UDUPI: ಎಲ್‌ಪಿಜಿ ಬಳಕೆದಾರರಿಗೆ ಇಕೆವೈಸಿ ಕಡ್ಡಾಯ
Team Udayavani, Mar 2, 2024, 10:30 AM IST
ಉಡುಪಿ: ಎಲ್‌ಪಿಜಿ ಬಳಕೆದಾರರೆಲ್ಲರೂ ತಮ್ಮ ಏಜೆನ್ಸಿಗೆ ತೆರಳಿ ಇಕೆವೈಸಿಗೆ ಬೆರಳಚ್ಚು ನೀಡುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.75ರಷ್ಟು ಮಂದಿ ಇಕೆವೈಸಿ ಮಾಡಿದ್ದು, ಇನ್ನುಳಿದವರು ಕೂಡ ಮಾ.31ರೊಳಗೆ ಮಾಡುವುದು ಕಡ್ಡಾಯ.
ಎಲ್‌ಪಿಜಿ ಬಳಕೆದಾರರಿಗೆ ಸರಕಾರದಿಂದ ಯಾವುದೇ ಸಬ್ಸಿಡಿಗಳು ಸದ್ಯಕ್ಕೆ ಇಲ್ಲದಿದ್ದರೂ ಮುಂದೆ ಸಿಗಲಿರುವ ಯೋಜನೆಗಳು ಸಿಗಬೇಕಿದ್ದರೆ ಇದು ಅತ್ಯಗತ್ಯವಾಗಿದೆ. ಯಾರ ಹೆಸರಿನಲ್ಲಿ ಸಂಪರ್ಕ ಇದೆಯೋ ಅವರದ್ದೇ ಬೆರಳಚ್ಚು ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಹೆಸರು ಬದಲಾವಣೆಗಳಿದ್ದರೆ ಅವರ ಸಮ್ಮುಖದಲ್ಲೇ ಮಾಡಬಹುದು. ನೋಂದಣಿ ಮಾಡಿಸಿಕೊಂಡ ವ್ಯಕ್ತಿ ಮೃತಪಟ್ಟಿದ್ದೇ ಆದಲ್ಲಿ ಅವರ ಮರಣ ಪ್ರಮಾಣ ಪತ್ರ ನೀಡಬೇಕು.
ಬಗೆಹರಿಯದ ಗೊಂದಲ ಇಕೆವೈಸಿಯನ್ನು ಉಜ್ವಲ್ ಯೋಜನೆಯಡಿ ನೋಂದಣಿ ಮಾಡಬೇಕು ಅಥವಾ ಎಲ್ಲರೂ ಮಾಡಿಸಬೇಕೆ ಎಂಬ ಗೊಂದಲಗಳಿದ್ದವು. ಇಂತಹ ಯಾವುದೇ ಇತಿಮಿತಿಗಳಿಲ್ಲ. ಸಂಪರ್ಕ ಹೊಂದಿರುವವರು ತಮ್ಮ ಏಜೆನ್ಸಿಗಳಿಗೆ ತೆರಳಿ ಆದಷ್ಟು ಬೇಗನೇ ಮಾಡಿಸಿಕೊಂಡರೆ ಉತ್ತಮ ಎನ್ನುತ್ತಾರೆ ಬಾಲಾಜಿ ಗ್ಯಾಸ್ ಏಜೆನ್ಸಿಯ ವಿಷ್ಣು ಆಚಾರ್ಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.