ಉಡುಪಿ: ಕೋವಿಡ್ ನಿಂದ 3 ಸಾವು, 241 ಸೋಂಕು; 1,556 ನೆಗೆಟಿವ್ ಪ್ರಕರಣ
Team Udayavani, Aug 16, 2020, 1:46 AM IST
ಸಾಂದರ್ಭಿಕ ಚಿತ್ರ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ನಿಂದ ಮೂರು ಸಾವು ಸಂಭವಿಸಿದೆ. ಶನಿವಾರ 241 ಪಾಸಿಟಿವ್ ಮತ್ತು 1,556 ನೆಗೆಟಿವ್ ಪ್ರಕರಣಗಳು ವರದಿಯಾಗಿವೆ.
65 ಮತ್ತು 43 ವರ್ಷ ಪ್ರಾಯದವರಿಬ್ಬರು ಮೃತಪಟ್ಟರು. ಅವರಿಗೆ ಇತರ ಆರೋಗ್ಯ ಸಮಸ್ಯೆಗಳಿದ್ದವು. 78 ವರ್ಷ ಪ್ರಾಯದ ಉಡುಪಿಯವರೊಬ್ಬರು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 79ಕ್ಕೇರಿದೆ.
ಸೋಂಕಿತರಲ್ಲಿ ರೋಗ ಲಕ್ಷಣ ಇರುವ 95 ಪುರುಷರು, 96 ಮಹಿಳೆಯರು, ರೋಗ ಲಕ್ಷಣ ಇರದ 32 ಪುರುಷರು, 18 ಮಹಿಳೆ ಯರಿದ್ದಾರೆ. ಉಡುಪಿ ತಾಲೂಕಿನ 138 ಮಂದಿ, ಕುಂದಾಪುರದ 70 ಮಂದಿ, ಕಾರ್ಕಳ ತಾಲೂಕಿನ 30 ಮಂದಿ, ಹೊರ ಜಿಲ್ಲೆಯ ಮೂವರು ಇದ್ದಾರೆ. 136 ಮಂದಿ ಆಸ್ಪತ್ರೆಗಳಿಗೆ, 55 ಮಂದಿ ಮನೆಗಳಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾರೆ. 1,632 ಜನರ ಮಾದರಿಗಳನ್ನು ಸಂಗ್ರಹಿಸಿದ್ದು 1,475 ಮಾದರಿಗಳ ವರದಿ ಬರಬೇಕಾಗಿದೆ. 102 ಮಂದಿ ಆಸ್ಪತ್ರೆಗಳಿಂದ, 127 ಮಂದಿ ಮನೆಗಳಿಂದ ಒಟ್ಟು 229 ಮಂದಿ ಬಿಡುಗಡೆಗೊಂಡಿದ್ದಾರೆ.
1,383 ಮಂದಿ ಆಸ್ಪತ್ರೆಗಳಲ್ಲಿ, 1,177 ಮಂದಿ ಮನೆಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.