ಮಂಗಳ ಗ್ರಹಕ್ಕೆ ಹವಳದ ಹೊಳಪು
Team Udayavani, Sep 29, 2020, 6:00 AM IST
ಉಡುಪಿ: ಈ ತಿಂಗಳು ಪೂರ್ತಿ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ ಹವಳದಂತೆ ಕೆಂಬಣ್ಣದಲ್ಲಿ ಹೊಳೆಯುತ್ತಿರುವ ಮಂಗಳ ಗ್ರಹ ಗೋಚರಿಸುತ್ತಿದೆ.
ಅ. 13ರಂದು ಮಂಗಳ ಗ್ರಹ ಭೂಮಿಗೆ ಸಮೀಪ ಬರುತ್ತಿದೆ. ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಮಂಗಳ ಹತ್ತಿರ ಬರುವ ಈ ವಿದ್ಯಮಾನವನ್ನು ಮಾರ್ಸ್ ಒಪೋಸಿಶನ್ ಎನ್ನುತ್ತಾರೆ. ಹೀಗೆ ಹತ್ತಿರ ಬಂದಾಗ ದೊಡ್ಡದಾಗಿ ಕಂಡು ಇಡೀ ರಾತ್ರಿ ಹವಳದಂತೆ ಹೊಳೆಯಲಿದೆ.
ಸುಮಾರು 24 ಕೋಟಿ ಕಿ.ಮೀ. ದೂರದಲ್ಲಿ ದೀರ್ಘ ವೃತ್ತಾಕಾರದಲ್ಲಿ ಸೂರ್ಯನಿಗೆ ಸುತ್ತು ಬರಲು ಈ ಮಂಗಳ ಗ್ರಹಕ್ಕೆ 687 ದಿನಗಳು ಬೇಕು. ಭೂಮಿಯೂ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿ ಸೂರ್ಯನನ್ನು ಸುತ್ತುವುದರಿಂದ ಈ ಎರಡೂ ಗ್ರಹಗಳು 2 ವರ್ಷ 50 ದಿನಗಳಲ್ಲಿ ಸಮೀಪಿಸಿ ದೂರ ಸರಿಯುತ್ತವೆ. ಅ. 13ರಂದು ಭೂಮಿಗೆ (6.2 ಕೋಟಿ ಕಿ.ಮೀ. ದೂರದಲ್ಲಿ) ಹತ್ತಿರ ಬಂದು ಸುಂದರವಾಗಿ ದೊಡ್ಡದಾಗಿ ಕಾಣುತ್ತದೆ. 2021ರ ನವೆಂಬರ್ ಹೊತ್ತಿಗೆ ಭೂಮಿಯಿಂದ 39 ಕೋಟಿ ಕಿ.ಮೀ. ದೂರದಲ್ಲಿರುತ್ತಾ ಚಿಕ್ಕದಾಗಿ ಗೋಚರಿಸುತ್ತದೆ.
ಈಗ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ ಶುಕ್ರ ಗ್ರಹದ ಹೊಳಪನ್ನೂ ಮೀರಿಸುವ ಕೆಂಬಣ್ಣದ ಹವಳ ಹೊಳಪಿನಲ್ಲಿ ಮಂಗಳ ಕಾಣುತ್ತಿದೆ. ಈ ತಿಂಗಳು ಪೂರ್ತಿ ಹೀಗೆ ಕಾಣುತ್ತದೆ. ಅ. 1ರಂದು ಹುಣ್ಣಿಮೆ ಚಂದ್ರನ ಪಕ್ಕದಲ್ಲಿರುತ್ತದೆ. ಇವುಗಳ ಜತೆಗೆ ನೆತ್ತಿಯ ಮೇಲೆ ಗುರು, ಶನಿ ಗ್ರಹಗಳನ್ನೂ ಬರೀ ಕಣ್ಣಿನಿಂದಲೇ ಗುರುತಿಸಬಹುದು ಎಂದು ಹವ್ಯಾಸಿ ಖಗೋಳ ವೀಕ್ಷಕ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್; ಪ್ರವಾಸಿಗರಿಗೆ ಹೊಸ ಆಕರ್ಷಣೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.