Kaup ಕ್ಷೇತ್ರ ಬಿಜೆಪಿ ಕಚೇರಿಯಲ್ಲಿ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ
ಪಕ್ಷ ಸಂಘಟನೆ, ಮೋದಿ ಶಕ್ತಿಗೆ ಗೆಲುವು : ಕೋಟ ಶ್ರೀನಿವಾಸ ಪೂಜಾರಿ
Team Udayavani, Jun 4, 2024, 6:59 PM IST
ಕಾಪು: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಕಾಪು ಕ್ಷೇತ್ರ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಪಕ್ಷದ ವತಿಯಿಂದ ಅಭಿನಂದನೆ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ಕಾರ್ಯಕರ್ತರು, ಮುಖಂಡರ ಪರಿಶ್ರಮ ಮತ್ತು ಎಲ್ಲರ ಸಹಕಾರ, ಪ್ರಯತ್ನದ ಫಲವಾಗಿ ಬಿಜೆಪಿ ಗೆದ್ದಿದೆ.
ನಮ್ಮ ಶಾಸಕರುಗಳು ಇರುವಲ್ಲಿ, ಇಲ್ಲದೇ ಇರುವಲ್ಲಿಯೂ ಬಿಜೆಪಿಗೆ ಬಹುಮತ ದೊರಕಿದೆ. ರಾಜ್ಯದಲ್ಲಿ ಮೋದಿ ಶಕ್ತಿ, ಪಕ್ಷ ಸಂಘಟನೆ ಗೆದ್ದಿದೆ. ಮೋದಿ ಗ್ಯಾರಂಟಿಗೆ ಗೆಲುವಾಗಿದೆ, ಕಾಂಗ್ರೆಸ್ ಗ್ಯಾರಂಟಿ ಗೆ ಸೋಲಾಗಿದೆ ಎಂದರು.
ಅವಳಿ ಜಿಲ್ಲೆಗಳ ಅಭಿವೃದ್ಧಿಗೆ ಆದ್ಯತೆ: ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಜನತೆಯ ನಡುವೆ ಸಮನ್ವಯತೆ ಸಾಧಿಸಿ, ಅವಳಿ ಜಿಲ್ಲೆಗಳ ಜನತೆಯ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳಿಗೆ ಸ್ಪಂಧಿಸಿ, ಎಲ್ಲಾ ವಿಭಾಗಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ಬೇಕಾಗುವ ಪ್ರಯತ್ನಗಳನ್ನೂ ಮಾಡುತ್ತೇವೆ. ಆ ಮೂಲಕ ಕ್ಷೇತ್ರದ ಜನತೆಗೆ ನಮ್ಮ ನಿರಂತರ ಸೇವೆಯನ್ನು ದೊರಕಿಸಲಿದ್ದೇವೆ ಎಂದರು.
ಎನ್ ಡಿಎ ಒಕ್ಕೂಟಕ್ಕೆ ಗೆಲುವು: ಅಯೋಧ್ಯೆ, ಕಾಶಿ ಕಾರಿಡಾರ್, ತ್ರಿವಳಿ ತಲಾಖ್, ಆರ್ಟಿಕಲ್ 370, ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆ, ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಬಗೆಯ ಕೊಡುಗೆ, ಸೌಲಭ್ಯಗಳಿಗಿಂತ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ನೀಡಿದ ಚೀಟಿ ಗ್ಯಾರಂಟಿಯನ್ನು ದೇಶದ ಜನತೆ ನಂಬಿದ ಪರಿಣಾಮ ಬಿಜೆಪಿಗೆ ಹಿನ್ನಡೆಯಾಗಿದದರೂ ಎನ್ ಡಿ ಎ ಒಕ್ಕೂಟಕ್ಕೆ ಗೆಲುವಾಗಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಿ ದೇಶವನ್ನು ವಿಶ್ವಗುರುವನ್ನಾಗಿ ಮುನ್ನಡೆಸುವುದು ಖಚಿತವಾಗಿದೆ ಎಂದರು.
ಪಕ್ಷದ ನೀಡಿದ ಅವಕಾಶ ಸ್ವಾರ್ಥಕ್ಕಾಗಿ ಬಳಸಿಲ್ಲ: ಗ್ರಾಮ ಪಂಚಾಯತ್ ನಿಂದ ಸಂಸದನಾಗುವವರೆಗೆ 34 ವರ್ಷಗಳಿಂದ ಪಕ್ಷ ವಿವಿಧ ಅವಕಾಶಗಳನ್ನು ನೀಡುತ್ತಾ ಬಂದಿದೆ. ಈ ಅವಕಾಶವನ್ನು ಸ್ವಂತಕ್ಕಾಗಿ ಬಳಸಿಲ್ಲ. ಪಕ್ಷ, ಕಾರ್ಯಕರ್ತರು ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಸಮಯವನ್ನು ಮೀಸಲಿಟ್ಟಿದ್ದೇನೆ ಎಂದರು.
ಅಭಿನಂದಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಿರೀಕ್ಷೆಗೂ ಮೀರಿದ ಬಹುಮತದೊಂದಿಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾಗಿದ್ದು ಈ ಗೆಲುವು ಕಾರ್ಯಕರ್ತರಿಗೆ ಸಲ್ಲುವಂತದ್ದಾಗಿದೆ. ಕಾಪು ಕ್ಷೇತ್ರದಲ್ಲಿ 32 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ಸಿಕ್ಕಿದ್ದು ಪದಾಧಿಕಾರಿಗಳು ಮತ್ತು ಕಾರ್ಯಕರ್ತರೆಲ್ಲರ ಶ್ರಮವೇ ಮುಖ್ಯ ಕಾರಣವಾಗಿದೆ. ಈ ಗೆಲುವು ವಿಜಯದ ಆರಂಭವಾಗಿದೆ. ಮುಂದಿನ ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಶುಭಾಂಶನೆಗೈದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಅಧ್ಯಕ್ಷತೆ ವಹಿಸಿದ್ದರು.
ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಯುವ ಮೋರ್ಚಾ ಕ್ಷೇತ್ರಾಧ್ಯಕ್ಷ ಸೋನು ಪಾಂಗಾಳ, ಮಹಿಳಾ ಮೋರ್ಚಾ ಕ್ಷೇತ್ರಾಧ್ಯಕ್ಷೆ ನೀತಾ ಗುರುರಾಜ್, ಕಾಪು ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚುನಾವಣಾ ಪ್ರಮುಖ್ ಅರುಣ್ ಶೆಟ್ಟಿ ಪಾದೂರು, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, , ರತ್ನಾಕರ ಶೆಟ್ಟಿ, ನಿತಿನ್ ಕುಮಾರ್, ಶೈಲೇಶ್ ಅಮೀನ್, ಉಮೇಶ್ ಕರ್ಕೇರ, ಸುರೇಶ್ ದೇವಾಡಿಗ, ಹರಿಣಾಕ್ಷಿ ದೇವಾಡಿಗ, ಬಡಾ ಗ್ರಾ.ಪಂ. ಅಧ್ಯಕ್ಷ
ಶಿವಕುಮಾರ್ ಮೆಂಡನ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ ಶೆಟ್ಟಿ ಹೆಜಮಾಡಿ, ಪ್ರಮುಖರಾದ ಕುತ್ಯಾರು ಪ್ರಸಾದ್ ಶೆಟ್ಟಿ, ನವೀನ್ ಎಸ್.ಕೆ., ನೀತಾ ಗುರುರಾಜ್, ಶಶಿಪ್ರಭಾ ಶೆಟ್ಟಿ, ಸುರೇಖಾ ಶೈಲೇಶ್, ಸುಧಾಮ ಶೆಟ್ಟಿ, ಚಂದ್ರಶೇಖರ ಕೋಟ್ಯಾನ್, ಪ್ರವೀಣ್ ಅಡ್ವೆ, ರತ್ನಾಕರ ಕಟಪಾಡಿ, ಸಂತೋಷ್ ಸುವರ್ಣ ಬೊಳ್ಜೆ, ಶೇಖ್ ನಜೀರ್, ಚಂದ್ರ ಮಲ್ಲಾರು, ಜಯರಾಮ ಆಚಾರ್ಯ, ಕೃಷ್ಣ ರಾವ್, ಶಿವಪ್ರಸಾದ್ ಶೆಟ್ಟಿ, ಸತೀಶ್ ಉದ್ಯಾವರ, ಅನಿಲ್ ಶೆಟ್ಟಿ, ಕೇಸರಿ ಯುವರಾಜ್, ರಾಜೇಶ್ ಉದ್ಯಾವರ, ಯೋಗೀಶ್ ಕುಮಾರ್, ಪ್ರವೀಣ್ ಶೆಟ್ಟಿ, ಇಂದಿರಾ ಶೆಟ್ಟಿ ಮೊದಲಾದವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.