಿಷ್ ಮುಖರ್ಜಿ ಹೇಳಿದರು.
ಕೆನರಾ ಬ್ಯಾಂಕ್ ಆಶ್ರಯದಲ್ಲಿ ಮಣಿಪಾಲ ವೃತ್ತ ಕಚೇರಿಯ ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಲಾದ “ಮಣಿಪಾಲ್ ಟೌನ್‌ಹಾಲ್ ಮೀಟಿಂಗ್’ ಅನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್‌ನಲ್ಲಿ ಗ್ರಾಹಕರ ಅಗತ್ಯಕ್ಕೆ ಪೂರಕವಾದ ಸಾಕಷ್ಟು ಹೊಸ ಹೊಸ ಯೋಜನೆಗಳು, ಆರ್ಥಿಕ ಉತ್ಪನ್ನಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಇದನ್ನು ಗ್ರಾಹಕರಿಗೆ ಮುಟ್ಟಿಸುವ ಕಾರ್ಯವನ್ನು ಅಧಿಕಾರಿಗಳು ಮತ್ತು ಸಿಬಂದಿ ಮಾಡಬೇಕಾಗಿದೆ. ಬ್ಯಾಂಕ್ ನೀಡಿರುವ ಎಲ್ಲ ಸೌಲಭ್ಯಗಳನ್ನು ಬಳಸಿ ಕೊಂಡು ಗುಣಮಟ್ಟದ ಸೇವೆಗಳನ್ನು ನೀಡಿದಾಗ ಗ್ರಾಹಕರು ಸಂತೃಪ್ತಿಗೊಳ್ಳುತ್ತಾರೆ. ಅಲ್ಲದೆ ಬ್ಯಾಂಕ್ ನಲ್ಲಿ ತಮ್ಮ ವ್ಯವಹಾರವನ್ನು ಮುಂದು ವರಿಸುತ್ತಾರೆ ಎಂದವರು ತಿಳಿಸಿದರು.
ಬ್ಯಾಂಕ್‌ನಲ್ಲಿರುವ ಅತ್ಯಾಧುನಿಕ ಸೇವೆಗಳು, ವಿವಿಧ ಉತ್ಪನ್ನಗಳು, ಬ್ಯಾಂಕ್‌ನತ್ತ ಹೊಸ ಯುವ ಗ್ರಾಹಕ ರನ್ನು ಸೆಳೆಯುವ ತಂತ್ರಗಾರಿಕೆ ಹಾಗೂ ಬ್ಯಾಂಕ್‌ನಲ್ಲಿ ಗ್ರಾಹಕಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಕುರಿತು ಸಮಗ್ರ ಮಾಹಿತಿ ನೀಡಿದರು.
ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು. ಅನಂತರ ಬ್ಯಾಂಕ್‌ನ ಅಧಿಕಾರಿ
ಗಳು ಮತ್ತು ಸಿಬಂದಿಯೊಂದಿಗೆ ನೇರ ಸಂವಾದ ನಡೆಸಿದರು.
ವೃತ್ತ ಕಚೇರಿಯ ಮಹಾಪ್ರಬಂಧಕ ಎಂ.ಜಿ. ಪಂಡಿತ್ ಪ್ರಸ್ತಾವನೆಗೈದು, ಪ್ರತಿಯೊಬ್ಬ ನೌಕರನೂ ಬ್ಯಾಂಕ್‌ನ ಆಸ್ತಿ ಇದ್ದಂತೆ. ಬ್ಯಾಂಕ್ ಏಳಿಗೆಯಾದರೆ ಮಾತ್ರ ನೌಕರನ ಏಳಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಸಲ್ಲಬೇಕಾದ ನ್ಯಾಯಯುತ ಸೇವೆ ಒದಗಿಸುವಲ್ಲಿ ಬ್ಯಾಂಕ್‌ನ ನೌಕರರ ಪಾತ್ರವೇನು? ಎಂಬ ಕುರಿತು ದೀರ್ಘವಾಗಿ ಚರ್ಚಿಸುವ ಉದ್ದೇಶ ದಿಂದ ಟೌನ್ ಹಾಲ್ ಮೀಟಿಂಗ್ ಆಯೋಜಿಸಲಾಗಿದೆ ಎಂದು ಅತಿಥಿಯನ್ನು ಸ್ವಾಗತಿಸಿದರು.
ವೃತ್ತ ಕಚೇರಿಯಲ್ಲಿರುವ ಬ್ಯಾಂಕ್‌ನ ಸಂಸ್ಥಾಪಕರಾದ ಉಪೇಂದ್ರ ಅನಂತ ಪೈ, ಡಾ| ಟಿಎಂಎ ಪೈ, ವಾಮನ್ ಎಸ್. ಕುಡ್ವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಹಿರಿಯ ಪ್ರಬಂಧಕಿ ಸ್ವಪ್ನಾ ಶೆಟ್ಟಿ ನಿರೂಪಿಸಿದರು. ಉಪ ಮಹಾಪ್ರಬಂಧಕಿ ಸಬಿತಾ ಎಂ. ನಾಯಕ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.