Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

50 ಸಾವಿರಕ್ಕೂ ಅಧಿಕ ಮಂದಿ ಬಾಗಿ

Team Udayavani, Dec 30, 2024, 8:15 PM IST

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

ಮಲ್ಪೆ : ಎಳ್ಳಮಾವಾಸ್ಯೆ ದಿನವಾದ ಸೋಮವಾರ ಮಲ್ಪೆ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಸಹಸ್ರಾರು ಮಂದಿ ಭಕ್ತಾದಿಗಳು ಶ್ರದ್ದಾಭಕ್ತಿಯಿಂದ ಸಮುದ್ರಸ್ನಾನ ಮಾಡಿದರು.

ಮುಂಜಾನೆಯಿಂದಲೇ ಸಮುದ್ರಸ್ನಾನಕ್ಕೆ ಕಡಲತೀರದ ಬಳಿ ಜನ ಸೇರಿದ್ದರು. ಮುಂಜಾನೆ 3 ಗಂಟೆ ಬಳಿಕ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಸಮುದ್ರಸ್ನಾನಗೈದ ಭಕ್ತರು ಬಲರಾಮ ದೇವರ ದರ್ಶನ ಪಡೆದರು. ಬಹುತೇಕ ಶ್ರದ್ದಾಳುಗಳು ಗತಿಸಿದ ತಮ್ಮ ಹಿರಿಯರಿಗೆ ತಿಲತರ್ಪಣ ನಡೆಸುವ ಕಾರ್ಯಗಳು ಕಡಲತೀರದಲ್ಲಿ ಕಂಡು ಬರುತ್ತಿದ್ದವು. ಬೆಳಗ್ಗಿನಿಂದ ಸಂಜೆಯವರೆಗೆ ಸೀವಾಕ್‌ ಬಳಿಯಿಂದ ಮುಖ್ಯ ಬೀಚ್‌ವರೆಗೆ ಸುಮಾರು 1.5 ಕಿ.ಮೀ ದೂರ ಊದಕ್ಕೂ ಜನರ ಸ್ನಾನ ಮಾಡುತ್ತಿರುವು ಕಂಡು ಬಂತು. ವಡಭಾಂಡೇಶ್ವರ ಭಕ್ತವೃಂದದ ಸದಸ್ಯರು ಸ್ವಯಂ ಸೇವಕರಾಗಿ ನಿಂತು ದೇವಸ್ಥಾನಕ್ಕೆ ಬರುವ ಭಕ್ತರಿಗೆ ವ್ಯವಸ್ಥಿತವಾಗಿ ದೇವರ ದರ್ಶನ ಪಡೆಯುವಲ್ಲಿ ಸಹಕರಿಸಿದರು.

ಸಮುದ್ರ ಮಧ್ಯೆ ರಕ್ಷಣ ಬೋಟು :
ಮುಂಜಾನೆಯಿಂದ ಸಮುದ್ರ ಮಧ್ಯೆ ಕರಾವಳಿ ಕಾವಲು ಪೋಲಿಸ್‌ಪಡೆಯ ಬೋಟ್‌ಗಳು ಅಲ್ಲದೆ ಓಶಿಯನ್‌ ಅಡ್ವೆಂಚರ್‌ ಬೋಟುಗಳು ರಕ್ಷಣಾ ಕಾರ್ಯಕ್ಕೆ ಸಜ್ಜಾಗಿದ್ದವು. ಜೀವರಕ್ಷಕ ಸಿಬಂದಿಗಳು ಜನರ ಮೇಲೆ ನಿಗಾ ವಹಿಸಿದ್ದರು. ಸಮುದ್ರಸ್ನಾನಕ್ಕೆ ಬರುವ ಜನಸಮೂಹ, ಸಮುದ್ರತೀರದಲ್ಲಿ ಅಪಾಯ ಸಂಭವಿಸದಂತೆ ಮತ್ತು ವಾಹನ ಸಂಚಾರಕ್ಕೆ ತೊಡಕಾಗದಂತೆ ಮಲ್ಪೆ ಪೊಲೀಸ್‌ ಠಾಣಾಧಿಕಾರಿ ಪ್ರವೀಣ್‌ ಆರ್‌. ನೇತೃತ್ವದಲ್ಲಿ 40ಕ್ಕೂ ಅಧಿಕ ಪೋಲಿಸರನ್ನು ನಿಯೋಜಿಸಲಾಗಿತ್ತು. ಮಾತ್ರವಲ್ಲದೆ ಬೀಚ್‌ನ ಸುತ್ತಮುತ್ತ, ಶೌಚಾಲಯ ಏರಿಯ, ದೇವಸ್ಥಾನ ಅಕ್ಕಪಕ್ಕ ಜನ ಸೇರುವಲ್ಲಿ ಹೆಚ್ಚಿನ ಭದ್ರತಾ ಸಿಬಂದಿಯನ್ನು ನೇಮಕ ಮಾಡಲಾಗಿತ್ತು. ಅಮಾವಾಸ್ಯೆಯ ಪ್ರಯುಕ್ತ ಮಲ್ಪೆ ಮೀನುಗಾರಿಕೆ ಬಂದರಿಗೆ ರಜೆ ಸಾರಲಾಗಿತ್ತು.

ಸ್ನಾನಕ್ಕೆ ಸಾಕ್ಷಿ ಸಾಕ್ಷಿ ಕಲ್ಲು :
ಬಲರಾಮ ದೇವಸ್ಥಾನದ ಎಡಭಾಗದಲ್ಲಿರುವ ಸಾಕೇಶ್ವರ ಗುಡಿ ದರ್ಶನಕ್ಕೆ ಎಂದಿನಂತೆ ಭಕ್ತರ ಸರತಿ ಸಾಲು ಬಹುದೂರದವರೆಗಿತ್ತು. ಸಾಕೇಶ್ವರ ಗುಡಿಯೊಳಗಿರುವ ಸಾಕ್ಷಿ ಕಲ್ಲನ್ನು ಒಂದು ಸುತ್ತು ತಿರುಗಿಸಿ ನಮಿಸಿದರೆ ಸಮುದ್ರಸ್ನಾನ ಮಾಡಿದ್ದಕ್ಕೆ ಸಾಕ್ಷಿಯಾಗುತ್ತದೆ ಎಂದು ನಂಬಿಕೆ ಇದೆ. ಇದು ಹಿಂದಿನಿಂದ ನಡೆದು ಬಂದ ಪದ್ದತಿಯಾಗಿದ್ದು ಎಳ್ಳಮಾವಾಸ್ಯೆಯ ದಿನದಂದು ಮಾತ್ರ ಗುಡಿಯ ಬಾಗಿಲು ತೆರೆಯಲಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಟಿ. ಶ್ರೀನಿವಾಸ ಭಟ್‌ ತಿಳಿಸುತ್ತಾರೆ.

ಟಾಪ್ ನ್ಯೂಸ್

CT Ravi

ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ

nucchinunde

Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…

Rohit-SHarma-(2)

BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ

Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ

Crime: ಆಹಾರ, ಮದ್ಯವನ್ನು ಕೊಡಲೊಪ್ಪದ ರೆಸಾರ್ಟ್ ಮ್ಯಾನೇಜರ್‌ ಹತ್ಯೆ; ಇಬ್ಬರು ಪೊಲೀಸರ ಬಂಧನ

Crime: ಆಹಾರ, ಮದ್ಯವನ್ನು ಕೊಡಲೊಪ್ಪದ ರೆಸಾರ್ಟ್ ಮ್ಯಾನೇಜರ್‌ ಹತ್ಯೆ; ಇಬ್ಬರು ಪೊಲೀಸರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Padubidri: ವಾಹನ ಅಪಘಾತಕ್ಕೆ ಕಾರಣವಾಗುತ್ತಿರುವ ಫ್ಲೆಕ್ಸ್‌ಗಳು

11-

Udupi: ಪುನಃ ಥಿಯೇಟರ್ ಪ್ರಸ್ತುತಪಡಿಸುತ್ತದೆ – ಯೋಗಿ ಮತ್ತು ಭೋಗಿ

2-udupi

ವಿಶ್ವಾರ್ಪಣಂ 35- ಜ.4:ಪಲಿಮಾರು ಶ್ರೀಗಳಿಗೆ ಗುರುವಂದನೆ;ಮೀನಾಕ್ಷಿ ಶಹರಾವತ್‌ ವಿಶೇಷ ಉಪನ್ಯಾಸ

5

Udupi: ಜಿಮ್‌ನಲ್ಲಿ ಹೊಡೆದಾಟ; ದೂರು-ಪ್ರತಿದೂರು ದಾಖಲು

1

Udupi: ಅಧಿಕ ಲಾಭಾಂಶದ ಆಮಿಷ; 49 ಲಕ್ಷ ರೂ.ವಂಚನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!

ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!

CT Ravi

ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ

nucchinunde

Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…

Rohit-SHarma-(2)

BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.