7 ತಿಂಗಳ ಬಳಿಕ ತೆರೆದ ಕಾರ್ಪ್‌ ಬ್ಯಾಂಕ್‌ ಹೆರಿಟೇಜ್‌ ಮ್ಯೂಸಿಯಂ

ಪ್ರಾಚೀನ-ನವೀನ ನಾಣ್ಯ-ನೋಟುಗಳ ಬೃಹತ್‌ ಸಂಗ್ರಹಾಲಯ

Team Udayavani, Nov 5, 2020, 5:49 AM IST

7 ತಿಂಗಳ ಬಳಿಕ ತೆರೆದ ಕಾರ್ಪ್‌ ಬ್ಯಾಂಕ್‌ ಹೆರಿಟೇಜ್‌ ಮ್ಯೂಸಿಯಂ

ಕಾರ್ಪೊರೇಶನ್‌ ಬ್ಯಾಂಕ್‌ ಹೆರಿಟೇಜ್‌ ಮ್ಯೂಸಿಯಮ್‌ನ ಒಳಾಂಗಣ ದೃಶ್ಯ.

ಉಡುಪಿ: ಹಲವು ರಾಜರ ಕಾಲದ ನಾಣ್ಯಗಳು, ಬ್ರಿಟಿಷರು, ಪೋರ್ಚು ಗೀಸರ ಕಾಲದಿಂದ ಇಂದಿನವರೆಗಿರುವ ನಾನಾ ನೋಟುಗಳು, ಆಸ್ಟ್ರೇಲಿಯಾದ 1,000 ಕೆ.ಜಿ. ತೂಕದ ನಾಣ್ಯದ ಚಿತ್ರ ಹೀಗೆ ಅನೇಕ ರೀತಿಯ ನಾಣ್ಯ-ನೋಟುಗಳನ್ನು ನೋಡುವ ಉತ್ಸಾಹಿಗಳಿಗೆ ಹಾಜಿ ಅಬ್ದುಲ್ಲಾ ಮೆಮೋರಿಯಲ್‌ ಕಾರ್ಪೊರೇಶನ್‌ ಬ್ಯಾಂಕ್‌ ಹೆರಿಟೇಜ್‌ ಮ್ಯೂಸಿಯಂ ಮತ್ತೆ ತೆರೆದುಕೊಂಡಿದೆ.

ನವೀಕರಣದ ಬಳಿಕ
ಕಾರ್ಪೊರೇಶನ್‌ ಬ್ಯಾಂಕ್‌ ಸ್ಥಾಪಕ ಹಾಜಿ ಅಬ್ದುಲ್ಲಾ ಸಾಹೇಬರ ಮನೆಯಾಗಿದ್ದ ಈ ಸ್ಥಳವೀಗ ಅಪೂರ್ವ ವಸ್ತುಗಳ ಸಂಗ್ರಹವಾಗಿದೆ. ಮ್ಯೂಸಿಯಂನ್ನು ಮಾರ್ಚ್‌ 22ರಂದು ಕೊರೊನಾ ಕಾರಣದಿಂದ ಬಂದ್‌ ಮಾಡಲಾಗಿತ್ತು. 7 ತಿಂಗಳ ಬಳಿಕ ನ.3ರಂದು ತೆರೆಯಲಾಗಿದೆ. 2011ರಲ್ಲಿ ಈ ಮ್ಯೂಸಿಯಂ ಅನ್ನು ವಿತ್ತ ಸಚಿವ ಪ್ರಣವ್‌ ಮುಖರ್ಜಿಯವರು ಉದ್ಘಾಟಿಸಿದ್ದರು.

ಏನೇನಿವೆ?
ರಾಜರ ಕಾಲದ ನಾಣ್ಯಗಳಲ್ಲಿ ಚಿನ್ನ, ಬೆಳ್ಳಿ, ತಾಮ್ರದ ನಾಣ್ಯಗಳಿವೆ. ಸುಮಾರು 1,500 ನಾಣ್ಯಗಳು, ಸುಮಾರು 700 ನೋಟುಗಳಿವೆ. ಇದರ ಜತೆ ಕಾರ್ಪೊರೇಶನ್‌ ಬ್ಯಾಂಕಿನ ಆರಂಭಿಕ ಆಡಳಿತ ಮಂಡಳಿಯ ನಿರ್ದೇಶಕರ ಚಿತ್ರಗಳು, 1934ರಲ್ಲಿ ಗಾಂಧೀಜಿಯವರು ಬಂದ ಸಂದರ್ಭ ಅಬ್ದುಲ್ಲಾ ಸಾಹೇಬರ ಅಧ್ಯಕ್ಷತೆಯಲ್ಲಿ ಸ್ವಾಗತಿಸಿದ ಅಪೂರ್ವ ಕ್ಷಣಗಳು, ಅಬ್ದುಲ್ಲಾ ಸಾಹೇಬರು ನಿಧನ ಹೊಂದಿದಾಗ ಉಡುಪಿಯಲ್ಲಿ ಸೇರಿದ ಜನಸಾಗರದ ಚಿತ್ರಗಳೂ ಇವೆ. 121 ವರ್ಷ ಇತಿಹಾಸದ ಕಟ್ಟಡದಲ್ಲಿ ವಿಶಿಷ್ಟ ದಾರುಶಿಲ್ಪಗಳನ್ನು (ಬರ್ಮಾ ಟಿಂಬರ್‌) ನೋಡಬಹುದಾಗಿದೆ ಎನ್ನುತ್ತಾರೆ ಕ್ಯುರೇಟರ್‌ ಜಯಪ್ರಕಾಶ್‌ ರಾವ್‌.

ಪ್ರವೇಶ ಸಮಯ
ನಿತ್ಯ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ರವಿವಾರ ಮತ್ತು ರಜಾ ದಿನಗಳಲ್ಲಿ ತೆರೆದಿರುವುದಿಲ್ಲ. ಎರಡು ಮತ್ತು ನಾಲ್ಕನೆಯ ಶನಿವಾರವೂ ತೆರೆದಿರುತ್ತದೆ.

ನಿಷೇಧವಾದ ಎಲ್ಲ ನೋಟುಗಳು ಇಲ್ಲಿವೆ!
ಮೊದಲ ಬಾರಿಗೆ ನೋಟು ನಿಷೇಧವಾಗಿದ್ದು 1946ರಲ್ಲಿ. ಆಗ ಬ್ರಿಟಿಷರು 10,000 ರೂ., 1,000 ರೂ. ನೋಟುಗಳನ್ನು ನಿಷೇಧ ಮಾಡಿದ್ದರು. 1978ರಲ್ಲಿ ಮೊರಾರ್ಜಿ ದೇಸಾಯಿಯವರ ಸರಕಾರ 1,000 ರೂ., 5,000 ರೂ., 10,000 ರೂ. ನೋಟುಗಳನ್ನು ನಿಷೇಧ ಮಾಡಿತ್ತು. 2016ರಲ್ಲಿ ಕೇಂದ್ರ ಸರಕಾರ 500, 1,000 ರೂ. ನೋಟು ನಿಷೇಧ ಮಾಡಿತು. ಈ ಎಲ್ಲ ನೋಟುಗಳೂ ಇಲ್ಲಿವೆ.

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.