ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ : ದೋಷಪೂರಿತ ಟೈಲ್ಸ್‌ ಪೂರೈಸಿದ ಕಂಪೆನಿಗಳಿಗೆ ದಂಡ


Team Udayavani, Jul 18, 2023, 4:27 AM IST

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ : ದೋಷಪೂರಿತ ಟೈಲ್ಸ್‌ ಪೂರೈಸಿದ ಕಂಪೆನಿಗಳಿಗೆ ದಂಡ

ಉಡುಪಿ: ದೋಷಪೂರಿತ ಟೈಲ್ಸ್‌ ಪೂರೈಕೆ ಮಾಡಲಾಗಿದೆ ಎನ್ನುವ ಕಾರಣಕ್ಕೆ ಗಣೇಶ್‌ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಸ್ಟೇಟ್‌ ಬ್ಯಾಂಕ್‌ ಉದ್ಯೋಗಿ ಪ್ರಕಾಶ್‌ ಅವರು ತಮ್ಮ ಹಳೇ ಮನೆಯ ನವೀಕರಣಕ್ಕಾಗಿ ಉಡುಪಿಯ ನಿಟ್ಟೂರು ಬಳಿಯಿರುವ ಗಣೇಶ್‌ ಮಾರ್ಬಲ್ಸ್ ನಿಂದ ಕಜಾರಿಯ ಕಂಪೆನಿಯ ಸುಮಾರು 81,158 ರೂ. ಬೆಲೆಬಾಳುವ ಟೈಲ್ಸ್‌ಗಳನ್ನು ಖರೀದಿಸಿದ್ದರು. ಹೀಗೆ ಖರೀದಿ ಮಾಡಿದ ಟೈಲ್ಸ್‌ಗಳ ಪೈಕಿ ಹಾಲ್‌ ಹಾಗೂ ಬೆಡ್‌ ರೂಂಗೆ ಅಳವಡಿಸಿದ ಟೈಲ್ಸ್‌ಗಳ ಎಲ್ಲ ಅಂಚುಗಳು ಮೇಲಕ್ಕೆ ಉಬ್ಬಿಕೊಂಡು ದೋಷಪೂರಿತವಾಗಿದ್ದವು. ಈ ಬಗ್ಗೆ ಪ್ರಕಾಶ್‌ ಅವರು ಗಣೇಶ್‌ ಮಾರ್ಬಲ್ಸ್ ಅನ್ನು ಸಂಪರ್ಕಿಸಿ ವಿಚಾರ ತಿಳಿಸಿ ಬೇರೆ ಟೈಲ್ಸ್‌ ನೀಡುವಂತೆ ಕೇಳಿಕೊಂಡಾಗ ಅವರು ಗ್ರಾಹಕನಿಗೆ ಹಾರಿಕೆ ಉತ್ತರ ನೀಡಿದ್ದರು.

ಈ ಬಗ್ಗೆ ಪ್ರಕಾಶ್‌ ಅವರು ಕಜಾರಿಯ ಕಂಪೆನಿಯನ್ನು ಸಂಪರ್ಕಿಸಿದಾಗ ಅವರಿಂದಲೂ ಸೂಕ್ತ ಪ್ರತಿಕ್ರಿಯೆ ಬಾರದ ಕಾರಣ ಗಣೇಶ್‌ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿ ವಿರುದ್ಧ ದೋಷಪೂರಿತ ಟೈಲ್ಸ್‌ ಪೂರೈಕೆ, ನಷ್ಟ ಹಾಗೂ ಮಾನಸಿಕವಾಗಿ ವೇದನೆ ಉಂಟು ಮಾಡಿದ ಬಗ್ಗೆ ಪರಿಹಾರವಾಗಿ 5,60,000 ರೂ. ನೀಡಲು ಸೂಕ್ತ ನಿರ್ದೇಶನ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆ ಹೂಡಿದ್ದರು. ವಾದ-ಪ್ರತಿವಾದವನ್ನು ಆಲಿಸಿದ ಜಿÇÉಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗಣೇಶ್‌ ಮಾರ್ಬಲ್ಸ್ ನವರು ಪೂರೈಕೆ ಮಾಡಿದ ಟೈಲ್ಸ್‌ ದೋಷಪೂರಿತ ಎಂದು ಸಾಬೀತುಪಡಿಸಿ ತಪ್ಪಿತಸ್ಥ ಎರಡೂ ಕಂಪೆನಿಗಳಿಗೆ ಟೈಲ್ಸ್‌ ಖರೀದಿಯ 50,592 ರೂ., ಕೆಲಸದ ವೆಚ್ಚ 15,000 ರೂ., ಮಾನಸಿಕ ಹಿಂಸೆ, ತೊಂದರೆ, ದೈಹಿಕ ಶ್ರಮ ಇತ್ಯಾದಿಗಳಿಗೆ ಪರಿಹಾರವಾಗಿ 25,000 ರೂ., ವ್ಯಾಜ್ಯದ ಖರ್ಚು 20,000 ರೂ.ಗಳನ್ನು ಗ್ರಾಹಕನಿಗೆ 30 ದಿನಗಳ ಒಳಗೆ ಪಾವತಿಸುವಂತೆ ಆದೇಶಿಸಿದೆ. ಗ್ರಾಹಕ ಪ್ರಕಾಶ್‌ ಪರವಾಗಿ ಕುಂದಾಪುರದ ನೀಲ್‌ ಬ್ರಿಯಾನ್‌ ಪಿರೇರಾ ವಾದಿಸಿದ್ದರು.

ಟಾಪ್ ನ್ಯೂಸ್

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

Lokayukta

Kinnigoli: ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ,ಜೂನಿಯರ್‌ ಇಂಜಿನಿಯರ್‌ ಲೋಕಾಯಕ್ತ ಬಲೆಗೆ

1-tirupati-laddu

Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವಚ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

Lokayukta

Kinnigoli: ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ,ಜೂನಿಯರ್‌ ಇಂಜಿನಿಯರ್‌ ಲೋಕಾಯಕ್ತ ಬಲೆಗೆ

crime

Tipper ಢಿಕ್ಕಿ: ಎಂಬಿಬಿಎಸ್‌ ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.