ಹೆಜಮಾಡಿ- ಕುಕ್ಕೆಹಳ್ಳಿಯವರೆಗಿನ ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಒತ್ತು: ಸೊರಕೆ ಘೋಷಣೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಡವರಿಗೆ 10 ಸಾವಿರ ಮನೆ ನಿವೇಶನ, ಕಾರ್ಮಿಕರಿಗೆ ಬಂಪರ್ ಭರವಸೆ
Team Udayavani, May 1, 2023, 11:14 AM IST
ಕಾಪು: ದಕ್ಷಿಣದ ಗಡಿ ಭಾಗ ಹೆಜಮಾಡಿಯಿಂದ ಉತ್ತರದ ಗಡಿಭಾಗ ಕುಕ್ಕೆಹಳ್ಳಿಯವರೆಗಿನ ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ಚಿಂತನೆಯೊಂದಿಗೆ ವಸತಿ ರಹಿತರಿಗೆ ಮನೆ, ಕುಡಿಯುವ ನೀರಿಗೆ ಆದ್ಯತೆ, ಪ್ರವಾಸೋದ್ಯಮ ಅಭಿವೃದ್ಧಿ, ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ಕಾಪು ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯಾಗಿ ಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಕ್ಷೇತ್ರವನ್ನು ಸುಂದರ-ಸಮƒದ್ಧ-ಸ್ವತ್ಛ ಮತ್ತು ಭ್ರಷ್ಟಾಚಾರ ರಹಿತವಾಗಿ ಅಭಿವೃದ್ಧಿ ಪಡಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ರವಿವಾರ ಕಾಪು ರಾಜೀವ ಭವನದಲ್ಲಿ ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆಯ ಮುನ್ನೋಟ “ನಮ್ಮ ಕನಸಿನ ಕಾಪು ಪ್ರಣಾಳಿಕೆ” ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಿವೇಶನ, ಮನೆ, ವಸತಿ ಸಂಕೀರ್ಣ : ನಿವೇಶನ ರಹಿತರಿಗೆ 10,000 ನಿವೇಶನ, ಸರಕಾರಿ ಜಾಗದಲ್ಲಿ ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರ, ಇಂದಿರಾ ಆವಾಸ್ ಮನೆ, ಬಡವರಿಗೆ ಮನೆ ರಿಪೇರಿಗೆ ಸಹಾಯಧನ, ಕಾಪು ಪುರಸಭೆ, ಪಡುಬಿದ್ರಿ, ಕಟಪಾಡಿ, ಶಿರ್ವ ಮತ್ತು ಪಾದೂರು ಗ್ರಾಮಗಳಲ್ಲಿ ಬಹುಮಹಡಿ ವಸತಿ ಯೋಜನೆಯ ಮೂಲಕ ವಸತಿ ರಹಿತ ಜನತೆ, ರಿûಾ, ಕಾರು, ಬಸ್ ಚಾಲಕರು ಮತ್ತು ಕೂಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.
ಶೈಕ್ಷಣಿಕ ಅಭಿವೃದ್ಧಿ : ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶೆ„ಕ್ಷಣಿಕ ಅಭಿವೃದ್ಧಿಗಾಗಿ ಸರಕಾರದಿಂದ ಕೆಜಿಯಿಂದ ಐಟಿಯವರೆಗಿನ ಶಿಕ್ಷಣ ಸಂಸ್ಥೆ, ಉನ್ನತ ಶಿಕ್ಷಣ ಕೇಂದ್ರ, ಪಾಲಿಟೆಕ್ನಿಕ್, ಐ.ಟಿ.ಐ., ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು, ಸರಕಾರಿ ವಸತಿ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ನಿರ್ಮಾಣ ಗುರಿ ಹೊಂದಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ : ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶವಿರುವ ಕಾಪು ಕ್ಷೇತ್ರದ ಹೆಜಮಾಡಿಯಿಂದ-ಮಲ್ಪೆಯವರೆಗೆ ನೇರ ಸಂಪರ್ಕ ರಸ್ತೆ ಅಭಿವೃದ್ಧಿ, ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಾಣ, ಕಾಪು ಲೆ„ಟ್‌ಹೌಸ್ ಬೀಚ್ ಅಭಿವೃದ್ಧಿ, ಪಡುಬಿದ್ರಿ ಬ್ಲೂಫ್ಲಾಗ್, ಮಟ್ಟು, ಉದ್ಯಾವರ ಬೀಚ್ ಅಭಿವೃದ್ಧಿಯೊಂದಿಗೆ ಟೂರಿಸಂ ಪಾರ್ಕ್ ನಿರ್ಮಾಣ ಮತ್ತು ಟೆಂಪಲ್ ಸಿಟಿ ಯೋಜನೆಗೆ ಬೆಂಬಲ ನೀಡುವುದು.
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ : ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರಕ್ಕೆ ಹೊಸ ರೂಪ ನೀಡುವುದು, ಜಗದ್ಗುರು ಮಧ್ವಾಚಾರ್ಯರ ಜನ್ಮ ಕ್ಷೇತ್ರ ಪ್ರವಾಸಿ ತಾಣವಾಗಿ ಅಭಿವೃದ್ಧಿ, ಅಷ್ಟ ಮಠದ ಮೂಲ ಕ್ಷೇತ್ರ ದಂಡತೀರ್ಥ ಕೆರೆ ಅಭಿವೃದ್ಧಿ, ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳಾದ ಮಂದಿರ, ಮಸೀದಿ, ಚರ್ಚ್‌ಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು.
ಮನೆ-ಮನೆಗೆ ನೀರು : ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗೆ ಮರು ಚಾಲನೆ, ಹೆಜಮಾಡಿ ಶಾಂಭವಿ ನದಿ, ಕುರ್ಕಾಲು ಪಾಪನಾಶಿನಿ ನದಿ, ಬೆ„ರಂಪಳ್ಳಿ ಸ್ವರ್ಣಾ ನದಿಯಿಂದ ನೀರೆತ್ತಿ ಶುದ್ದೀಕರಣಗೊಳಿಸಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಮನೆ-ಮನೆಗೆ ನೀರು ಒದಗಿಸುವುದು, ವಾರಾಹಿ ಯೋಜನೆಯ ಮೂಲಕ ಕೃಷಿ ಕಾರ್ಯಕ್ಕೆ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುವುದು.
ಕೌಶಲ್ಯಾಭಿವೃದ್ಧಿ, ಕೈಗಾರಿಕೆ ಸ್ಥಾಪನೆ ಕೇಂದ್ರ : ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಶೇ. 3ರ ಬಡ್ಡಿದರದಲ್ಲಿ ಸಾಲ ವಿತರಣೆ, ಸೊದ್ಯೋಗಕ್ಕೆ ಉತ್ತೇಜನೆ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಸƒಷ್ಟಿ, ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ, ಸ್ವಂತ ಉದ್ದಿಮೆ ಸ್ಥಾಪಿಸಲು ಉತ್ತೇಜನ ನೀಡಲಾಗುತ್ತದೆ.
ಕಸ ವಿಲೇವಾರಿ ಘಟಕ : ಆಧುನಿಕ ತಂತ್ರಜ್ಞಾನದೊಂದಿಗೆ ಎಲ್ಲೂರಿನ ತ್ಯಾಜ್ಯ ವಿಲೇವಾರಿ ಘಟಕವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿ ಪಡಿಸುವುದು, ಉದ್ಯಾನವನ, ವಾಕಿಂಗ್ ಟ್ರಾÂಕ್ ನಿರ್ಮಾಣ, ಐದು ಗ್ರಾ.ಪಂ.ಗೊಂದರಂತೆ ಕಸ ವಿಲೇವಾರಿ ಘಟಕ, ಖಾಸಗಿ ಸಹಭಾಗಿತ್ವದೊಂದಿಗೆ ಕಸದಿಂದ ಗೊಬ್ಬರ, ಗ್ಯಾಸ್, ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲಾಗುವುದು.
ಕ್ರೀಡಾಂಗಣ – ಈಜು ಕೊಳ ನಿರ್ಮಾಣ : ಕಾಪು, ಬೆಳಪು, ಪೆರ್ಡೂರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣ, ಹೆಜಮಾಡಿ ಕ್ರೀಡಾಂಗಣ ಮೇಲ್ದರ್ಜೆಗೇರಿಸುವುದು, ವಿಶಾಲವಾದ ಈಜುಕೊಳ ನಿರ್ಮಿಸುವ ಉದ್ದೇಶದೊಂದಿಗೆ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಕಾಪು ನಗರವನ್ನು ಕೇಂದ್ರೀಕರಿಸಿ ಸುಸಜ್ಜಿತ ಬಸ್ಸು ನಿಲ್ದಾಣ, ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವುದು.
100 ಬೆಡ್ ಆಸ್ಪತ್ರೆ : ತಾಲೂಕು ಕೇಂದ್ರದಲ್ಲಿ 100 ಬೆಡ್‌ನ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ನಿರ್ಮಾಣ. 4 ಕಡೆ ಪಶು ವೈದ್ಯಕೀಯ ಆಸ್ಪತ್ರೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಕಾಪು ನಗರವನ್ನು ಕೇಂದ್ರೀಕರಿಸಿ ಸುಸಜ್ಜಿತ ಬಸ್ಸು ನಿಲ್ದಾಣ, ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವುದು.
ರೈತ ಸಂಜೀವಿನಿ ಯೋಜನೆ : ರೈತಾಪಿ ವರ್ಗದ ಜನರ ಅನುಕೂಲತೆಗಾಗಿ ನೀರಾವರಿ ಯೋಜನೆಗಳ ಅನುಷ್ಠಾನ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಕೆರೆಗಳ ಹೂಳೆತ್ತುವಿಕೆ, ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ, ಕೃಷಿ ಕೇಂದ್ರ ಸ್ಥಾಪನೆ, ದನ, ಕುರಿ, ಆಡು, ಕೋಳಿ ಸಾಕಾಣಿಕೆಗಾಗಿ ಕೃಷಿಕರಿಗೆ ಸಹಾಯಧನ ಒದಗಿಸಲಾಗುವುದು.
ಸಮುದಾಯ ಭವನ : ವಿವಿಧ ಧರ್ಮ, ಜಾತಿಗಳ ಸಮುದಾಯ ಭವನ ನಿರ್ಮಾಣ, ಪುರಸಭಾ ವ್ಯಾಪ್ತಿಯಲ್ಲಿ ರಾಜೀವಗಾಂಧಿ ಸಭಾಭವನ, ರಾಣಿ ಅಬ್ಬಕ್ಕ ಸಾಂಸ್ಕೃತಿಕ ಕಲಾಭವನ ನಿರ್ಮಾಣ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಅಭಿವೃದ್ಧಿಗೆ ಹೊಸ ಯೋಜನೆಗಳು, ದಲಿತ ಕಾಲೋನಿಗಳ ಅಭಿವೃದ್ಧಿ, ಮೊರಾರ್ಜಿ ಶಾಲೆಗಳ ನಿರ್ಮಾಣದ ಉದ್ದೇಶವಿದೆ.
ಸಿಆರ್‌ಝಡ್, ಮತ್ಸ್ಯಾಶ್ರಯ ಯೋಜನೆ : ಮೀನುಗಾರರ ಡೀಸೆಲ್, ಸೀಮೆಎಣ್ಣೆ ಸಬ್ಸಿಡಿ ಹೆಚ್ಚಿಸುವುದರೊಂದಿಗೆ ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಾಣ, ಮತ್ಸಾಶ್ರಯ ಯೋಜನೆ, ಹೆಜಮಾಡಿ ಬಂದರಿಗೆ ಕಾಯಕಲ್ಪ, ಹೆ„ಟೆಕ್ ಮೀನು ಮಾರುಕಟ್ಟೆ ನಿರ್ಮಾಣ, ಜೆಟ್ಟಿ ನಿರ್ಮಾಣ ಸಹಿತವಾಗಿ ಮತ್ಸೊÂàದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಸಿಆರ್‌ಝಡ್ ನಿಯಮದಿಂದ ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ನಿಯಮದ ತಿದ್ದುಪಡಿಗೆ ಪ್ರಯತ್ನಿಸುವುದು.
ಕಾಪು ತಾಲೂಕು, ಪುರಸಭೆಯನ್ನು ರಾಜ್ಯಕ್ಕೆ ನಂ.1 ಆಗಿಸುವ ಗುರಿ
2013ರಲ್ಲಿ ಕಾಪು ಕ್ಷೇತ್ರದ ಶಾಸಕನಾಗಿ, ನಗರಾಭಿವೃದ್ಧಿ ಸಚಿವನಾಗಿದ್ದ ಸಂದರ್ಭ 2015ರಲ್ಲಿ ಕಾಪು ಪುರಸಭೆ ರಚಿಸಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. 2018ರಲ್ಲಿ ತಾಲೂಕನ್ನಾಗಿ ರಚಿಸುವ ಐತಿಹಾಸಿಕ ನಿರ್ಧಾರದೊಂದಿಗೆ ತಾಲೂಕು ಘೋಷಣೆ ಜತೆಗೆ ಹತ್ತಾರು ಸರಕಾರಿ ಕಚೇರಿಗಳನ್ನು ಕಾಪುವಿನೆಡೆಗೆ ತಂದಿದ್ದೇವೆ. ಈ ಬಾರಿ ಮತ್ತೆ ಶಾಸಕನಾಗಿ ಆಯ್ಕೆಯಾದಲ್ಲಿ ಕಾಪು ತಾಲೂಕು ಮತ್ತು ಪುರಸಭೆಯನ್ನು ರಾಜ್ಯಕ್ಕೆ ನಂ. 1 ಆಗಿ ಅಭಿವೃದ್ಧಿಪಡಿಸುವ ಗುರಿಯಿದೆ. ಸುಂದರ ಕಾಪು – ಸ್ವತ್ಛ ಕಾಪು ಕಾಪು ಅಭಿವೃದ್ಧಿಯ ನೀಲನಕಾಶೆಯೊಂದಿಗೆ ಕಸ ವಿಲೇವಾರಿ, ಕೊಳಚೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಪುರಸಭೆ ಸುತ್ತ ರಿಂಗ್ ರೋಡ್ ನಿರ್ಮಾಣ, ಕಾಪು ಬೀಚ್ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು.
ಕಾಪು ಪ್ರಾಧಿಕಾರದ ಎಲ್ಲಾ ನಿಯಮಾವಳಿಗಳನ್ನು ಸರಳೀಕರಣಗೊಳಿಸಲಾಗುವುದು. ಕಾಪುವಿನಲ್ಲಿ ಆಕರ್ಷಣೀಯವಾದ ವಾಕಿಂಗ್ ಟ್ರ್ಯಾಕ್, ಪಾರ್ಕಿಂಗ್ ವ್ಯವಸ್ಥೆ, ಈಜು ಕೊಳ, ಸಮುದಾಯ ಭವನ, ನ್ಯಾಯಾಲಯ ಸಂಕೀರ್ಣ, ನೊಂದಾವಣೆ ಕೇಂದ್ರ ಸಹಿತ ಎಲ್ಲಾ 32 ಸರಕಾರಿ ಕಚೇರಿಗಳ ನಿರ್ವಹಣೆ, ಬಡಜನತೆಯ ಅನುಕೂಲತೆಗಾಗಿ ಇಂದಿರಾ ಕ್ಯಾಂಟೀನ್ ಸ್ಥಾಪನೆಯ ಗುರಿ ಹೊಂದಿದ್ದೇವೆ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಉತ್ತರ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಲಾಲ್, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಪ್ರಮುಖರಾದ ಮಾಧವ ಆರ್. ಪಾಲನ್, ಅಮೀರ್ ಕಾಪು, ಶರ್ಪುದೀªನ್ ಶೇಖ್, ಪ್ರಶಾಂತ್ ಜತ್ತನ್ನ, ದೇವರಾಜ್ ಕೋಟ್ಯಾನ್, ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.