ಚಾಪೆ ನಾಟಿ, ನೇರ ಬಿತ್ತನೆಗೆ ಭತ್ತ ಕೃಷಿಕರ ಒಲವು
ಮಳೆ ವಿಳಂಬ, ಮುಂಗಾರು ದುರ್ಬಲ ಕಾರಣ
Team Udayavani, Jun 26, 2023, 3:23 PM IST
ಕಾರ್ಕಳ: ಜೂನ್ ತಿಂಗಳ ಮೊದಲ ದಿನಗಳಲ್ಲಿ ಪ್ರವೇಶಿಸಬೇಕಿದ್ದ ಮುಂಗಾರು ತಡವಾಗಿ ಆಗಮಿಸಿದೆ. ಈ ಕಾರಣಕ್ಕಾಗಿ ಭತ್ತದ ಕೃಷಿ ಚಟುವಟಿಕೆ ವಿಳಂಬವಾಗಿದ್ದು ರೈತರು ಸಾಂಪ್ರದಾಯಿಕ ನಾಟಿ ಬದಲು ಚಾಪೆ ನಾಟಿ, ನೇರ ಬಿತ್ತನೆಗೆ ಒಲವು ತೋರುತ್ತಿದ್ದಾರೆ.
ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಮುಂಗಾರು ಕಳೆದೆರಡು ದಿನಗಳಿಂದ ಕೊಂಚ ಬಿರುಸು ಪಡೆದುಕೊಂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕಾರ್ಕಳ ತಾಲೂಕಿನಲ್ಲಿ 5,750 ಹೆಕ್ಟೇರ್, ಹೆಬ್ರಿ ತಾಲೂಕಿನಲ್ಲಿ 1,600 ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಮಾಡಲು ಉದ್ದೇಶಿಸಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮುಂಗಾರು ಪೂರ್ವ ಮಳೆ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಅರಂಭವಾಗು ತ್ತಿತ್ತು. ಈ ಬಾರಿ ಮುಂಗಾರು ಪೂರ್ವ ಮಳೆಯೇ ಸುರಿದಿಲ್ಲ. ಚಂಡಮಾರುತ ಪರಿಣಾಮದಿಂದ ಮುಂಗಾರು ದುರ್ಬಲವಾಗಿತ್ತು. ಜೂನ್ ಮೊದಲ ವಾರ ಪ್ರವೇಶಿಸಬೇಕಾಗಿದ್ದ ಮುಂಗಾರು ಮೂರು ವಾರ ತಡವಾಗಿ ಅಗಮಿಸಿದ್ದ ಕಾರಣ ಕೃಷಿ ಚಟುವಟಿಕೆಗಳು ಎರಡು ತಿಂಗಳು ತಡವಾಗಿ ಆರಂಭಗೊಂಡಿವೆ.
70 ಶೇ. ದಷ್ಟು ಮಳೆ ಕೊರತೆ ಈ ಬಾರಿ ಎದುರಾಗಿದೆ. ಗದ್ದೆಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಮನೆಯಲ್ಲಿಯೇ ನೇಜಿ ಹಾಕಲು ಬಾವಿ, ಬೋರ್‌ವೆಲ್ ನೀರನ್ನು ಆಶ್ರಯಿಸಿ ನೇಜಿ ಹಾಕಲಾಗಿತ್ತು. ಕೆಲವೆಡೆ ರೈತರು ಗದ್ದೆಗಳಿಗೆ ಬೋರ್‌ವೆಲ್ ನೀರನ್ನು ಹಾಯಿಸಿದ್ದಾರೆ, ಈಗ ಮುಂಗಾರು ಮಳೆ ಅಗಮನದ ಬಳಿಕ ರೈತರಲ್ಲಿ ನಿಟ್ಟುಸಿರು ಬಿಟ್ಟಿದ್ದು ಕಾರ್ಕಳ ತಾಲೂಕಿನ ಎಣ್ಣೆಹೊಳೆ ಪಿಜತ್ತಿಮಾರು, ಅಜೆಕಾರು, ಕೆರುವಾಶೆ, ಮಾಳ, ಬೋಳ,ಬೆಳ್ಮಣ್, ಹೆಬ್ರಿ
ತಾಲೂಕಿನ ಶಿವಪುರ, ಅಂಡಾರು, ಮುನಿಯಾಲು ಬೈಲು, ಚಾರ, ಸಾಣೂರು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ನಾಟಿ ಕಾರ್ಯ ಆರಂಭವಾಗಿದೆ. ಕೆಲವು ಬೆಟ್ಟು ಗದ್ದೆಗಳ ಪೈಕಿ ಮಳೆ ತಡವಾಗಿ ಆರಂಭವಾದ ಕಾರಣ ಹೊಲ ಹದಗೊಳಿಸುವ ಕೆಲಸ, ಗದ್ದೆ ಉಳುಮೆ ಕಾರ್ಯಗಳು ಆರಂಭವಾಗಿವೆ. ಹೆಬ್ರಿ ನಾಡಾ³ಲು, ಕಾರ್ಕಳ ತಾಲೂಕಿನ ಬೈಲೂರು, ನೀರೆ,ಸೇರಿದಂತೆ ಹರಿಖಂಡಿಗೆ, ದೊಂಡೇರಂಗಡಿಯ ಕೆಲವು ಭಾಗಗಳಲ್ಲಿ ಉಳುಮೆಯನ್ನು ರೈತರು ಆರಂಭಿಸಿದ್ದು ನೇರ ಬಿತ್ತನೆಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದಾರೆ.
ಸಾಂಪ್ರದಾಯಿಕ ಬೇಸಾಯಕ್ಕೆ ಅಡ್ಡಿ
ಮುಂಗಾರು ಮಳೆ ಈ ಬಾರಿ ಸಾಕಷ್ಟು ವಿಳಂಬವಾಗಿದೆ. ಸಾಂಪ್ರದಾಯಿಕ ಬೇಸಾಯಕ್ಕೆ ಅಡ್ಡಿಯಾಗಿದೆ. ಮುಂಗಾರು
ಈಗ ಪ್ರಾರಂಭಗೊಂಡಿದೆ. ಅನಿಶ್ಚಿತತೆಯೂ ಇದೆ. ಮಳೆಯ ಸರಾಸರಿ ನೋಡಿಕೊಂಡು ಕೃಷಿ ಚಟುವಟಿಕೆ ಆರಂಭಿಸಬೇಕಿದೆ.
-ಚಂದ್ರಯ್ಯ ಬಜಗೋಳಿ , ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.