ಕೋವಿಡ್ ಚಿಕಿತ್ಸೆ : ಮಣಿಪಾಲ ಆಸ್ಪತ್ರೆಯಲ್ಲಿ 200 ಬೆಡ್
Team Udayavani, Jul 22, 2020, 10:42 AM IST
ಸಾಂದರ್ಭಿಕ ಚಿತ್ರ
ಉಡುಪಿ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆ ಖಾಸಗಿ ಆಸ್ಪತ್ರೆಗಳಿಗೆ ಬೆಡ್‌ಗಳನ್ನು ಒದಗಿಸಲು ಸರಕಾರ ಸೂಚನೆ ನೀಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ 200 ಬೆಡ್‌ಗಳನ್ನು ಕೋವಿಡ್ ಶುಶ್ರೂಷೆಗಾಗಿಯೇ ಸಿದ್ಧಪಡಿಸಲಾಗುತ್ತಿದೆ.
ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯ 140 ಬೆಡ್‌ಗಳಲ್ಲಿ ಸುಮಾರು 125 ಬೆಡ್‌ಗಳು ಈಗಾಗಲೇ ಭರ್ತಿಯಾಗಿವೆ. ಇಲ್ಲಿ ಐಸಿಯು (ಇಂಟೆನ್ಸಿವ್ ಕೇರ್ ಯುನಿಟ್) 8 ಮತ್ತು ಎಚ್‌ಡಿಯು (ಹೈ ಡಿಪೆಂಡೆನ್ಸಿ ಯುನಿಟ್) 10 ಒಟ್ಟು 18 ಇದ್ದು ಇವುಗಳಲ್ಲಿ 16 ಭರ್ತಿಯಾಗಿವೆ. ಹೀಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಹಂತ ಹಂತವಾಗಿ ಬೆಡ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಸದ್ಯ 100 ಬೆಡ್‌ಗಳನ್ನು ಸಿದ್ಧ ಪಡಿಸಲಾಗುವುದು. ಅನಂತರ 200 ಬೆಡ್‌ಗಳನ್ನು ಸಿದ್ಧಪಡಿಸಲಾಗುವುದು. ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆ ಸರಿಸುಮಾರಾಗಿ ಭರ್ತಿಯಾಗಿದ್ದು ಇದಾದ ಬಳಿಕ ರೋಗಿಗಳನ್ನು ಮಣಿಪಾಲದ ಬ್ಲಾಕ್‌ಗೆ ಸೇರ್ಪಡೆಗೊಳಿಸಲಾಗುವುದು. ಮಣಿಪಾಲದಲ್ಲಿ 12 ಐಸಿಯು ಮತ್ತು 14 ಎಚ್‌ಡಿಯು ಬೆಡ್‌ಗಳಿವೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಅವಿನಾಶ ಶೆಟ್ಟಿ ತಿಳಿಸಿದ್ದಾರೆ. ಪ್ರಾಯಃ ಜು. 22ರಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭವಾಗುವ ಸಾಧ್ಯತೆಗಳಿವೆ.
ಆದರ್ಶ ಆಸ್ಪತ್ರೆ: 32 ಬೆಡ್ ಭರ್ತಿ
ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ 32 ಬೆಡ್‌ಗಳನ್ನು ಕೊರೊನಾ ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಇವೆಲ್ಲವೂ ಭರ್ತಿಯಾಗಿವೆ ಎಂದು ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.
ತಪ್ಪು ಅಭಿಪ್ರಾಯ ಬೇಡ
ಬಹುತೇಕ ರೋಗಿಗಳಿಗೆ ರೋಗ ಲಕ್ಷಣ ಇಲ್ಲದೆ ಇರಬಹುದು ಅಥವಾ ಸೌಮ್ಯ ಲಕ್ಷಣ ಇರಬಹುದು. ಆದರೆ ಲಕ್ಷಣ ಇರುವವರಲ್ಲಿ ಬಹುತೇಕರಿಗೆ ಆಕ್ಸಿಜನ್ ಅಗತ್ಯವಿರುತ್ತದೆ. ಆದ್ದರಿಂದ ಸಾಮಾನ್ಯ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡು “ನಾವು ಸುಖವಾಗಿದ್ದೇವೆ. ಕೋವಿಡ್ ದೊಡ್ಡ ಸಂಗತಿಯಲ್ಲ. ಸೋಂಕು ಬಂದರೇನಂತೆ?’ ಎಂಬ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ಇತರರ ಕಷ್ಟ ಗೊತ್ತಿಲ್ಲ. ಇಂತಹ ಜನರಿಂದ ಪ್ರೇರಿತರಾದವರು ಗುಂಪು ಸೇರಿ ಇತರರಿಗೂ ಸೋಂಕು ಹರಡುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಸೋಂಕನ್ನು ಯಾರೂ ಲಘುವಾಗಿ ಪರಿಗಣಿಸಬೇಡಿ. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ಪಾಲಿಸಿ, ಗುಂಪು ಇರುವಲ್ಲಿ ತೆರಳಬೇಡಿ.
– ಡಾ| ಶಶಿಕಿರಣ್ ಉಮಾಕಾಂತ್, ನೋಡಲ್ ಅಧಿಕಾರಿ, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.