“ಯುವಭಾರತ ಸಂಕಲ್ಪದಿಂದ ನವಭಾರತ ನಿರ್ಮಾಣ’
ಕಾರ್ಕಳ: ಫಿಟ್ ಇಂಡಿಯಾ ಫ್ರೀಡಂ ಜಾಥಾಕ್ಕೆ ಸಚಿವರಿಂದ ಚಾಲನೆ
Team Udayavani, Sep 26, 2021, 5:00 AM IST
ಕಾರ್ಕಳ: ದೈಹಿಕ ಸಾಮರ್ಥ್ಯ ಹೆಚ್ಚಿಸುವುದರ ಜತೆಯಲ್ಲಿ ಮಾನಸಿಕ ಸದೃಢತೆ ಬೆಳೆಯಬೇಕು. ಯುವ ಭಾರತ ಸಂಕಲ್ಪದಿಂದ ನವ ಭಾರತ ನಿರ್ಮಾಣವಾಗುವ ರೀತಿಯಲ್ಲಿ ಪ್ರಧಾನಿ ಯವರ ಆಶಯ ಸಾಕಾರಗೊಳಿ ಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಿ ಮುನ್ನಡೆಯಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಕರೆ ನೀಡಿದರು.
ಕಾರ್ಕಳದ ಅನಂತಶಯನ ವೃತ್ತ ದಲ್ಲಿ ನಡೆದ ಆಜಾದಿ ಕಾ ಅಮೃತ ಮಹೋತ್ಸವ “ಫಿಟ್ ಇಂಡಿಯಾ ಫ್ರೀಡಂ ರನ್’ಗೆ ಚಾಲನೆ ನೀಡಿ, ಅವರು ಮಾತನಾಡಿದರು.
ವಾರ ಕಾಲ ಯುವ ಜನತೆಗಾಗಿ ವಿವಿಧ ಚಟುವಟಿಕೆ
ಪ್ರಧಾನಿಯವರು ಯುವಕರ ದೇಹದ ಸದೃಢತೆಗೆ ಫಿಟ್ ಇಂಡಿಯಾ ಕಲ್ಪನೆಯನ್ನು ಹಿಂದಿನ ವರ್ಷ ತಂದಿದ್ದರು. ಯೋಗ, ವ್ಯಾಯಾಮ, ಧ್ಯಾನದ ಮೂಲಕ ದೈಹಿಕ, ಮಾನಸಿಕ ಸದೃಢತೆ ಸಾಧಿಸುವುದು ಅವರ ಕಲ್ಪನೆಯಾಗಿತ್ತು. ಈ ಬಾರಿ ಅಮೃತ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ಫ್ರೀಡಂ ರನ್ ಕರೆ ಮೂಲಕ ವಾರ ಕಾಲ ಯುವ ಜನತೆಗಾಗಿ ವಿವಿಧ ಚಟುವಟಿಕೆಗೆ ಯೋಜನೆ ಹಾಕಿಕೊಂಡಿದ್ದಾರೆ ಎಂದವರು ತಿಳಿಸಿದರು.
ಇದನ್ನೂ ಓದಿ:ಏಂಜೆಲಾ ಮರ್ಕೆಲ್ ಮೈಯ್ಯಲ್ಲಿ ಗಿಣಿಗಳ ಸವಾರಿ!
ಶ್ರೀ ಭುವನೇಂದ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ ಎ. ಕೋಟ್ಯಾನ್ ಪ್ರಸ್ತಾವನೆಗೈದರು.ತಹಶೀಲ್ದಾರ್ ಪ್ರಕಾಶ್ ಮರಬಳ್ಳಿ, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು, ಆರ್‌ಪಿಸಿಸಿ ಘಟಕದ ರಾಘವೇಂದ್ರ ಪ್ರಭು, ಯುವಕ ಮಂಡಲಗಳ ಪ್ರತಿನಿಧಿಗಳಾದ ಮೋಹನ್ ಶೆಟ್ಟಿ, ರೋಶನ್ ರಾವ್ ಮೊದಲಾದವರು ಉಪಸ್ಥಿತರಿದ್ದರು.ಜ್ಞಾನಸುಧಾ ಸಂಸ್ಥೆಯ ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜ್ಞಾನಸುಧಾ, ಶ್ರೀ ಭುವನೇಂದ್ರ ಪ.ಪೂ. ಕಾಲೇಜು ವಿದ್ಯಾರ್ಥಿಗಳು, ಶ್ರೀ ಭುವನೇಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ನ್ಯಾಶನಲ್ ಕೆಡೆಟ್ ಕಾಪ್ಸ್, ರೋವರ್- ರೇಂಜರ್ , ರೆಡ್‌ಕ್ರಾಸ್ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.