ಸಂಘ ಸಂಸ್ಥೆಗಳ ಸಹಭಾಗಿತ್ವದಿಂದ ಸರಕಾರಕ್ಕೆ ಹೊರೆ ಇಳಿಕೆ: ಡಿಸಿ
ಆಶಾ ಕಾರ್ಯಕರ್ತೆಯರಿಗೆ ಸಹಾಯಧನ, ಅಂಗವಿಕಲರಿಗೆ ಕಿಟ್ ವಿತರಣೆ
Team Udayavani, Apr 21, 2020, 5:24 AM IST
ಉಡುಪಿ: ಜಿಲ್ಲೆಯಲ್ಲಿ ದಿನವೊಂದಕ್ಕೆ 15ಸಾವಿರಕ್ಕೂ ಮಿಕ್ಕಿದ ಬಡ ಕೂಲಿ ಕಾರ್ಮಿಕರಿಗೆ ನಿತ್ಯ ಎರಡು ಹೊತ್ತು ಊಟವನ್ನು ವಿವಿಧ ಸಂಘಟನೆಗಳ ಸಹಕಾರದಲ್ಲಿ ವಿತರಣೆಯಾಗುತ್ತಿದೆ. ವಿವಿಧ ಸಂಘಟನೆಗಳು ಸಹಭಾಗಿತ್ವ ವಹಿಸಿಕೊಂಡು ಇದನ್ನು ನಡೆಸುತ್ತಿವೆ. ಇದರಿಂದ ಸರಕಾರದ ಮೇಲಿನ ದೊಡ್ಡ ಹೊರೆ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕಡಿಯಾಳಿ ಶಾರದಾ ಕಲ್ಯಾಣ ಮಂಟಪದಲ್ಲಿ ಸೋಮವಾರ ಉಡುಪಿ ವಿಧಾನಸಭಾ ಕ್ಷೇತ್ರದ 192 ಆಶಾ ಕಾರ್ಯಕರ್ತರಿಗೆ ತಲಾ 2,000 ರೂ. ಪ್ರೋತ್ಸಾಹ ಧನ, ಉಡುಪಿ ಜಿಲ್ಲಾ ಅಂಗವಿಕಲರ ಒಕ್ಕೂಟಕ್ಕೆ ದಿನ ಬಳಕೆಯ 100 ಆಹಾರ ಕಿಟ್, ಸ್ಥಳೀಯರಿಗೆ 200 ದಿನಸಿ ಕಿಟ್ ಹಾಗೂ ಆಸರೆ ಚಾರಿಟೆಬಲ್ ಟ್ರಸ್ಟ್ ದತ್ತು ಪಡಕೊಂಡ 25 ಅಶಕ್ತ ಮಕ್ಕಳಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.
ಹೊರೆ ಇಳಿಯಿತು
ಲಾಕ್‌ಡೌನ್ ವಿಧಿಸಿದ ಆರಂಭದಲ್ಲಿ ನಮಗೆ ಸಮಸ್ಯೆಯಾಗಿ ಕಾಡಿದ್ದು ಊರಿಗೆ ಹೋಗಲು ಸಾಧ್ಯವಾಗದೆ ಜಿಲ್ಲೆಯಲ್ಲಿ ಉಳಿದುಕೊಂಡ ಹೊರಜಿಲ್ಲೆ ಮತ್ತು ರಾಜ್ಯಗಳ ಅಪಾರ ಪ್ರಮಾಣದ ಕೂಲಿ ಕಾರ್ಮಿಕರ ಹಸಿವನ್ನು ತಣಿಸುವುದು. ಸರಕಾರದ ವಿವಿಧ ಇಲಾಖೆಗಳಲ್ಲಿ ಇರುವ ಸೀಮಿತ ಸಿಬಂದಿ ಹಾಗೂ ಅಧಿಕಾರಿಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿರುವ ಕೂಲಿ ಕಾರ್ಮಿಕರಿಗೆ ಊಟ ವಿತರಿಸಲು ಕಷ್ಟವಾಗುತ್ತಿತ್ತು. ನಮ್ಮ ಜತೆ ಹಲವು ಸಂಘಟನೆಗಳು ಕೈಜೋಡಿಸಿದ್ದರಿಂದ ಜಿಲ್ಲಾಡಳಿತದ ಮೇಲಿನ ದೊಡ್ಡ ಹೊರೆ ಇಳಿಯಿತು ಎಂದರು.
ಸಣ್ಣ ನಿಟ್ಟುಸಿರು ಅಷ್ಟೇ
ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿದ್ದರೂ, ಕೊರೊನಾ ಹೋರಾಟ ಇಲ್ಲಿಗೆ ನಿಂತಿಲ್ಲ. ಹೋರಾಟ ನಿರಂತರವಾಗಿ ಇರಬೇಕು. ಜಿಲ್ಲಾಡಳಿತ ಸೂಚನೆಯನ್ನು ಜನ ಪಾಲಿಸುತ್ತಿದ್ದಾರೆ. ಪೂರ್ಣವಾಗಿ ನಾವು ಯಶಸ್ಸು ಗಳಿಸಿಲ್ಲ. ಯಾವುದೇ ಕ್ಷಣದಲ್ಲಿ ಸೋಂಕು ಮತ್ತೆ ತಗಲಬಹುದು. ಹೀಗಾಗಿ ಎಚ್ಚರಿಕೆ ವಹಿಸಬೇಕಿದೆ ಎಂದು ಡಿಸಿ ಹೇಳಿದರು.
ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಶ್ಲಾ ಸಿ, ಕಾರ್ಯಕರ್ತೆ ಯರನ್ನು ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಅಭಿನಂದಿಸಿದರು.
ಶಾಸಕ ರಘುಪತಿ ಭಟ್ ಶ್ಲಾಘನೆ
ಶಾಸಕ ಕೆ.ರಘುಪತಿ ಭಟ್ ಮಾತನಾಡಿ ಜಿಲ್ಲೆಯ ತಳಮಟ್ಟದ ಸಿಬಂದಿಯಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳ ನಿರಂತರ ಶ್ರಮದ ಫಲವಾಗಿ ಸೋಂಕು ಕೊಂಚ ಮಟ್ಟಿಗೆ ಜಿಲ್ಲೆಯಲ್ಲಿ ಈಗ ನಿಯಂತ್ರಣದಲ್ಲಿದೆ. ಸಂಘ ಸಂಸ್ಥೆಗಳು ನಿರಂತರವಾಗಿ ಜಿಲ್ಲೆಯ ಬಡ ಜನರ ಕಷ್ಟಗಳಿಗೆ ಸ್ಪಂದಿಸುತ್ತಿವೆ ಎಂದು ಜಿಲ್ಲಾಡಳಿತ ಹಾಗೂ ಸಂಘಸಂಸ್ಥೆಗಳ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ವಿಷ್ಣುವರ್ಧನ್, ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ್ ಡಾ| ನಾರಾಯಣ ಶೆಣೈ, ಉಡುಪಿ ತಾ| ಆರೋಗ್ಯಾಧಿಕಾರಿ ಡಾ| ನಾಗರತ್ನಾ, ಊಟದ ದಾನಿಗಳಾದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ, ಕಡಿಯಾಳಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಪಿ.ಕೆ ಸದಾನಂದ ಶರ್ಮ, ಗಣೇಶೋತ್ಸವ ಸಮಿತಿ ಅಧ್ಯಕ್ಷ ವಸಂತ ಭಟ್ ಉಪಸ್ಥಿತರಿದ್ದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.
ಕಿಟ್, ಸಹಾಯಧನ ವಿತರಣೆ
100 ಮಂದಿ ಅಂಗವಿಕಲರಿಗೆ ದಿನಸಿ ಕಿಟ್ ಅನ್ನು ಅವರ ಮನೆಗಳಿಗೆ ಕೊಂಡೊಯ್ದು ನೀಡಲಾಗುತ್ತಿದ್ದು, ಜಿಲ್ಲಾ ಅಂಗವಿಕಲರ ಒಕ್ಕೂಟದ ಉಪಾಧ್ಯಕ್ಷ ಜಗದೀಶ್ ಭಟ್ ಅವರಿಗೆ ಸಾಂಕೇತಿಕವಾಗಿ ವಿತರಿಸುವ ಮೂಲಕ ಚಾಲನೆ ನೀಡಲಾಯಿತು.
ಲಡ್ಡು ಸೇವೆ
ಸೋಮವಾರ ಮಧ್ಯಾಹ್ನದ ಊಟಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪಿ. ವಿಷ್ಣುವರ್ಧನ್ ಅವರು 4,800 ಲಡ್ಡುಗಳನ್ನು ನೀಡಿ ಸಹಕರಿಸಿದರು.
ಡಿಸಿ- ಎಸ್‌ಪಿ ವಿಲನ್!
ಹೊರ ಜಿಲ್ಲೆ ಮತ್ತು ರಾಜ್ಯಗಳ ಜನತೆಗೆ ಜಿಲ್ಲೆಯೊಳಕ್ಕೆ ಪ್ರವೇಶ ನಿರ್ಬಂಧಿಸಿದ್ದೇವೆ. ಸೀಲ್‌ಲಾಕ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಹೊರಗಿನ ಜನರಲ್ಲಿ ನಮ್ಮನ್ನು ಒಳಕ್ಕೆ ಬಿಟ್ಟಿಲ್ಲ ಎಂಬ ಬೇಸರವಿದೆ. ಹೊರಗಿನ ಜನರಿಗೆ ನಾವು ಕೆಟ್ಟವರು ಅಂದುಕೊಂಡರೂ ಜಿಲ್ಲೆಯ ಜನರ ಆರೋಗ್ಯ ದೃಷ್ಟಿಯಿಂದ ಈ ಕಠಿನ ನಿರ್ಧಾರ ಅನಿವಾರ್ಯ. ಹೊರಗಿನವರಿಗೆ ನಾನು ಮತ್ತು ಎಸ್‌ಪಿ ಅವರು ವಿಲನ್ ತರಹ ಕಾಣುತ್ತಿದ್ದೇವೆ.
-ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.