ಉಡುಪಿ ಜಿಲ್ಲೆ: ಆಗಸ್ಟ್ 14; ಕೋವಿಡ್ ನಿಂದ 6 ಸಾವು, 322 ಪಾಸಿಟಿವ್; 2,262 ನೆಗೆಟಿವ್
Team Udayavani, Aug 14, 2020, 11:37 PM IST
ಸಾಂದರ್ಭಿಕ ಚಿತ್ರ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಆರು ಸಾವು ಸಂಭವಿಸಿದ್ದು ಒಟ್ಟು ಸಾವಿಗೀಡಾದವರ ಸಂಖ್ಯೆ 76ಕ್ಕೇರಿದೆ. ಶುಕ್ರವಾರ 322 ಪಾಸಿಟಿವ್ ಮತ್ತು 2,262 ನೆಗೆಟಿವ್ ಪ್ರಕರಣಗಳು ವರದಿಯಾಗಿವೆ.
ಉಡುಪಿ ತಾಲೂಕಿನ 63 ವರ್ಷದ, ಕುಂದಾಪುರ ತಾಲೂಕಿನ 86, 48, 48, 55 ವರ್ಷ ಪ್ರಾಯದವರು ಬೇರೆ ಬೇರೆ ಆರೋಗ್ಯ ಕಾರಣಗಳಿಗಾಗಿ ಮೃತ ಪಟ್ಟಿದ್ದಾರೆ. ಹಿರಿಯಡಕದ 56 ವರ್ಷದವರೊಬ್ಬರನ್ನು ಗುರುವಾರ ಜಿಲ್ಲಾ ಸ್ಪತ್ರೆಗೆ ಕರೆತಂದ ಬಳಿಕ ಮೃತಪಟ್ಟಿದ್ದಾರೆ. ಅವರ ಗಂಟಲ ದ್ರವವನ್ನು ಕಳುಹಿಸಿದ್ದು ಶನಿವಾರ ಪಾಸಿಟಿವ್ ವರದಿಯಾಗಿದೆ.
ಸೋಂಕಿತರಲ್ಲಿ ರೋಗಲಕ್ಷಣ ಇರುವ 52 ಪುರುಷರು, 36 ಮಹಿಳೆಯರು, ರೋಗ ಲಕ್ಷಣ ಇರದ 123 ಪುರುಷರು, 111 ಮಹಿಳೆಯರು ಇದ್ದಾರೆ. ಉಡುಪಿ ತಾಲೂಕಿನ 186, ಕುಂದಾಪುರ ತಾಲೂಕಿನ 95, ಕಾರ್ಕಳ ತಾಲೂಕಿನ 36, ಹೊರ ಜಿಲ್ಲೆಯ ಐವರು ಇದ್ದಾರೆ.
ಶುಕ್ರವಾರ 2,369 ಮಂದಿಯ ಗಂಟಲ ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. 1,640 ಜನರ ಮಾದರಿಗಳ ವರದಿ ಬರಬೇಕಾಗಿದೆ.
ಶುಕ್ರವಾರ 333 ಮಂದಿ ಆಸ್ಪತ್ರೆಗಳಿಂದ, 281 ಮಂದಿ ಮನೆಗಳಿಂದ ಒಟ್ಟು 614 ಮಂದಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1,301 ಮಂದಿ ಆಸ್ಪತ್ರೆಗಳಲ್ಲಿಯೂ, 1,249 ಮಂದಿ ಮನೆಗಳಲ್ಲಿಯೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಪು: 175 ಪಾಸಿಟಿವ್ ಪ್ರಕರಣ
ಕಾಪು: ಸ್ಥಳೀಯ ಶಾಸಕರ ಸಹಿತ ಕಾಪು ತಾಲೂಕಿನ ವಿವಿಧೆಡೆ ಕಳೆದ ಐದು ದಿನಗಳಲ್ಲಿ 175 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಉಳ್ತುರು ಗ್ರಾಮದ ಒಂದೇ ಮನೆಯ 15 ಮಂದಿಗೆ ಕೊರೊನಾ
ಕುಂದಾಪುರ: ಬೈಂದೂರಿನ 11 ಮತ್ತು ಕುಂದಾಪುರ ತಾಲೂಕಿನ 24 ಮಂದಿ ಸಹಿತ ಒಟ್ಟು 35 ಮಂದಿಗೆ ಶುಕ್ರವಾರ ಕೊರೊನಾ ಪಾಸಿಟಿವ್ ಬಂದಿದೆ. ಕುಂದಾಪುರ ತಾಲೂಕಿನ ಉಳ್ತುರು ಗ್ರಾಮದ ಒಂದೇ ಮನೆಯ 15 ಮಂದಿಗೆ ಕೊರೊನಾ ಬಾಧಿಸಿದ್ದು, ಪುರಸಭೆ ವ್ಯಾಪ್ತಿಯಲ್ಲಿ, ಸೇನಾಪುರ, ಹಕ್ಲಾಡಿಯ ತಲಾ ಮೂವರಿಗೆ ಬೈಂದೂರಿನ ಐವರು, ಉಪ್ಪುಂದದ ಮೂವರು, ನಾಡದ ಇಬ್ಬರು, ಹೇರಂಜಾಲಿನ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಪಡುಬಿದ್ರಿ ಇಬ್ಬರಿಗೆ ಕೊರೊನಾ
ಪಡುಬಿದ್ರಿ: ಪಡುಬಿದ್ರಿಯ ವ್ಯಾಪ್ತಿಯಲ್ಲಿ ಎರ್ಮಾಳು ಮತ್ತು ಹೆಜಮಾಡಿಯಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಹಿಂದೂ, ಸಿಕ್ಖ್ ಅರ್ಚಕರಿಗೆ 18,000 ರೂ.: ನೋಂದಣಿ ಶುರು
Yemen; ಕೇರಳದ ನರ್ಸ್‌ಗೆ ಗಲ್ಲು: ಯೆಮೆನ್ ಅಧ್ಯಕ್ಷ ಸಮ್ಮತಿ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.