![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 2, 2020, 6:09 AM IST
ಉಡುಪಿ: ರಾಜ್ಯದ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ಹೋಲಿಸಿದರೆ ಉಡುಪಿ ಕೋವಿಡ್ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆದವರಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ. ಇದರ ಹಿಂದೆ ಇಲ್ಲಿನ ವೈದ್ಯರ ಪರಿಶ್ರಮವಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆ ವತಿಯಿಂದ ಭಾರತರತ್ನ ಡಾ| ಬಿ.ಸಿ. ರಾಯ್ ಸ್ಮರಣಾರ್ಥ ಬುಧವಾರ ಉಡುಪಿ ಐಎಂಎ ಭವನದಲ್ಲಿ “ವೈದ್ಯರ ದಿನಾ ಚರಣೆ’ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವೈದ್ಯರನ್ನು ಸಮ್ಮಾ ನಿಸಿ ಮಾತನಾಡಿದರು.
ಕೋವಿಡ್- 19 ವಿರುದ್ಧ ಹೋರಾಟದಲ್ಲಿ “ವೈದ್ಯೋ ನಾರಾಯಣೋ ಹರಿಃ’ ಎನ್ನುವ ಮಾತು ಎಲ್ಲರ ಬಾಯಲ್ಲಿ ಕೇಳಿ ಬರುತ್ತಿದೆ. ಕೊರೊನಾ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಯನ್ನು ಸಂಪರ್ಕಿಸಿ. ಆ ಮೂಲಕ ಸಮುದಾಯಕ್ಕೆ ಕೋವಿಡ್- 19 ಹರಡುವುದನ್ನು ತಪ್ಪಿಸಬಹುದಾಗಿದೆ ಎಂದರು.
ಯಾವಾಗ ಕೋವಿಡ್- 19 ವಿರುದ್ಧದ ಹೋರಾಟ ಮುಕ್ತಾಯವಾಗು ತ್ತದೆಯೋ ಅಂದು ನಾವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸ ಬಹುದು. ಅಲ್ಲಿಯವರೆಗೆ ಸುರಕ್ಷಿತ ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಉತ್ತಮ ಎಂದು ತಿಳಿಸಿದರು.
ವೈದ್ಯರಿಗೆ ಸಮ್ಮಾನ
ಉಡುಪಿಯ ಶಸ್ತ್ರಚಿಕಿತ್ಸಾ ತಜ್ಞ ಡಾ| ವಾಸುದೇವ ಸೋಮಯಾಜಿ, ಕಟಪಾಡಿಯ ಡಾ| ಶ್ರೀನಿವಾಸ ರಾವ್ ಕೊರಡ್ಕಲ್ ಅವರನ್ನು ಸಮ್ಮಾನಿಸಲಾಯಿತು. ಐಎಂಎ ರಾಜ್ಯ ಘಟಕದಿಂದ ಕೊಡಲ್ಪಡುವ ಡಾ| ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ ಡಾ| ಪ್ರಭಾಕರ ಶೆಟ್ಟಿ ಕಾಪುಹಾಗೂ ಹಿರಿಯ ವೈದ್ಯ ಡಾ| ರವೀಂದ್ರನಾಥ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಕೋವಿಡ್- 19ರ ವಿರುದ್ಧ ಹೋರಾಡುತ್ತಿರುವ 16 ಮಂದಿ ಐಎಂಎ ಸದಸ್ಯ ವೈದ್ಯರನ್ನು ಗುರುತಿಸಿ ಗೌರವಿಸಿದರು.
ಅಧ್ಯಕ್ಷತೆಯನ್ನು ಐಎಂಎ ಘಟಕದ ಅಧ್ಯಕ್ಷ ಡಾ| ಉಮೇಶ್ ಪ್ರಭು ವಹಿಸಿದ್ದರು. ಕಾರ್ಯದರ್ಶಿ ಡಾ| ಪ್ರಕಾಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಡಾ| ವಿನಾಯಕ ಶೆಣೈ ಪ್ರಸ್ತಾವನೆಗೈದರು.
You seem to have an Ad Blocker on.
To continue reading, please turn it off or whitelist Udayavani.