ಪರಿಸರ ದಿನದಂದೇ ಮರಗಳಿಗೆ ಕೊಡಲಿ
50-60 ವರ್ಷಗಳಷ್ಟು ಹಳೆಯ ಮರಗಳು; ಪರಿಸರ ಪ್ರೇಮಿಗಳ ಆಕ್ರೋಶ
Team Udayavani, Jun 6, 2020, 7:27 AM IST
ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕಡಿದು ಹಾಕಲಾದ ಮರ.
ಉಡುಪಿ: ಅರಣ್ಯ ಇಲಾಖೆ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಗಿಡಗಳನ್ನು ನೆಟ್ಟು ಒಂದೆಡೆ ಪರಿಸರ ಸಂರಕ್ಷಿಸುತ್ತಿದ್ದು, ಇನ್ನೊಂದೆಡೆ 50-60 ವರ್ಷದ ಹಳೆ ಮರಗಳನ್ನು ಕಡಿದು ಪರಿಸರ ನಾಶ ಮಾಡುತ್ತಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
11 ಮರ ತೆರವಿಗೆ ಮನವಿ
ಉಡುಪಿ ನಗರದ ಮಧ್ಯ ಭಾಗ ದಲ್ಲಿರುವ ಬನ್ನಂಜೆಯಲ್ಲಿ ಹೊಸದಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇಲ್ಲಿನ ಬೃಹತ್ ಮರಗಳು ವಾಹನಗಳ ಸಂಚಾರಕ್ಕೆ ಅಡಚಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅರಣ್ಯ ಇಲಾಖೆಗೆ 11 ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿ ದ್ದರು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಸಿಬಂದಿ ಕಳೆದ ಮೂರು ದಿನಗಳಿಂದ ನಿಲ್ದಾಣದ ಸುತ್ತಲಿನ ಮರಗಳ ತೆರವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ,
ಅರಣ್ಯ ಇಲಾಖೆ ಪರಿಸರ ದಿನಾಚರಣೆ ಅಂಗವಾಗಿ ನಗರದ ವಿವಿಧ ಕಡೆ 500ಕ್ಕೂ ಅಧಿಕ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪರಿಸರ ದಿನಾಚರಣೆಯ ಅರಿವಿಲ್ಲದೇ ಇಲಾಖೆಯವರು ಸುಮಾರು 50-60 ವರ್ಷದಿಂದ ಬದುಕಿದ್ದ ಮರಗಳನ್ನು ಬುಡ ಸಮೇತವಾಗಿ ಕಡಿದಿದ್ದಾರೆ. ಈ ಹಿಂದೆ ಬುಡ ಸಮೇತ ಸ್ಥಳಾಂತರಿಸಲಾದ ಮರಗಳು ಸತ್ತು ಹೋಗಿರುವ ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮರಗ ಳನ್ನು ಸ್ಥಳಾಂತರಿಸುವ ಕೆಲಸಕ್ಕೆ ಹೋಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪರಿಸರ ಪ್ರೇಮಿಗಳ ಆಕ್ರೋಶ!
ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮರಗಳನ್ನು ನೆಟ್ಟು ಪರಿಸರ ಉಳಿಸುವ ಭಾಷಣ ಮಾಡಿದರೆ ಸಾಲದು. ಪರಿಸರ ಅಮೂಲ್ಯವಾದ ಸಂಪತ್ತು. ಅದನ್ನು ಸಂರಕ್ಷಿಸುವ ಕೆಲಸದಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ತೊಡಗಿಸಿಕೊಳ್ಳಬೇಕು. ಪರಿಸರ ದಿನದಂದು ಮರಗಳನ್ನು ಕಡಿಯುವ ಮೂಲಕ ಅರಣ್ಯ ಸಂರಕ್ಷಕರು ಭಕ್ಷಕರಾಗಿದ್ದಾರೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರ ಬೆಳೆಸುವ ಗುರಿ
ಕೆಎಸ್‌ಆರ್‌ಟಿಸಿಯಿಂದ 11 ಮರಗಳ ತೆರವಿಗೆ ಮನವಿ ಬಂದಿತ್ತು. ಮರಗಳ ತೆರವಿನ ಕೆಲಸ ನಾಲ್ಕೈದು ದಿನಗಳಿಂದ ನಡೆಯುತ್ತಿದೆ. ನಮಗೆ ಪರಿಸರ ದಿನಾಚರಣೆಯಂದು ಕಡಿಯುವ ಇರಾದೆ ಇರಲಿಲ್ಲ. ಆದರೆ ಒಮ್ಮೆ ನೀಡಿದ ಆದೇಶವನ್ನು ತಡೆಯಲು ಸಾಧ್ಯವಾಗಿಲ್ಲ. ಒಂದು ಮರದ ಬದಲಾಗಿ 10 ಮರಗಳನ್ನು ಬೆಳೆಸುವ ಗುರಿ ನಮ್ಮದು.
– ಕ್ಲಿಫರ್ಡ್ ಲೋಬೋ, ಅರಣ್ಯಾಧಿಕಾರಿ, ಉಡುಪಿ
ನಾಚಿಕೆಗೇಡು
ಅರಣ್ಯ ಇಲಾಖೆ ಪರಿಸರ ದಿನದಂದು ಮರ ಕಡಿ ಯುವುದು ನಾಚಿಕೆಗೇಡು. ಈ ಹಿಂದೆ ಅರಣ್ಯ ಇಲಾಖೆಗೆ ಮರ ಗಳನ್ನು ಕಡಿಯದಂತೆ ಮನವಿ ಮಾಡಲಾಗಿತ್ತು. ಮರಗಳ ಕಡಿಯುವ ಬದಲಾಗಿ ಸಂಘ ಸಂಸ್ಥೆಗಳಿಗೆ ಹೇಳಿದರೆ ಅವರೇ ಮುಂದೆ ಬಂದು ಮರಗಳನ್ನು ಸ್ಥಳಾಂತರಿಸುತ್ತಿದ್ದರು.
– ಪ್ರೊ| ಬಾಲಕೃಷ್ಣ ಮುಧ್ದೋಡಿ, ಪರಿಸರ ಪ್ರೇಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.