Udupi: ಘನ ಸರಕು ವಾಹನ ಸಂಚಾರ: ಯಡಾಡಿ ಸೇತುವೆಗೆ ಅಪಾಯ
ಲೋಕೋಪಯೋಗಿ ಇಲಾಖೆಯಿಂದ ಪೊಲೀಸ್, ಆರ್‌ಟಿಒಗೆ ದೂರು ನೀಡಿದರೂ ಸ್ಪಂದನೆಯಿಲ್ಲ
Team Udayavani, Jul 29, 2024, 1:00 PM IST
ಉಡುಪಿ: ರಸ್ತೆಯ ನಿಗದಿತ ಸಾಮರ್ಥ್ಯ ಮೀರಿದ ಘನವಾಹನಗಳ ಸಂಚಾರದಿಂದಾಗಿ ಯಡ್ತಾಡಿ ಸಮೀಪದ ಕಿರು ಸೇತುವೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಕಂಡು ಬಂದಿದೆ. 20 ಮೆಟ್ರಿಕ್ ಟನ್‌ಗಿಂತಲೂ ಅಧಿಕ ಭಾರ ಇರುವ ಸರಕು ವಾಹನಗಳು ಹುಣ್ಸಮಕ್ಕಿ, ಬಿದ್ಕಲ್ ಕಟ್ಟೆ, ಸಾೖಬರಕಟ್ಟೆ, ಯಡ್ತಾಡಿ, ಬಾರಕೂರು ಮಾರ್ಗದಲ್ಲಿ ಸಂಚರಿಸುತ್ತಿವೆ. ಇದರಿಂದ ಈ ರಸ್ತೆಯ ಮತ್ತು ಅದರಲ್ಲಿರುವ ಸೇತುವೆಗಳು ಶಿಥಿಲಗೊಳ್ಳುತ್ತಿವೆ ಎಂದು ಆಪಾದಿಸಲಾಗಿದೆ. ಹೆದ್ದಾರಿಯಲ್ಲಿ ಸಾಗಬಹುದಾದ ಲಾರಿಗಳು ಒಳಮಾರ್ಗವನ್ನು ಬಳಸುತ್ತಿರುವ ಬಗ್ಗೆ ಖುದ್ದು ಲೋಕೋಪಯೋಗಿ ಇಲಾಖೆಯೇ ಪೊಲೀಸ್ ಹಾಗೂ ಆರ್‌ಟಿಒಗೆ ದೂರು ಸಲ್ಲಿಸಿದೆ.
ರಾಜ್ಯ ಹೆದ್ದಾರಿಯಲ್ಲಿ ಭಾರೀ ಗಾತ್ರದ ಅಥವಾ ಸರಕು ಸಾಗಾಟದ ವಾಹನಗಳು ಸಂಚಾರ ಮಾಡುವುದರಿಂದ ರಸ್ತೆಗೆ ವರ್ಷವೂ ತೇಪೆ ಹಚ್ಚಲೇ ಬೇಕಾದಷ್ಟು ಗುಂಡಿಗಳು ಬೀಳುತ್ತಿವೆ. ಸ್ಥಳೀಯರ ವಾಹನ ಸಂಚಾರಕ್ಕೂ ಸಮಸ್ಯೆಯಾಗುತ್ತದೆ. ದ್ವಿಪಥವಾಗಿದ್ದರಿಂದ ಭಾರೀ ಸರಕು ತುಂಬಿದ ವಾಹನಗಳು ಬರುವುದರಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನಿಯಮ ಪಾಲನೆ ಕಟ್ಟುನಿಟ್ಟಾಗಿ ಆಗಬೇಕು ಎಂಬುದು ಸ್ಥಳೀಯರ ಆಗ್ರಹ.
ಅಪಾಯದ ಎಚ್ಚರಿಕೆ
ಬಾರಕೂರು ಹೊಳೆಗೆ ನಿರ್ಮಿಸಿರುವ ಸೇತುವೆ, ಯಡ್ತಾಡಿ ಸಮೀಪದ ಕಿರು ಸೇತುವೆ ಹೀಗೆ ಈ ಮಾರ್ಗದಲ್ಲಿಸಣ್ಣಪುಟ್ಟ ಮೂರ್‍ನಾಲ್ಕು ಸೇತುವೆ ಸಿಗುತ್ತದೆ. ಬಾರಕೂರು ಸೇತುವೆ ಹೊರತುಪಡಿಸಿ ಉಳಿದೆಲ್ಲವೂ ಭಾರೀ ಗಾತ್ರದ ವಾಹನ ಸಂಚಾರಕ್ಕೆ ಅಷ್ಟೊಂದು ಸುರಕ್ಷಿತವಲ್ಲ. ಇದನ್ನು ಉಲ್ಲೇಖೀಸಿ ಪಿಡ ಬ್ಲ್ಯುಡಿ ಇಲಾಖೆ ಪೊಲೀಸ್ ಮತ್ತು ಆರ್ ಟಿಒಗೆ ಮನವಿ ಸಲ್ಲಿಸಿದೆ.
ಬೋರ್ಡ್ ಅಳವಡಿಸಿದ್ದು ಮಾತ್ರ!
ಸೇತುಗಳಿಗೂ ಅಪಾಯ ಎದುರಾಗಬಹುದು ಎಂಬ ನೆಲೆಯಲ್ಲಿ ಇಲಾಖೆಯು ಯಡ್ತಾಡಿ ಸಮೀಪದಲ್ಲಿ ಸರಕು ಸಹಿತ 20 ಮೆಟ್ರಿಕ್ ಟನ್‌ಕಿಂತ ಅಧಿಕ ಭಾರವಿರುವ ವಾಹನಗಳಿಗೆ ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ ಎಂದು ಬೋರ್ಡ್ ಹಾಕಿದ್ದರೂ ಘನ ವಾಹನ ಸಂಚಾರ ನಿರಂತರವಾಗಿದೆ.
ಇಲಾಖೆಗಳ ನಡುವಿನ ಸಮಸ್ಯೆ
20 ಮೆಟ್ರಿಕ್ ಟನ್‌ಗಿಂತ ಅಧಿಕ ಭಾರವಿರುವ ವಾಹನ ಸಂಚಾರ ನಿಷೇಧಿಸಿ ನಾಮಫಲಕ ಅಳವಡಿಸಿದ್ದು ಲೋಕೋಪಯೋಗಿ ಇಲಾಖೆ. ಆದರೆ ವಾಹನ ಟ್ರಾಫಿಕ್ ಕಂಟ್ರೋಲ್ ಅದರ ವ್ಯಾಪ್ತಿಗೆ ಬರುವುದಿಲ್ಲ. ರಸ್ತೆ ನಿರ್ಮಾಣ, ಗುಂಡಿಗಳಿಗೆ ತೇಪೆ ಹಚ್ಚುವ ಕೆಲಸ ಪಿಡಬ್ಲ್ಯುಡಿಯದ್ದು. ನಿಷೇಧಿತ ವಾಹನಗಳ ಸಂಚಾರ ತಡೆಯುವುದು ಪೊಲೀಸ್ ಹಾಗೂ ಆರ್ ಟಿಒ ಕೆಲಸ. ಈ ಇಲಾಖೆಗಳು ಸಮನ್ವಯದಿಂದ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರಾದ ಪ್ರಗತಿಪರ ಕೃಷಿಕ ಸತೀಶ್ ಕುಮಾರ್ ಶೆಟ್ಟಿ ಯಡ್ತಾಡಿ ಆಗ್ರಹಿಸಿದ್ದಾರೆ.
ದೂರು ಬಂದಿದೆ
ಸರಕು ಸಹಿತ 20 ಮೆಟ್ರಿಕ್ ಟನ್‌ಕಿಂತ ಅಧಿಕ ಭಾರವಿರುವ ವಾಹನಗಳು ಈ ರಸ್ತೆಯಲ್ಲಿ ಓಡಾಟ ಮಾಡುವುದರಿಂದ ಭವಿಷ್ಯದಲ್ಲಿ ಯಡ್ತಾಡಿ ಸಮೀಪದ ಸೇತುವೆಗೆ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಈ ಬಗ್ಗೆ ಸ್ಥಳೀಯರಿಂದಲೂ ದೂರುಗಳು ಬಂದಿದೆ. ಆರ್‌ಟಿಒ ಮತ್ತು ಪೊಲೀಸ್ ಇಲಾಖೆಗೂ ಮಾಹಿತಿ ನೀಡಿದ್ದೇವೆ.
-ಮಂಜುನಾಥ್ ಎಸ್.,
ಎಂಜಿನಿಯರ್,ಲೋಕೋಪಯೋಗಿ ಇಲಾಖೆ
ಟೋಲ್ ತಪ್ಪಿಸಲು ಒಳಮಾರ್ಗ ಬಳಕೆ?
ಈ ನಡುವೆ, ಕೆಲವು ಘನ ವಾಹ ನ ಗಳು ಟೋಲ್ ತಪ್ಪಿಸಲೆಂದೇ ಒಳ ಮಾರ್ಗಬಳಸುತ್ತಿವೆ ಎಂಬ ಆಪಾದನೆ ಇದೆ. ಹೆದ್ದಾರಿಯಲ್ಲಿ ಟೋಲ್ ಪ್ಲಾಜಾ ಇರುವುದು ಕುಂದಾಪುರ-ಬ್ರಹ್ಮಾವರ ನಡುವಿನ ಸಾಸ್ತಾನದಲ್ಲಿ. ಕುಂದಾಪುರದಿಂದ ಉಡುಪಿ ಕಡೆಗೆ ಬರುವ ಸರಕು ಸಾಗಾಟದ ವಾಹನಗಳು ಬಸ್ರೂರು ಮೂರ್‌ಕೈ ಅಲ್ಲಿ ಎಡ ತಿರುವು ಪಡೆದು ಹುಣ್ಸಮಕ್ಕಿ ಬಿದ್ಕಲ್‌ಕಟ್ಟೆ, ಸಾೖಬರ್‌ಕಟ್ಟೆ, ಯಡ್ತಾಡಿ, ಬಾರಕೂರು ಮಾರ್ಗವಾಗಿ ಬ್ರಹ್ಮಾವರದಲ್ಲಿ ರಾ.ಹೆದ್ದಾರಿ ಸೇರುತ್ತಿವೆ. ಇನ್ನು ಕೆಲವು ಕುಂದಾಪುರದಿಂದ ಕೋಟದವರೆಗೂ ರಾ.ಹೆದ್ದಾರಿಯಲ್ಲೇ ಬಂದು ಕೋಟ ವಿವೇಕ ಹೈಸ್ಕೂಲ್ ಎದುರು ಎಡಕ್ಕೆ ತಿರುವು ಪಡೆದು ಸಾೖಬರ್ ಕಟ್ಟೆ, ಯಡ್ತಾಡಿ, ಬಾರಕೂರು ಮಾರ್ಗವಾಗಿ ಬ್ರಹ್ಮಾವರದಲ್ಲಿ ರಾ.ಹೆದ್ದಾರಿಸೇರುತ್ತವೆ. ಈ ಮೂಲಕ ಟೋಲ್ ತಪ್ಪಿಸುತ್ತವೆ. ಇನ್ನು ಬ್ರಹ್ಮಾವರದಿಂದ ನೇರವಾಗಿ ಬಾರಕೂರು, ಯಡ್ತಾಡಿ, ಸಾೖಬರಕಟ್ಟೆ ಮಾರ್ಗವಾಗಿ ಸಿದ್ದಾಪುರ, ಬಾಳೆಬರೆ ಘಾಟಿ ಮೂಲಕ ಶಿವಮೊಗ್ಗ ಪ್ರದೇಶಿಸುವ ಭಾರೀ ಗಾತ್ರದ ವಾಹನಗಳಿಂದಲೂ ಸಮಸ್ಯೆಯಾಗುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.