Special Train: ದೀಪಾವಳಿ- ಕೊಂಕಣ ರೈಲ್ವೇಯಿಂದ ಬೆಂಗಳೂರು- ಕಾರವಾರ ವಿಶೇಷ ರೈಲು
Team Udayavani, Oct 19, 2024, 12:05 PM IST
ಉಡುಪಿ: ದೀಪಾವಳಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೊಂಕಣ ರೈಲ್ವೇ ಅ.30ರಂದು ಬೆಂಗಳೂರು-ಕಾರವಾರ ವಿಶೇಷ ರೈಲು ಸಂಚಾರಕ್ಕೆ ಮುಂದಾಗಿದೆ.
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಅ.30ರ ಮಧ್ಯಾಹ್ನ 1 ಗಂಟೆಗೆ ರೈಲು (06597) ಕಾರವಾರಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 4ಕ್ಕೆ ಕಾರವಾರ ತಲುಪಲಿದೆ.
ಅ.31ರಂದು ಕಾರವಾರದಿಂದ ರೈಲು (06598) ಮಧ್ಯಾಹ್ನ 12 ಗಂಟೆಗೆ ಹೊರಟು ಮಾರನೆ ದಿನ ಬೆಳಗ್ಗೆ 4ಕ್ಕೆ ಬೆಂಗಳೂರು ತಲುಪಲಿದೆ.
ಈ ರೈಲಿಗೆ ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ (ಬೈಂದೂರು), ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್ ಹಾಗೂ ಅಂಕೋಲ ಸ್ಟೇಷನ್‌ನಲ್ಲಿ ನಿಲುಗಡೆ ಇರಲಿದೆ.ರೈಲಿನಲ್ಲಿ 10 ಸ್ಲೀಪರ್, 4 ಜನರಲ್, ತಲಾ ಎರಡು ಎಸ್‌ಎಲ್‌ಆರ್ ಮತ್ತು ಎಸಿ ಸಹಿತ 18 ಬೋಗಿಗಳು ಇರಲಿವೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.
ನಂ.06565 ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ರೈಲು ಅ.30ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಅ.31ರಂದು ಮಧ್ಯಾಹ್ನ 11.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ನಂ.06566 ಮಂಗಳೂರು ಜಂಕ್ಷನ್ – ಯಶವಂತಪುರ ವಿಶೇಷ ರೈಲು ಅ.31ರಂದು ಮಧ್ಯಾಹ್ನ 1 ಗಂಟೆಗೆ ಮಂಗ ಳೂರು ಜಂಕ್ಷನ್‌ನಿಂದ ಹೊರಡಲಿದ್ದು, ರಾತ್ರಿ 9.45ಕ್ಕೆ ಬೆಂಗಳೂರು ತಲುಪಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.