“ಹೇರೂರಿನಲ್ಲಿ ಮನೆ ಕಟ್ಟಲು ನೆರವಾಗಿದ್ದ ಡಾ| ರಾಜ್’
Team Udayavani, Apr 25, 2019, 6:05 AM IST
ಉಡುಪಿ: ತಾನು ಮನೆ ಕಟ್ಟುವುದಕ್ಕೆ ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ತಿಳಿದ ಡಾ| ರಾಜ್ ಅವರು 10 ಸಾವಿರ ರೂ. ಕಳಿಸಿಕೊಟ್ಟಿದ್ದರು ಎಂದು ರಂಗಭೂಮಿ ಕಲಾವಿದ, ಆರಂಭದ ದಿನಗಳಲ್ಲಿ ರಾಜ್ ಜತೆ ನಟಿಸಿದ ಹೇರೂರು ದಯಾನಂದ ಶೆಟ್ಟಿ ತಿಳಿಸಿದರು.
ಅವರು ಬುಧವಾರ ಉಡುಪಿ ಜಿಲ್ಲಾ ವಾರ್ತಾ ಇಲಾಖೆಯ ಸಭಾಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಡಾ.ರಾಜ್ ಕುಮಾರ್ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ ಅವರು ಸಹಕಾರ ನೀಡಿ ನನ್ನ ಮನೆ ಪೂರ್ಣವಾಗುವಂತೆ ನೋಡಿಕೊಂಡರು ಎಂದರು.
ಡಾ| ರಾಜ್ ಕುಮಾರ್ ಅವರು ಬಹಳ ಬೇಡಿಕೆ ಇದ್ದರೂ ಕನ್ನಡ ಬಿಟ್ಟು ಬೇರೆ ಭಾಷೆಗಳ ಸಿನೆಮಾಗಳಲ್ಲಿ ನಟಿಸಲಿಲ್ಲ. ಕನ್ನಡಿಗರ ಧ್ವನಿಯಾಗಿ ಕಾವೇರಿ ನದಿ, ಗೋಕಾಕ್ ಚಳವಳಿಗಳಲ್ಲಿ ಭಾಗವಹಿಸಿದ್ದರು. ಅವರು ಇತರ ಸಿನೆಮಾ ನಟರಿಗೆ ಮಾತ್ರವಲ್ಲ ಪ್ರತಿಯೊಬ್ಬ ಕನ್ನಡಿಗರಿಗೂ ಮಾದರಿಯಾಗಿ¨ªಾರೆ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುಡೇìಕರ್ ಹೇಳಿದರು.
ಡಾ| ರಾಜ್ ಅವರಿಗೆ ಹೇಳಿಕೊಳ್ಳುವಂತಹ ಶಿಕ್ಷಣ ಇರಲಿಲ್ಲ, ಆದರೇ ಅವರು ನಟಿಸಿದ್ದ ಸಿನೆಮಾಗಳೆಲ್ಲವೂ ಸದಭಿರುಚಿ ಮತ್ತು ಆದರ್ಶಗಳಿಂದ ಕೂಡಿರುತ್ತಿದ್ದವು. ಅವರು ನಟಿಸಿದ ಸಿನೆಮಾಗಳು ಕುಟುಂಬದ ಎಲ್ಲರೂ ಮತ್ತೆ ಮತ್ತೆ ನೋಡಬಹುದಾದಂತಹ ಸಿನೆಮಾಗಳು. ಆದ್ದರಿಂದಲೇ ಅವರು ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿ¨ªಾರೆ ಎಂದವರು ಹೇಳಿದರು.
ರಾಜಕೀಯ ನಿರ್ಲಿಪ್ತರಾಗಿದ್ದರು
ಹಿರಿಯ ನಿವೃತ್ತ ಸಿನೆಮಾ ಪತ್ರಕರ್ತ ಉದಯಕುಮಾರ್ ಪೈ ಅವರು ಡಾ| ರಾಜ್ ಬಗ್ಗೆ ಮಾತನಾಡಿ, ಎಂ.ಜಿ.ಆರ್., ಎನ್.ಟಿ.ಆರ್. ಅವರು ಡಾ| ರಾಜ್ ಅವರನ್ನು ರಾಜಕೀಯ ಸೇರುವಂತೆ ಬಹಳ ಪ್ರಯತ್ನ ಮಾಡಿದ್ದರು. ಕರ್ನಾಟಕ, ಆಂಧ್ರ, ತಮಿಳುನಾಡನ್ನು ನಾವೇ ಮೂರು ಮಂದಿ ಸೇರಿ ಆಳುವ ಎಂದು ಹೇಳಿದ್ದರು. ಆದರೇ ರಾಜ್ ಅದನ್ನು ಬಹಳ ನಯವಾಗಿ ನಿರಾಕರಿಸಿದ್ದರು. ಯಾಕೆಂದರೇ ರಾಜ್ ಅವರು ರಾಜಕೀಯದ ಬಗ್ಗೆ ಬಹಳ ನಿರ್ಲಿಪ್ತರಾಗಿದ್ದರು ಎಂದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಖಾದರ್ ಶಾ ಸ್ವಾಗತಿಸಿ ಪತ್ರಕರ್ತ ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು, ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ಡಾ| ರಾಜ್ ಅಭಿನಯದ ಸಿನೆಮಾದ ಹಾಡುಗಳನ್ನು ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.