ರಕ್ತ ಸಂಗ್ರಹ ಇಳಿಕೆ: ಇಂದು ರಕ್ತದಾನ ಶಿಬಿರ
Team Udayavani, Apr 29, 2020, 5:12 AM IST
ಸಾಂದರ್ಭಿಕ ಚಿತ್ರ..
ಉಡುಪಿ: ವಿವಿಧ ವಲಯಗಳ ಮೇಲೆ ಕೋವಿಡ್-19 ಪರಿಣಾಮ ಬಿದ್ದಿದ್ದು ಇವುಗಳಲ್ಲಿ ಆಸ್ಪತ್ರೆ ಗಳಿಗೆ ರಕ್ತದ ಕೊರತೆ ಕೂಡ ಒಂದು. ಲಾಕ್‌ಡೌನ್‌ನಿಂದಾಗಿ ಕೆಲ ಆಸ್ಪತ್ರೆ, ಕಾಲೇಜು, ಸಂಘ-ಸಂಸ್ಥೆಗಳಲ್ಲಿ ನಡೆಸಬೇಕಾಗಿದ್ದ ರಕ್ತದಾನ ಶಿಬಿರ ರದ್ದುಗೊಂಡು ರಕ್ತ ಸಂಗ್ರಹ ಇಳಿಮುಖವಾಗಿದೆ.
ಹಸಿದವರಿಗೆ ಆಹಾರ ನೀಡಿ ಹಸಿವನ್ನು ನೀಗಿಸಿದ ಹಿರಿಮೆಗೆ ಉಡುಪಿ ಜಿಲ್ಲೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಹಾಗೇ ರಕ್ತದಾನದ ಮೂಲಕ ನೂರಾರು ಜೀವಗಳನ್ನ ಉಳಿಸುವ ಜವಾಬ್ದಾರಿ ಜನರ ಮೇಲಿದೆ. ಈ ನಿಟ್ಟಿನಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಹೃದಯವೈಶಾಲ್ಯ ಮೆರೆಯುವಂತಾಗಲಿ ಎಂದು ಉಡುಪಿ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ, ಜಿಲ್ಲಾ ಸರಕಾರಿ ಎನ್‌ಪಿಎಸ್ ನೌಕರರ ಸಂಘ, ಜಿಲ್ಲಾ ಪತ್ರಕರ್ತರ ಸಂಘ, ಜಯಂಟ್ಸ್ ಗ್ರೂಪ್, ಗಂಗೊಳ್ಳಿ ಕರಾವಳಿ ಸಂಘದ ಜಂಟಿ ಆಶ್ರಯದಲ್ಲಿ ಎ. 29ರ ಬುಧವಾರ ಅಜ್ಜರಕಾಡು ಪುರಭವನದ ಬಳಿಯ ನೂತನ ಗ್ರಂಥಾಲಯ ಕಟ್ಟಡದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿದೆ.
50 ಯೂನಿಟ್ ರಕ್ತ ಸಂಗ್ರಹದ ನಿರೀಕ್ಷೆ ಇದ್ದು, ರಕ್ತದಾನಿಗಳು ಶಿಬಿರಕ್ಕೆ ಬೆಂಬಲ ನೀಡುವಂತೆ ವಿವಿಧ ಸಂಘಟನೆ ವಿನಂತಿಸಿದೆ. ಸಕಾಲ ಸದ್ಯ ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಜನ ಸ್ವಯಂಪ್ರೇರಿತವಾಗಿ ಮುಂದೆ ಬಂದು ಬ್ಲಿಡ್ ಬ್ಯಾಂಕ್‌ಗಳಿಗೆ ಸ್ವಯಂ ಪ್ರೇರಿತ ರಕ್ತದಾನ ಮಾಡಲು ಸಕಾಲ ವಾಗಿದೆ. ಆ ಮೂಲಕ ಅನೇಕ ಜೀವ ರಕ್ಷಿಸಲು ಸಾಧ್ಯವಿದೆ. ಹೆಚ್ಚಿನವರಿಲ್ಲಿ ರಕ್ತದಾನ ಮಾಡಿದರೆ ಈ ಸಮಯದಲ್ಲಿ ತೊಂದರೆ ಆಗುತ್ತದೆ ಎಂಬ ಮನೋ ಭಾವ ಇದ್ದು, ಇದನ್ನು ತೊಡೆಯಲು ಮತ್ತು ಜಿಲ್ಲಾಸ್ಪತ್ರೆಗೆ ತೆರಳಿ ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಎದುರಾಗದು ಎಂದು ಆಡಳಿತ ಅಧಿಕಾರ ಮತ್ತು ವಿವಿಧ ಸಂಘಟನೆಗಳಿಂದ ತಿಳಿವಳಿಕೆ ಮೂಡಿಸುವ ಕೆಲಸ ಸಾಗುತ್ತಿದೆ.
ಜಿಲ್ಲಾಡಳಿತದ ನಿರ್ದೇಶನದಂತೆ ಶಿಬಿರ
ಜಿಲ್ಲಾಡಳಿತದ ಎಲ್ಲ ನೀತಿ ನಿಬಂಧನೆಯನ್ನುಗಳಾದ ಸಾಮಾಜಿಕ ಅಂತರ, ಜ್ವರದ ಪರೀಕ್ಷೆ , ಒಬ್ಬ ವ್ಯಕ್ತಿಯ ಬಳಿಕ ಬೆಡ್‌ಶೀಟ್ ಬದಲಾವಣೆ ಹೀಗೆ ಎಲ್ಲ ಮುಂಜಾಗೃತಿ ಕ್ರಮಗಳನ್ನು ಕಟ್ಟುನಿಟ್ಟಿನಲ್ಲಿ ಪಾಲಿಸುವ ವ್ಯವಸ್ಥೆ ಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಸದ್ಯ ಶೇ. 60 ಜಿಲ್ಲಾ ರಕ್ತನಿಧಿ ರಕ್ತದ ಕೊರತೆಯನ್ನು ಎದುರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.