ಜೀರ್ಣೋದ್ಧಾರಗೊಳ್ಳುತ್ತಿದೆ ಚಿಕ್ಕಲ್‌ಬೆಟ್ಟು ಗುರುರಾಯರ ಚಂದ್ರನಾಥ ಸ್ವಾಮಿ ಬಸದಿ
Team Udayavani, Mar 6, 2020, 11:57 PM IST
ಕಾರ್ಕಳ: ಚಿಕ್ಕಲ್‌ಬೆಟ್ಟು ಶ್ರೀ ಗುರುರಾಯರ ಚಂದ್ರನಾಥ ಸ್ವಾಮಿ ಬಸದಿ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ದೊರೆತಿದೆ. ಹಿರಿಯಂಗಡಿಯಲ್ಲಿ ಒಟ್ಟು ಒಂಬತ್ತು ಜೈನ ಬಸದಿಗಳಿದ್ದು, ಅವುಗಳಲ್ಲಿ ಶ್ರೀ ಗುರುರಾಯರ ಬಸದಿಯೂ ಒಂದು. ಭೈರವರಸರ ಕಾಲದಲ್ಲಿ ನಿರ್ಮಾಣವಾದ ಈ ಬಸದಿಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಪೀಠಾಧಿಪತಿಯಾಗಿ ಆಸೀನರಾಗಿದ್ದು, ಶ್ಯಾಮ ಯಕ್ಷ ಮತ್ತು ಜ್ವಾಲಾಮಾಲಿನಿ ಯಕ್ಷಿನಿಯರೂ ಇಲ್ಲಿ ನಿತ್ಯ ಪೂಜಿಸಲ್ಪಡುತ್ತಿದ್ದಾರೆ. ಶಿಲಾಮಯವಾಗಿರುವ ಈ ಬಸದಿ ಹಂಚಿನ ಛಾವಣಿ ಹೊಂದ್ದಿದು, ಇದೀಗ ಛಾವಣಿ ದುರಸ್ತಿ ಕಾರ್ಯ ನಡೆಯುತ್ತಿದೆ.
ಭಕ್ತರ ನಂಬಿಕೆ
ಬಸದಿಯಲ್ಲಿ ಅಧಿಪತಿಯಾದಂತಹ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಮೃತ್ಯುಂಜಯ ಆರಾಧನೆ ಹಾಗೂ ಶಾಂತಿ ಪೂಜೆ ಮಾಡಿಸಿದರೆ ಕಷ್ಟ ಪರಿಹಾರ ಹಾಗೂ ಸುಖ ಶಾಂತಿ ಲಭಿಸುತ್ತದೆ ಎಂಬ ಅಚಲ ನಂಬಿಕೆ ಭಕ್ತರದ್ದು. ಇದೀಗ ಈ ಬಸದಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರವಾಗುತ್ತಿದ್ದು, ಭಕ್ತರು, ಸಂಘ-ಸಂಸ್ಥೆಯವರು ಕರಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕ್ಷುಲ್ಲಕ 105 ಧ್ಯಾನಸಾಗರ ಮಹಾರಾಜರ ಪ್ರೇರಣೆ ಯಂತೆ ಬಸದಿಯ ಜೀಣೊìದ್ಧಾರ ಕೆಲಸ ವನ್ನು ಮಾಡುವುದಾಗಿ ಚಿಕ್ಕಲ್‌ಬೆಟ್ಟು ಕುಟುಂಬಸ್ಥರು ಮತ್ತು ಬಸದಿಯ ಪುರೋಹಿತರು ಅಭಿಪ್ರಾಯಪಡುತ್ತಾರೆ.
ಜೀರ್ಣೋದ್ಧಾರ ಸಮಿತಿ
ಜೀರ್ಣೋದ್ಧಾರ ಕಾರ್ಯಕ್ಕೆ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರಾಗಿ ಡಾ| ಸಿ.ಪಿ. ಅತಿಕಾರಿ ಚಿಕ್ಕಲ್ ಬೆಟ್ಟು, ಕಾರ್ಯದರ್ಶಿಯಾಗಿ ಅಶೋಕ್
ಕುಮಾರ್ ಮಿತ್ತೂಟ್ಟು, ಕೋಶಾಧಿಕಾರಿ ಯಾಗಿ ಅಶೋಕ್ ಕುಮಾರ್ ಕೊಡಿಪಾಡಿ, ಉಪಾಧ್ಯಕ್ಷರಾಗಿ ಭುಜಬಲಿ ಇಂದ್ರ ಕಾರ್ಕಳ, ಸಂಚಾಲಕರಾಗಿ ಚಂದ್ರರಾಜ ಅತಿಕಾರಿ ಪರದಿಕುಮೇರು, ಸದಸ್ಯರುಗಳಾಗಿ ನಮಿರಾಜ ಅತಿಕಾರಿ ಚಿಕ್ಕಲ್‌ಬೆಟ್ಟು, ಜಗತ್ಪಾಲ ಅತಿಕಾರಿ ಚಿಕ್ಕಲ್‌ಬೆಟ್ಟು, ಯಶೋಧರ ಅತಿಕಾರಿ ನ್ಯಾಯವಾದಿಗಳು, ಕೆ. ಕೀರ್ತಿ ಪ್ರಸಾದ ಇಂದ್ರ ಕಾರ್ಕಳ, ಸುನಿಲ್ ಕುಮಾರ್ ಬಜಗೋಳಿ, ಅಮರನಾಥ ಅತಿಕಾರಿ, ಸುಕೇಶ ಕಡಂಬು, ಪವನ್ ಕುಮಾರ್, ಯಶೋಧರ ಆಳ್ವ, ಶ್ರೀಧರ ಭಂಡಾರಿ, ಸುಕುಮಾರ್ ಜೈನ್, ಉದಯ ಕುಮಾರ್, ಚಂದ್ರಮೋಹನ್, ಭರತ್ ಕುಮಾರ್, ಸನತ್ ಕುಮಾರ್, ಭರತ್ ಕುಮಾರ್ ಕೆಲ್ಲಪುತ್ತಿಗೆ, ನಿರ್ಮಲ್ ಕುಮಾರ್ ಚಿಕ್ಕಲ್‌ಬೆಟ್ಟು, ಪ್ರಮತ್ ಕುಮಾರ್ ಬಂಗ ಅವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.