ಬರಲಿದೆ ಕರಾವಳಿಗರ ಚಿತ್ರ: ಮೂಲಭೂತ ಕಾರಣ
Team Udayavani, Oct 9, 2017, 12:05 PM IST
ಉಡುಪಿ: ಕರಾವಳಿಗರೇ ನಿರ್ದೇಶಿಸಿ, ನಿರ್ಮಿಸಿ, ಮುಖ್ಯ ಭೂಮಿಕೆಯಲ್ಲಿರುವ ಸಸ್ಪೆನ್ಸ್, ಥ್ರಿಲ್ಲರ್ “ಮೂಲಭೂತ ಕಾರಣ’ ಎನ್ನುವ ಕನ್ನಡ ಚಿತ್ರ ಬರಲಿದೆ. ಕತೆ, ಸಂಭಾಷಣೆ, ಚಿತ್ರಕತೆ, ನಿರ್ದೇಶನವನ್ನು ಶಿರ್ವದ ಶರತ್ ಕುಮಾರ್ ವಹಿಸಿಕೊಂಡಿದ್ದಾರೆ. ವಿಭಿನ್ನ ಕಥಾ ಹಂದರವಿರುವ ಸಿನೆಮಾ ಇದಾಗಿದೆ. ಬಹಳಷ್ಟು ರೋಚಕ ಅಂಶಗಳು ಚಿತ್ರದಲ್ಲಿವೆ. ಚಿತ್ರದ ಫಸ್ಟ್ ಲುಕ್ ಅನ್ನು ಇತ್ತೀಚೆಗೆ “ಒಂದು ಮೊಟ್ಟೆಯ ಕತೆ’ ಚಿತ್ರ ಖ್ಯಾತಿಯ ರಾಜ್ ಬಿ. ಶೆಟ್ಟಿ ಬಿಡುಗಡೆಗೊಳಿಸಿದ್ದರು. ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ವಿದ್ಯಾಭ್ಯಾಸಕ್ಕಾಗಿ ಹಳ್ಳಿಯಿಂದ ನಗರಕ್ಕೆ ಹೋಗುವ ಚಿತ್ರದ ನಾಯಕನ ಜೀವನದಲ್ಲಿ ಸಂಭವಿಸುವ ಘಟನೆಗಳಿಗೆಲ್ಲ “ಮೂಲಭೂತ ಕಾರಣ’ದ ಹುಡುಕಾಟವೇ ಚಿತ್ರದ ಒನ್‌ಲೈನ್ ಸ್ಟೋರಿ.
ಕರಾವಳಿಗರ ತಂಡ: “ಮದಿಪು’ ತುಳು ಚಿತ್ರಕ್ಕೆ ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆದ ಸಂದೀಪ್ ಕುಮಾರ್ ನಂದಳಿಕೆ ಚಿತ್ರದ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಮುಂಬಯಿಯ ಉದ್ಯಮಿ ಪ್ರಮೋದ್ ಕರ್ಕೇರ ಅಡ್ವೆ ಅವರಿಗೆ ನಿರ್ಮಾಣದಲ್ಲಿ ಜತೆಯಾಗಿದ್ದಾರೆ. ಅಸ್ಥಾ ಪ್ರೊಡಕ್ಷನ್ ಬ್ಯಾನರ್‌ನಡಿ ಚಿತ್ರ ಮೂಡಿಬರಲಿದೆ. ಯಶ್ ಶೆಟ್ಟಿ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಕಲನಕಾರರಾಗಿ “ಉಗ್ರಂ’ ಖ್ಯಾತಿಯ ಶ್ರೀಕಾಂತ್, ಸಚ್ಚಿನ್ ಎಸ್. ಶೆಟ್ಟಿ ಕೆಮರಾ ಕೈಚಳಕ ತೋರಲಿದ್ದಾರೆ. ಸಹ ನಿರ್ದೇಶಕರಾಗಿ ಶ್ರೀನಿವಾಸ್, ಸಹಾಯಕರಾಗಿ ಚೇತನ್, ನಿರ್ಮಾಣ ವ್ಯವಸ್ಥಾಪಕರಾಗಿ ಶ್ರೀ ಬಂಗೇರ, ಸಹಾಯಕರಾಗಿ ವಿಶಾಲ್ ಕುಮಾರ್ ಶಿರ್ವ, ಪೋಸ್ಟರ್ ಡಿಸೈನರ್ ಹೊಣೆಗಾರಿಕೆಯನ್ನು ದೇವಿ ರೈ ವಹಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.