ಕ್ರಿಸ್ಮಸ್ ಹಬ್ಬದ ಸಡಗರ: ಪೂರ್ವ ತಯಾರಿ
Team Udayavani, Dec 22, 2020, 4:33 AM IST
ಉಡುಪಿ: ಒಂದೆಡೆ ಚುನಾವಣೆ ಕಾವು ಮತ್ತೂಂದೆಡೆ ಕ್ರಿಸ್ಮಸ್ ಸಡಗರ. ಕೊರೊನಾ ನಡುವೆಯೂ ಈ ಎರಡೂ ಕೂಡ ದೇಶದ, ಧಾರ್ಮಿಕ ದೃಷ್ಟಿಯಿಂದ ಅತ್ಯಗತ್ಯ.
ಅಧಿಕಾರ ವರ್ಗ ಒಂದೆಡೆ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದರೆ ಕ್ರೈಸ್ತ ಬಾಂಧವರು ಮತದಾನದ ಜತೆಗೆ ಕ್ರಿಸ್ಮಸ್ ಆಚರಣೆಯತ್ತ ಗಮನಹರಿಸಿದ್ದಾರೆ. ಕ್ರಿಬ್‌ಗಳ ತಯಾರಿ, ಅಂಗಡಿಗಳಲ್ಲಿ ಸಾಂತಕ್ಲೋಸ್ ಬಟ್ಟೆಗಳು, ಬೇಕರಿಗಳಲ್ಲಿ ಕುಸ್ವಾರ್ ಸಹಿತ ಹಲವು ಬಗೆಯ ಸಿಹಿ ತಿನಿಸುಗಳು ಗ್ರಾಹಕರನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುತ್ತಿವೆ.
ಕ್ರಿಸ್ಮಸ್ ಶುಭಾಶಯ ಕಾರ್ಡ್‌ಗಳು, ಗೋದಲಿ, ಮನೆ ಹಾಗೂ ಚರ್ಚ್‌ಗಳನ್ನು ಅಲಂಕರಿಸುವ ನಕ್ಷತ್ರಗಳು, ಕ್ರಿಸ್ಮಸ್ ಟ್ರೀ, ಸಾಂತಕ್ಲಾಸ್ ವೇಷ ಭೂಷಣ, ವಿವಿಧ ವಿಗ್ರಹಗಳು, ರೋಸರಿಗಳು, ಕ್ಯಾಂಡಲ್ ಮತ್ತು ಕ್ಯಾಂಡಲ್ ಸೆಟ್, ಸ್ಪೆಷಲ್ ಬೆಲ್‌ಗಳು, ಲೈಟಿಂಗ್ಸ್ ಇತ್ಯಾದಿಗಳು ಮಾರುಕಟ್ಟೆಗೆ ಬಂದಿದ್ದು, ಅಂಗಡಿ ಮಳಿಗೆಗಳಲ್ಲಿ ರಾರಾಜಿಸುತ್ತಿವೆ. ಅವುಗಳ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ.
ಬಾಯಿಯಲ್ಲಿ ನೀರುರಿಸುವ ಸಿಹಿತಿನಿಸು
ನಗರದ ಹಲವಾರು ಬೇಕರಿಗಳಲ್ಲಿ ಕುಸ್ವಾರ್ ತಿನಿಸುಗಳಾದ ಕುಕೀಸ್, ನೇವ್ರಿ, ಕಲ್‌ಕಲ್, ರೈಸ್ ಮಾರ್ಬಲ್ಸ್ (ಗುಳಿಯಾ), ಅಕ್ಕಿ ಲಾಡು, ಗುಣಮಟ್ಟದ ಚಕ್ಕುಲಿ, ತುಕ್ಕುಡಿ, ಖಾರದಕಡ್ಡಿ, ಕೋಡುಬಳೆ, ಡ್ರೈಫೂÅಟ್ಸ್ ಗಳಾದ ಬಾದಾಮ್, ಪಿಸ್ತಾ, ಅಜೀರ್, ವಾಲ್‌ನಟ್, ದ್ರಾಕ್ಷಿ, ಅಪ್ರಿಕಾಟ್, ಗೇರುಬೀಜಗಳು ಗ್ರಾಹಕರನ್ನು ತಮ್ಮತ್ತ ಸೆಳೆಯುವಂತೆ ಮಾಡುತ್ತಿದೆ. ಹಲವಾರು ಬಗೆಯ ಕೇಕ್‌ಗಳೂ ಗಮನಸೆಳೆಯುತ್ತಿವೆ.
ಮನೆಗಳಲ್ಲೂ ತಿನಿಸು ತಯಾರಿ
ಕ್ರೈಸ್ತ ಬಾಂಧವರ ಮನೆಯಲ್ಲೂ ತಿಂಡಿ-ತಿನಿಸುಗಳನ್ನು ಮಾಡುವ ಬಗ್ಗೆ ತಯಾರಿ ನಡೆಯುತ್ತಿದೆ. ಅಕ್ಕಿಯಿಂದ ತಯಾರಿಸಿದ ಲಾಡು, ಗುಳಿಯೋ, ಕುಕ್ಕೀಸ್, ನೆವೆ, ಕಿಡಿಯೋ, ಚಕ್ಕುಲಿ, ಕೇಕ್, ಖಾರಕಡ್ಡಿಗಳನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಸಮೀಪದಲ್ಲಿರುವ ಎಲ್ಲ ಸಮುದಾಯದ ಬಾಂಧವರಿಗೆ ಹಂಚುವ ಪ್ರಕ್ರಿಯೆಯೂ ಕ್ರಿಸ್ಮಸ್ ಹಬ್ಬದಂದು ನಡೆಯಲಿದೆ.
ಚರ್ಚ್‌ಗಳಲ್ಲಿ ಸರಳ ಆಚರಣೆ
ಕೋವಿಡ್ ಕಾರಣದಿಂದಾಗಿ ಈ ಬಾರಿ ಉಡುಪಿ ಧರ್ಮಪ್ರಾಂತ್ಯದ ಎಲ್ಲ 52 ಚರ್ಚ್ ಗಳಲ್ಲಿಯೂ ಸರಳ ರೀತಿಯಲ್ಲಿ ಕ್ರಿಸ್ಮಸ್ ಆಚರಣೆ ನಡೆಯಲಿದೆ. ಬಲಿಪೂಜೆಗಳು ವರ್ಷಂಪ್ರತಿಯಂತೆ ನೆರವೇರಲಿದೆ.ಕೇಕ್ ಹರಾಜು ಹಾಕುವುದು, ಕ್ಯಾರಲ್ಸ್ ಹಾಡು, ಗೋದಲಿ ಸ್ಪರ್ಧೆ, ಕ್ಯಾರಲ್ಸ್ ಹಾಡುವ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಬಾರಿ ಕಡಿವಾಣ ಹಾಕಲಾಗಿದೆ.
ಸಕಲ ಮುನ್ನೆಚ್ಚರಿಕೆ
ಸರಕಾರದ ನಿಯಮಾಳಿಯಂತೆ ಚರ್ಚ್ ಒಳಗಡೆ ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗುತ್ತದೆ. ಚರ್ಚ್‌ನ ದ್ವಾರಗಳಲ್ಲಿ
ಸಿಬಂದಿ ಭಕ್ತರಿಗೆ ಸ್ಯಾನಿಟೈಸರ್ ನೀಡಲಿದ್ದಾರೆ. ಮಾಸ್ಕ್ ಧರಿಸದವರಿಗೆ ಮಾಸ್ಕ್ಗಳನ್ನೂ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಸರಳವಾಗಿ ಆಚರಣೆ
ಕೋವಿಡ್ ಕಾರಣದಿಂದಾಗಿ ಎಲ್ಲ ರೀತಿಯ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸರಳ ರೀತಿಯಲ್ಲಿ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಆಚರಿಸಲು ನಿರ್ಧರಿಸಲಾಗಿದೆ. ಕ್ರೈಸ್ತ ಬಾಂಧವರು ತಮ್ಮ ಮನೆಗಳಲ್ಲಿ ಎಂದಿನಂತೆಯೇ ಹಬ್ಬಗಳನ್ನು ಆಚರಿಸಲಿದ್ದಾರೆ. ಯಾವುದೇ ರೀತಿಯ ದುಂದುವೆಚ್ಚಗಳನ್ನು ಮಾಡದೆ ಹಬ್ಬ ಆಚರಿಸುವಂತೆ ಸಲಹೆ ನೀಡಲಾಗಿದೆ.
– ರೆ| ಫಾ| ಡಾ| ಐಸಾಕ್ ಲೋಬೋ , ಉಡುಪಿಯ ಬಿಷಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.