ಉಡುಪಿ: 8 ಸಾವು, 270 ಕೋವಿಡ್ ಪಾಸಿಟಿವ್
Team Udayavani, Aug 18, 2020, 3:01 AM IST
ಸಾಂದರ್ಭಿಕ ಚಿತ್ರ
ಉಡುಪಿ: ಜಿಲ್ಲೆಯಲ್ಲಿ ಎಂಟು ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ಸೋಮವಾರ 270 ಮಂದಿಗೆ ಪಾಸಿಟಿವ್ ಮತ್ತು 520 ಮಂದಿಗೆ ನೆಗೆಟಿವ್ ವರದಿಯಾಗಿದೆ. ಜಿಲ್ಲೆಯಲ್ಲಿ ಒಂದು ದಿನದ ಅತ್ಯಧಿಕ ಕೊರೊನಾ ಸಾವು ಸೋಮವಾರ ಸಂಭವಿಸಿದೆ. ಲಭ್ಯ ಮಾಹಿತಿ ಪ್ರಕಾರ ಎಂಟು ಮಂದಿ ವಿವಿಧ ಚಿಕಿತ್ಸೆಗಳಿಗಾಗಿ ಆಸ್ಪತ್ರೆಗಳಿಗೆ ದಾಖಲಾಗಿ ಕೋವಿಡ್ ಪಾಸಿಟಿವ್‌ನೊಂದಿಗೆ ಮೃತಪಟ್ಟಿದ್ದಾರೆ.
ಪ್ರಾಥಮಿಕ ಮಾಹಿತಿಗಳಂತೆ ಕಾರ್ಕಳ ತಾಲೂಕಿನ ಇಬ್ಬರು, ಕುಂದಾಪುರ ತಾಲೂಕಿನ ಮೂವರು ಹಾಗೂ ಉಡುಪಿ ತಾಲೂಕಿನ ಮೂವರು ರವಿವಾರ ರಾತ್ರಿ ಮತ್ತು ಸೋಮವಾರ ಮೃತಪಟ್ಟಿದ್ದಾರೆ. ಇವರು ಉಡುಪಿ ಮತ್ತು ಬ್ರಹ್ಮಾವರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
376 ಮಾದರಿ ಸಂಗ್ರಹ
ಸೋಂಕಿತರಲ್ಲಿ ರೋಗ ಲಕ್ಷಣ ಇರುವ 61 ಪುರುಷರು, 25 ಮಹಿಳೆಯರು, ರೋಗ ಲಕ್ಷಣ ಇರದ 110 ಪುರುಷರು, 74 ಮಹಿಳೆಯರಿದ್ದಾರೆ. ಉಡುಪಿ ತಾಲೂಕಿನ 107, ಕುಂದಾಪುರ ತಾಲೂಕಿನ 141, ಕಾರ್ಕಳ ತಾಲೂಕಿನ 15 ಮಂದಿ ಇದ್ದಾರೆ. 60 ಮಂದಿ ಆಸ್ಪತ್ರೆಗಳಲ್ಲಿಯೂ 210 ಮಂದಿ ಮನೆಗಳ ಐಸೊಲೇಶನ್‌ಗೂ ದಾಖಲಾಗಿದ್ದಾರೆ. ಸೋಮವಾರ 376 ಜನರ ಮಾದರಿಗಳನ್ನು ಸಂಗ್ರಹಿಸಿದ್ದು 870 ಜನರ ವರದಿಗಳು ಬರಬೇಕಾಗಿವೆ.
85 ಮಂದಿ ಆಸ್ಪತ್ರೆಗಳಿಂದಲೂ 184 ಮಂದಿ ಮನೆಗಳ ಐಸೊಲೇಶನ್‌ನಿಂದಲೂ ಒಟ್ಟು 269 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1,372 ಮಂದಿ ಆಸ್ಪತ್ರೆಗಳಲ್ಲಿಯೂ 1,165 ಮಂದಿ ಮನೆಗಳ ಐಸೊಲೇಶನ್‌ನಲ್ಲಿಯೂ ಶುಶ್ರೂಷೆ ಪಡೆಯುತ್ತಿದ್ದಾರೆ.
ಪಡುಬಿದ್ರಿ: 2 ಪ್ರಕರಣ
ಪಡುಬಿದ್ರಿ: ಕೆಳಗಿನ ಪೇಟೆ ಹಾಗೂ ಬೆಂಗ್ರೆಯ ಪುರುಷರಿಬ್ಬರಿಗೆ ಸೋಮವಾರ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಜ್ವರದಿಂದ ಬಳಲುತ್ತಿರುವ ಕೆಳಗಿನ ಪೇಟೆಯ ವ್ಯಕ್ತಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೋರ್ವನನ್ನು ಹೋಂ ಕ್ವಾರಂಟೈನ್‌ಗೊಳಪಡಿಸಲಾಗಿದೆ.
ಕುಂದಾಪುರ, ಬೈಂದೂರು 69 ಮಂದಿಗೆ ಸೋಂಕು
ಕುಂದಾಪುರ: ಹಾಲಾಡಿ ಗ್ರಾಮದ 26 ಮಂದಿ ಸೇರಿದಂತೆ ಕುಂದಾಪುರ ತಾಲೂಕಿನಲ್ಲಿ 35 ಮಂದಿ ಹಾಗೂ ಬೈಂದೂರಿನ 34 ಮಂದಿಗೆ ಸೇರಿದಂತೆ ಒಟ್ಟು 69 ಮಂದಿಗೆ ಸೋಮವಾರ ಕೊರೊನಾ ಪಾಸಿಟಿವ್ ಬಂದಿದೆ. ಹಾಲಾಡಿಯ 26 ಮಂದಿ, ಕಟ್‌ಬೆಲೂ¤ರು, ತ್ರಾಸಿ, ಶಂಕರನಾರಾಯಣದ ತಲಾ ಮೂವರು, ಬೈಂದೂರು ತಾಲೂಕಿನ ಶಿರೂರಿನ 13 ಮಂದಿ, ಬಡಾಕೆರೆಯ 6 ಮಂದಿ, ಕಂಬದಕೋಣೆಯ ಐವರು, ಯಡ್ತರೆಯ ನಾಲ್ವರು, ನಾಡ, ಕಾಲೊ¤àಡಿನ ತಲಾ ಇಬ್ಬರು, ಹಳ್ಳಿಹೊಳೆ, ಹೆರಂಜಾಲಿನ ತಲಾ ಒಬ್ಬರಿಗೆ ಬಾಧಿಸಿದೆ.
ಹಿಂಜಾವೇಯಿಂದ ಅಂತ್ಯಸಂಸ್ಕಾರ
ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಮೃತರಾದ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಹಿಂದೂ ಜಾಗರಣ ವೇದಿಕೆಯ ಪ್ರಕಾಶ್ ಕುಕ್ಕೆಹಳ್ಳಿ, ಸಾಜನ್ ಶೆಟ್ಟಿ, ಮಹೇಶ್ ಗಂಗೊಳ್ಳಿ ನವೀನ್ ಗಂಗೊಳ್ಳಿ, ಮಹೇಶ್ ಕುಕ್ಕೆಹಳ್ಳಿ ತಂಡ ನೆರವೇರಿಸಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.