ಶ್ರೀಕೃಷ್ಣ ಸೇವೆಗೆ ಬಂದವರಿಂದ ಕೋವಿಡ್ 19 ವಿರುದ್ಧ ಅಳಿಲ ಸೇವೆ
ಶ್ರೀಕೃಷ್ಣ ಮಠದ ಕೆಲಸದ ಯುವಕರಿಂದ ಮಾಸ್ಕ್ ತಯಾರಿ
Team Udayavani, Apr 14, 2020, 5:46 AM IST
ಉಡುಪಿ: ಶ್ರೀ ಕೃಷ್ಣನ ಸೇವೆಯನ್ನು ಮಾಡುತ್ತಿರುವ ಬಾಗಲ ಕೋಟೆಯ ಕುಣಿಬೆಂಚಿಯ ಶ್ರೀಕೃಷ್ಣ ಮುಖ್ಯಪ್ರಾಣ ಗ್ರಾಮೀಣ ಅಭಿವೃದ್ಧಿ ಹಾಗೂ ಕ್ರೀಡಾ ಸಾಂಸ್ಕೃತಿಕ ಸಂಘದ ಸದಸ್ಯರು ಮೂರು ಸಾವಿರಕ್ಕೂ ಅಧಿಕ ಮಾಸ್ಕ್ ತಯಾರಿ ಮಾಡುತ್ತಿದ್ದು, ದೇಶದಲ್ಲಿನ ಕೋವಿಡ್ 19 ವೈರಸ್ ವಿರುದ್ಧದ ಹೋರಾಟಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಕೆಲಸಕ್ಕಿರುವ ಈ 10 ಮಂದಿ ಯುವಕರು ಸಂಘವನ್ನು ರಚಿಸಿಕೊಂಡಿದ್ದರು. ಅವರಲ್ಲಿ 6 ಮಂದಿ ಊರು ಸೇರಿಕೊಂಡಿದ್ದು, 4 ಮಂದಿ ಮಠದ ಪರಿಸರದಲ್ಲೇ ಉಳಿದುಕೊಡು, ಮಾಸ್ಕ್ ತಯಾರಿ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.
ಜಿಲ್ಲಾಡಳಿತಕ್ಕೆ ನೀಡಲು ನಿರ್ಧಾರ
ಸುಮಾರು 3,000 ಮಾಸ್ಕ್ಗಳನ್ನು ಸಿದ್ಧಪಡಿಸಿ ಬಳಿಕ ಅದನ್ನು ಮಠದ ಸಿಬಂದಿಗೆ, ಜಿಲ್ಲಾಡಳಿತಕ್ಕೆ ನೀಡಲು ನಿರ್ಧರಿಸಿದ್ದಾರೆ. ಇದಕ್ಕವರು ಪರಿಚಯಸ್ಥ ಟೈಲರಿಂಗ್ ಯಂತ್ರ ಹೊಂದಿದ ವ್ಯಕ್ತಿಗಳ ನೆರವು ಪಡೆದುಕೊಂಡಿದ್ದಾರೆ.
ಕೈಲಾದ ಸಹಾಯ ಮಾಡುವ ಹಂಬಲ
ಮಾಸ್ಕ್ಗಳ ಕೊರತೆಯಿದೆ ಎಂಬುದನ್ನು ತಿಳಿದು ಸಹಾಯಕ್ಕೆ ಉದ್ದೇಶಿಸಿದ್ದೆವು. ಅದರಂತೆ ಬಟ್ಟೆ ತರಿಸಿ ಕೆಲಸ ಆರಂಭಿಸಿದೆವು. ಸಂಕಷ್ಟದ ಸಮಯದಲ್ಲಿ ಕೈಲಾದ ಸಹಾಯ ಮಾಡುವ ಉದ್ದೇಶದಿಂದ ಮಾಸ್ಕ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆ.
-ಮಂಜುನಾಥ,
ಮಾಸ್ಕ್ ತಯಾರಿಸುತ್ತಿರುವ ತಂಡದ ಯುವಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.