Doddanagudde ದುರ್ಗಾ ಆದಿಶಕ್ತಿ ಕ್ಷೇತ್ರ; ಅಷ್ಟೋತ್ತರ ಶತ ನಾರಿಕೇಳ ಗಣಯಾಗ
Team Udayavani, Sep 5, 2024, 7:26 PM IST
![Doddanagudde ದುರ್ಗಾ ಆದಿಶಕ್ತಿ ಕ್ಷೇತ್ರ; ಅಷ್ಟೋತ್ತರ ಶತ ನಾರಿಕೇಳ ಗಣಯಾಗ](https://www.udayavani.com/wp-content/uploads/2024/09/9-8-620x414.jpg)
![Doddanagudde ದುರ್ಗಾ ಆದಿಶಕ್ತಿ ಕ್ಷೇತ್ರ; ಅಷ್ಟೋತ್ತರ ಶತ ನಾರಿಕೇಳ ಗಣಯಾಗ](https://www.udayavani.com/wp-content/uploads/2024/09/9-8-620x414.jpg)
ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಪ್ರಸನ್ನ ಗಣಪತಿಯ ಸನ್ನಿಧಾನದಲ್ಲಿ ಸೆ.7ರಂದು ಗಣೇಶ ಚತುರ್ಥಿಯ ಪ್ರಯುಕ್ತ ಅಷ್ಟೋತ್ತರ ಶತ ನಾರಿಕೇಳ ಗಣ ಯಾಗವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ.
ಪ್ರಾತಃಕಾಲದಿಂದ ಮೂಡು ಗಣಪತಿ ಸೇವೆ, ಮಧ್ಯಾಹ್ನ ಪ್ರಸನ್ನ ಪೂಜೆ, ಸಂಜೆ ರಂಗ ಪೂಜೆ ನೆರವೇರಲಿದೆ. ಕ್ಷೇತ್ರದ ವತಿಯಿಂದ ನೆರವೇರಲಿರುವ ಅಷ್ಟೋತ್ತರ ಶತ ನಾರಿಕೇಳ ಗಣಯಾಗದಲ್ಲಿ ಭಕ್ತರು ಸೇವೆ ಸಲ್ಲಿಸಬಹುದು ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.