ಕಂಟೈನ್‌ಮೆಂಟ್ ವ್ಯಾಪ್ತಿ ಹೆಚ್ಚಳಕ್ಕೆ ಆದೇಶ
ಕೋವಿಡ್ ಪ್ರಕರಣ ನಿಯಂತ್ರಿಸಲು ಡಿಸಿ ಕಟ್ಟುನಿಟ್ಟಿನ ಸೂಚನೆ
Team Udayavani, Jul 25, 2020, 9:25 AM IST
ಉಡುಪಿ: ಜಿಲ್ಲೆಯಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಂಟೈನ್‌ಮೆಂಟ್ ವ್ಯಾಪ್ತಿ ಯನ್ನೂ ಹೆಚ್ಚಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಗರ ಪ್ರದೇಶದಲ್ಲಿ ಕೋವಿಡ್ ಕಂಡು ಬಂದರೆ 1 ಕಿ.ಮೀ.ಗಳಷ್ಟು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪೂರ್ತಿ ಗ್ರಾಮವನ್ನೇ ಕಂಟೈನ್‌ಮೆಂಟ್ ವಲಯವೆಂದು ಪರಿಗಣಿಸಲಾಗುತ್ತದೆ.
ಕಾಟಾಚಾರಕ್ಕಷ್ಟೇ ಸೀಮಿತಗೊಂಡಿದ್ದ ಕಂಟೈನ್‌ಮೆಂಟ್ ವ್ಯಾಪ್ತಿ
ಜಿಲ್ಲೆಯಲ್ಲಿ ಪಾಸಿಟಿವ್ ರೋಗಲಕ್ಷಣ ಕಂಡುಬರುವ ರೋಗಿಯ ಮನೆ, ಅಂಗಡಿ, ಅಪಾರ್ಟ್‌ಮೆಂಟ್ ಸಹಿತ ಆ ಪ್ರದೇಶವನ್ನೆಲ್ಲ ಕಂಟೈನ್‌ಮೆಂಟ್ ಝೋನ್ ಮಾಡಬೇಕೆಂಬ ನಿಯಮವಿದೆ. ಆದರೆ ಅಧಿಕಾರಿಗಳು ಇಷ್ಟರವರೆಗೆ ಮನೆಗಳನ್ನಷ್ಟೇ ಸೀಲ್‌ಡೌನ್ ಮಾಡಿ ಸುಮ್ಮನಾಗುತ್ತಿದ್ದರು. ಕಂಟೈನ್‌ಮೆಂಟ್ ಝೋನ್ ಕುರಿತು ಸ್ಥಳೀಯರು ಸಹಿತ ಸಾರ್ವಜನಿಕರಿಗೆ ಮಾಹಿತಿಯನ್ನೇ ನೀಡುತ್ತಿರಲಿಲ್ಲ. ಅಧಿಕಾರಿಗಳಲ್ಲಿಯೂ ನಿಖರ ಮಾಹಿತಿ ಇರುತ್ತಿರಲಿಲ್ಲ. ಈ ಎಲ್ಲ ಅಂಶಗಳು ಕೂಡ ಕೊರೊನಾ ಉಲ್ಬಣಗೊಳ್ಳಲು ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ 490 ಕಂಟೈನ್‌ಮೆಂಟ್ ವಲಯಗಳು
ಜಿಲ್ಲೆಯಲ್ಲಿ ಒಟ್ಟು 1,315 ಕಂಟೈನ್‌ಮೆಂಟ್ ವ್ಯಾಪ್ತಿಗಳನ್ನು ಮಾಡಲಾಗಿದೆ. 490 ಪ್ರಸ್ತುತ ಸಕ್ರಿಯವಾಗಿದೆ. ಆದರೆ ಹೆಚ್ಚಿನ ಕಂಟೈನ್‌ಮೆಂಟ್ ಝೋನ್ ಕುರಿತು ತುಂಬಾ ವಿಳಂಬವಾಗಿ ಅಧಿಕೃತ ಸೂಚನೆ ಹೊರ ಬೀಳುತ್ತಿದೆ. ಅದುವರೆಗೂ ಈ ಪ್ರದೇಶದಲ್ಲಿ ಎಂದಿನ ಜನಸಂಚಾರ, ವಹಿವಾಟು ನಡೆಯುತ್ತಿರುತ್ತದೆ. ಈ ಮೂಲಕ ಕೊರೊನಾ ಜನರಿಂದ ಜನರಿಗೆ ಹರಡುತ್ತಲೇ ಇರುತ್ತದೆ.
ನಿಯಮ ಉಲ್ಲಂಘಿಸಿದರೆ ಕ್ರಮ
ಹೆಚ್ಚು ಪ್ರಕರಣಗಳು ದೃಢವಾಗುತ್ತಿರುವ ಕಾರಣದಿಂದಾಗಿ ಇನ್ನು ಮಂದೆ ಸೋಂಕಿತ ವ್ಯಕ್ತಿ ಪತ್ತೆಯಾದ ಪ್ರದೇಶವನ್ನೇ ಸೀಲ್‌ಡೌನ್ ಮಾಡಬೇಕು. ನಿಯಂತ್ರಣ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಬಹಳಷ್ಟು ದಿನಗಳಿಂದ ಹೇಳುತ್ತಿದ್ದರೂ ಅದರ ಪಾಲನೆ ಮಾತ್ರ ಜಿಲ್ಲೆಯಲ್ಲಿ ಆಗುತ್ತಿರಲಿಲ್ಲ. ಇನ್ನು ಮುಂದೆ ಕೋವಿಡ್‌ನಿಂದ ಯಾರಾದರೂ ಮೃತಪಟ್ಟರೆ ನಿಯಂತ್ರಿತ ವಲಯ ರಚನೆ ಮಾಡುವ ಅಧಿಕಾರಿಗಳ ಮೇಲೆ ಕ್ರಮ ಜರಗಿಸುವುದಾಗಿ ಜಿಲ್ಲಾಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಇನ್ಸಿಡೆಂಟ್ ಕಮಾಂಡರ್‌ಗಳ ನೇಮಕ
ಇದುವರೆಗೆ ಜಿಲ್ಲೆಯ ಎಲ್ಲ ನಿಯಂತ್ರಿತ ವಲಯಗಳಿಗೆ ಕುಂದಾಪುರ ಉಪವಿಭಾಗಾಧಿಕಾರಿಗಳೇ ಇನ್ಸಿಡೆಂಟ್ ಕಮಾಂಡರ್ ಆಗಿದ್ದರು. ಈಗ ಸರಕಾರ ಮತ್ತೆ ಮೂವರು ಇನ್ಸಿಡೆಂಟ್ ಕಮಾಂಡರ್‌ಗಳನ್ನು ನಿಯೋಜಿಸಲು ಅನುಮತಿ ನೀಡಿದೆ. ಕಂಟೈನ್‌ಮೆಂಟ್ ವ್ಯಾಪ್ತಿ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.