ಅಪಾಯಕಾರಿ ಕಿರುಸೇತುವೆ: ಸುಸಜ್ಜಿತ ಸೇತುವೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ
ಕಾಂತಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂತಾವರ ಮತ್ತು ಬೋಳ ಗ್ರಾಮ ಸಂಪರ್ಕಿಸುವ ಸೇತುವೆ
Team Udayavani, Jan 19, 2020, 12:09 AM IST
ಕಾಂತಾವರ: ಕಾಂತಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂತಾವರ ಗ್ರಾಮ ಹಾಗೂ ಬೋಳ ಗ್ರಾಮ ಸಂಪರ್ಕಿಸುವ ಸೇತುವೆಯು ಕಿರಿದಾಗಿದ್ದು, ಅಪಾಯಕಾರಿಯಾಗಿದೆ. ಕಾಂತಾವರದ ಬೇಲಾಡಿಯ ಕಿರು ಸೇತುವೆಯು ಮಂಜರಪಲ್ಕೆ ಬೆಳುವಾಯಿ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು, ಬೇಲಾಡಿ ಬಳಿಯ ಕಿರು ಸೇತುವೆಯು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ.
ಬೇಲಾಡಿ ಕಾಂತಾವರ ಮುಖ್ಯ ರಸ್ತೆಯು ಅಗಲೀಕರಣಗೊಂಡಿದ್ದು, ಸೇತುವೆ ಮಾತ್ರ ಕಿರಿದಾಗಿದ್ದು ವಾಹನ ಸವಾರರು ಅತೀ ವೇಗವಾಗಿ ಸಂಚರಿಸಿದಲ್ಲಿ ಕಿರಿದಾದ ಸೇತುವೆಯನ್ನು ಗಮನಿಸದೆ ಅವಘಡ ಸಂಭವಿಸಬಹುದಾಗಿದೆ. ಸೇತುವೆ ಕಿರಿದಾ ಗಿದ್ದು ಎರಡು ವಾಹನಗಳು ಏಕಕಾಲಕ್ಕೆ ಸಂಚರಿಸುವುದು ಕಷ್ಟ ಸಾಧ್ಯವಾಗಿದೆ. ಎದುರಿನಿಂದ ವಾಹನ ಬಂದಲ್ಲಿ ಮತ್ತೂಂದು ಪಾರ್ಶ್ವದಲ್ಲಿರುವ ವಾಹನವು ನಿಲ್ಲಿಸಬೇಕಾಗುತ್ತದೆ.
ಸೇತುವೆಯ ಎರಡು ಪಾರ್ಶ್ವಗಳು ಇಳಿಜಾರಿನಿಂದ ಕೂಡಿದ್ದು ವಾಹನಗಳ ವೇಗವು ಅತಿಯಾಗಿರುವುದರಿಂದ ಅಪಘಾತಗಳು ಸಂಭವಿಸಬಹುದಾಗಿದೆ. ಮೂಡುಬಿದಿರೆ ಸಂಪರ್ಕಿ ಸಲು ಅತೀ ಹತ್ತಿರ ರಸ್ತೆ ಮಂಜರಪಲ್ಕೆಯಿಂದ ಬೋಳ ಬೇಲಾಡಿ ಕಾಂತಾವರ ಮಾರ್ಗವಾಗಿ ಬೆಳುವಾಯಿ ಪೇಟೆ ಹಾಗೂ ಮೂಡುಬಿದಿರೆ ಮುಖ್ಯ ಪೇಟೆ ಯನ್ನು ಸಂಪರ್ಕಿಸಲು ಅತೀ ಹತ್ತಿರದ ರಸ್ತೆಯಾದ ಕಾರಣ ಬಹುತೇಕ ವಾಹನಗಳು ಈ ರಸ್ತೆಯನ್ನೇ ಅವಲಂಬಿಸಿವೆ. ಕಾಂತಾವರ ಬೇಲಾಡಿ ಗ್ರಾಮದ ಗ್ರಾಮಸ್ಥರು ಪಡುಬಿದ್ರಿ, ಬೆಳ್ಮಣ್ ಸಂಪರ್ಕಿಸಲು ಅತೀ ಮುಖ್ಯ ರಸ್ತೆಯಾದ ಕಾರಣ ಬಹುತೇಕ ಮಂದಿ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.
ಈ ಸೇತುವೆ ಅಭಿವೃದ್ಧಿ ಕುರಿತು ಗ್ರಾಮಸ್ಥರು ಸಾಕಷ್ಟು ಬಾರಿ ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಲಾದರೂ ಕಿರು ಸೇತುವೆಗೆ ಮಾತ್ರ ಮುಕ್ತಿ ಇನ್ನೂ ಕಂಡಿಲ್ಲ. ಗ್ರಾಮಸ್ಥರು ಹಲವಾರು ಗ್ರಾಮಸಭೆಗಳಲ್ಲಿ ಕಿರು ಸೇತುವೆ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದ್ದರೂ ಸೇತುವೆ ಕಾಮಗಾರಿ ಮಾತ್ರ ಮರೀಚಿಕೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇನ್ನಾದರೂ ಬೇಲಾಡಿ ಗ್ರಾಮಸ್ಥರ ಹಲವಾರು ವರ್ಷಗಳ ಬೇಡಿಕೆಯು ಈಡೇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ
ಬಿರುಕು ಬಿಟ್ಟ ಸೇತುವೆ
ಕಿರು ಸೇತುವೆಯು ಬಹಳ ಹಳೆಯ ಸೇತುವೆಯಾಗಿದ್ದು ಸೇತುವೆಯ ತಳಭಾಗದ ಕಲ್ಲುಗಳು ನೀರಿನ ರಭಸಕ್ಕೆ ಕೆಳಕ್ಕೆ ಜಾರಿದ್ದು, ಸೇತುವೆಯು ಕೆಲವೆಡೆ ಬಿರುಕು ಬಿಟ್ಟಿದೆ. ಸೇತುವೆಯ ಮೇಲ್ಭಾಗದ ತಡೆಗೋಡೆಯು ಮುರಿದು ಬಿದ್ದಿದೆ.
ಶೀಘ್ರ ಕಾಮಗಾರಿ
ಬೇಲಾಡಿ ಕಿರು ಸೇತುವೆ ವಿಸ್ತರಣೆ ಕುರಿತು ಶಾಸಕರ ಗಮನಕ್ಕೆ ತಂದಿದ್ದು ಶಾಸಕರು ವಿಶೇಷ ಮುತುವರ್ಜಿ ವಹಿಸಿ 70ಲಕ್ಷ ರೂ. ಅನುದಾನ ಮಂಜೂರುಗೊಳಿಸಿದ್ದು ಟೆಂಡರ್ ಪೂರ್ಣಗೊಂಡಿದೆ. ಸೇತುವೆ ನಿರ್ಮಿಸುವ ಸ್ಥಳದ ಮಣ್ಣಿನ ತಪಾಸಣೆಗೆ ಕೊಂಡೊಯ್ದಿದ್ದು ವರದಿ ಕೈ ಸೇರಿದ ಬಳಿಕ ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು.
-ಪ್ರವೀಣ್ ಕೋಟ್ಯಾನ್, ತಾ.ಪಂ. ಸದಸ್ಯರು
ಬಹು ದಶಕಗಳ ಬೇಡಿಕೆ
ಬೇಲಾಡಿ ಗ್ರಾಮದ ಬಹುಬೇಡಿಕೆಯಾದ ಕಿರು ಸೇತುವೆಯು ಸ್ಥಳೀಯರಿಗೆ ಅತೀ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರ ಸೇತುವೆ ಅಭಿವೃದ್ಧಿ ಕಾಮಗಾರಿಯು ನಡೆಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಬಹು ದಶಕಗಳ ಬೇಡಿಕೆಯನ್ನು ಈಡೇರಿಸುವಂತಾಗಬೇಕು.
-ಪ್ರಭಾಕರ ಕುಲಾಲ್, ಅಧ್ಯಕ್ಷರು, ಪುಂಡರೀಕ ವಿಷ್ಣುಮೂರ್ತಿ ಭಜನ ಮಂಡಳಿ ಬೇಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
Karkala: ಬೈಕ್ ಢಿಕ್ಕಿ; ಗಾಯ
ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.