ಹುಲ್ಲಿಗೆ ಬೆಂಕಿ: ಗೋವುಗಳ ಹೊಟ್ಟೆಗೂ “ಬೆಂಕಿ’
Team Udayavani, May 11, 2020, 5:37 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಬೇಸಗೆ ಸಮಯ ಬಂದಾಕ್ಷಣ ರಸ್ತೆ ಬದಿ, ಹೊಲಗಳಲ್ಲಿ ಉದ್ದುದ್ದ ಬೆಳೆದ ಹುಲ್ಲುಗಾವಲುಗಳಿಗೆ ಬೆಂಕಿ ಹಾಕುವುದು ಸಾಮಾನ್ಯ. ಇದು ಕೇವಲ ಹುಲ್ಲುಗಳನ್ನು ಸುಡುವುದಷ್ಟೇ ಅಲ್ಲದೆ, ಆ ಪ್ರದೇಶದ ದೊಡ್ಡ ಮರಗಳೂ ಸುಟ್ಟು ಹೋಗುತ್ತವೆ. ಇದರ ಜತೆಗೆ ಹುಲ್ಲುಗಾವಲಿನ ಒಳಗೆ ಸೇರಿಕೊಂಡ ನಾಗರಹಾವು ಸೇರಿದಂತೆ ನೂರಾರು ಜೀವಿಗಳು ಸಾಯುತ್ತವೆ. ಕೋವಿಡ್-19 ಕಾರಣದಿಂದ ಮೇವಿನ ಕೊರತೆ ಎದುರಿಸುತ್ತಿರುವ ಗೋವುಗಳ ಆಹಾರಕ್ಕೂ “ಬೆಂಕಿ’ ಹಾಕಿದಂತಾಗುತ್ತದೆ.
ಜನರು ತಮ್ಮ ಮನೆ ಬಳಿ ಕ್ಲೀನ್ ಮಾಡಬೇಕೆಂಬ ಉದ್ದೇಶದಿಂದ ಬೆಳೆದ ಹುಲ್ಲುಗಳಿಗೆ ಬೆಂಕಿ ಹಾಕಿ ಅನಂತರ ನಿಯಂತ್ರಿಸಲು ಸಾಧ್ಯವಾಗದಾಗ ಅಗ್ನಿಶಾಮಕ ಠಾಣೆಗಳಿಗೆ ಕರೆ ನೀಡುತ್ತಾರೆ. ಗದ್ದೆಗಳ ಬದುಗಳನ್ನು ಕ್ಲೀನ್ ಮಾಡುವಾಗ ಹುಲ್ಲುಗಳಿಗೆ ಬೆಂಕಿ ಹಾಕುತ್ತಾರೆ. ಇದು ಗಾಳಿಯಿಂದ ಇನ್ನೊಬ್ಬರ ಗದ್ದೆಗಳಿಗೂ ಹರಡಿ ಕೋವಿಡ್-19 ಕಾರಣದಿಂದ ಗೋ ಶಾಲೆಗಳು, ಮನೆಗಳಲ್ಲಿ ಸಾಕುವ ಗೋವುಗಳಿಗೆ ಮೊದ ಮೊದಲು ಒಣಹುಲ್ಲಿನ ಕೊರತೆ ಇದಿರಾಯಿತು. ಆದರೆ ಜಿಲ್ಲಾಡಳಿತ ಕೃಷಿ ಸಂಬಂಧಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟದ್ದರಿಂದ ತೀರ್ಥಹಳ್ಳಿಯಿಂದ ಬರುವ ಹುಲ್ಲುಗಳಿಗೆ ತೊಂದರೆಯಾಗಲಿಲ್ಲ. ಆದರೆ ಬೀಡಾಡಿ ದನಗಳು, ಮನೆಗಳಲ್ಲಿ ಸಾಕುವ ಜಾನುವಾರುಗಳು ಅವುಗಳಷ್ಟಕ್ಕೆ ಗದ್ದೆ, ತೋಪುಗಳಿಗೆ ಹೋಗಿ ಮೆಂದುಕೊಂಡು ಬರುವ ದನಗಳಿಗೆ ಬೆಳೆದ ಹುಲ್ಲುಗಳಿಗೆ ಬೆಂಕಿ ಕೊಡುವುದರಿಂದ ತೊಂದರೆಯಾಗುತ್ತಿದೆ.
ಕೋವಿಡ್-19 ಕಾರಣದಿಂದಲೋ ಏನೋ ಈ ಬಾರಿ ಬೆಂಕಿ ಅನಾಹುತ ಉಂಟಾದುದು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ. ಇತ್ತೀಚಿಗೆ ಒಂದೆರಡು ಮಳೆ ಬಂದಿರುವದೂ ಕಾರಣವಿರಬಹುದು. ಉಡುಪಿ ಠಾಣೆಯೊಂದರಲ್ಲೇ ಹೋದ ವರ್ಷ 300 ಅಗ್ನಿ ಆಕಸ್ಮಿಕ ಘಟನೆಗಳಿಗೆ ಸಾರ್ವಜನಿಕರ ಕರೆ ಬಂದಿತ್ತು. ಈ ಬಾರಿ ಸುಮಾರು 160 ಕರೆಗಳು ಮಾತ್ರ ಬಂದಿವೆ. ಕಾರ್ಕಳ, ಕುಂದಾಪುರ ಠಾಣೆಗಳಿಗೆ ತಲಾ 100 ಕರೆ, ಮಲ್ಪೆ ಠಾಣೆಗೆ 45 ಕರೆಗಳು ಬಂದಿವೆ. ಇವು ಹೋದ ವರ್ಷಕ್ಕೆ ಹೋಲಿಸಿದರೆ ಬಹಳ ಕಡಿಮೆ. ಈಗ ಜನರಿಗೆ ಅರಿವು ಇರುವುದರಿಂದ ಬೀಡಿ, ಸಿಗರೇಟು ಸೇದಿ ಬಿಸಾಡಿದ ಕಾರಣದಿಂದ ಅಗ್ನಿ ಆಕಸ್ಮಿಕ ಅಷ್ಟಾಗಿ ಆಗುತ್ತಿಲ್ಲ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಚ್.ಎಂ. ವಸಂತಕುಮಾರ್.
ಜಾಗೃತಿ ಮೂಡಿದೆ
ಹೋದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಗ್ನಿ ಆಕಸ್ಮಿಕದ ದೂರವಾಣಿ ಕರೆಗಳು ಬಹಳ ಕಡಿಮೆ. ಬೀಡಿ, ಸಿಗರೇಟು ಸೇದಿ ಬಿಸಾಡಿದ ಕಾರಣದಿಂದ ಅಗ್ನಿ ದುರಂತ ಘಟನೆಗಳು ಅಷ್ಟಾಗಿ ನಡೆಯುತ್ತಿಲ್ಲ. ಇದಕ್ಕೆ ಜನರಲ್ಲಿ ಉಂಟಾದ ಜಾಗೃತಿ ಕಾರಣ. ಆದರೆ ಜನರೇ ಬೆಂಕಿ ಹಾಕಿ ನಿಯಂತ್ರಿಸಲು ಆಗದೆ ನಮಗೆ ಕರೆ ನೀಡುತ್ತಾರೆ.
-ಎಚ್.ಎಂ. ವಸಂತಕುಮಾರ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ, ಉಡುಪಿ.
ಆಹಾರಕ್ಕೆ ಧಕ್ಕೆ
ಗದ್ದೆಗಳಲ್ಲಿ ಬೆಳೆದ ಹುಲ್ಲುಗಳಿಗೆ ಬೆಂಕಿ ಹಾಕುವುದರಿಂದ ಪ್ರಾಕೃತಿಕವಾಗಿ ಸಿಕ್ಕಿದ ಮೇವನ್ನು ನಷ್ಟ ಮಾಡಿ ಕೊಂಡಂತಾಗುತ್ತದೆ. ಇದರಿಂದ ಜಾನುವಾರುಗಳ ಆಹಾರಕ್ಕೆ ಧಕ್ಕೆ ಆಗುತ್ತದೆ.
-ಡಾ| ಹರೀಶ್ ತಮಣ್ಕರ್ , ಜಿಲ್ಲಾ ಉಪನಿರ್ದೇಶಕರು, ಪಶುಸಂಗೋಪನ ಇಲಾಖೆ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.