Udayavani ಬಳಗದಿಂದ ಓದುಗರ ಜ್ಞಾನ ವೃದ್ಧಿ: ಡಾ| ಮುರಳೀಧರ
ತರಂಗ ಯುಗಾದಿ ವಿಶೇಷಾಂಕ- 2024; ಅದೃಷ್ಟಶಾಲಿ ವಿಜೇತರ ಆಯ್ಕೆ
Team Udayavani, Jun 21, 2024, 7:00 AM IST
ಮಣಿಪಾಲ: ತರಂಗ ಯುಗಾದಿ ವಿಶೇಷಾಂಕದ “ತರಂಗ ಎಸ್. ಎಲ್. ಶೇಟ್ ಯುಗಾದಿ ಧಮಾಕ -2024’ರ ಅದೃಷ್ಟಶಾಲಿ ವಿಜೇತರ ಆಯ್ಕೆ “ಉದಯವಾಣಿ’ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆಯಿತು.
ಅತಿಥಿಗಳಾಗಿ ಭಾಗವಹಿಸಿ ವಿಜೇತ ರನ್ನು ಆಯ್ಕೆ ಮಾಡಿದ ಉದ್ಯಾವರ ಎಸ್ ಡಿಎಂ ಆಯುರ್ವೇದಿಕ್ ಫಾರ್ಮ ಸಿ ಜನರಲ್ ಮ್ಯಾನೇಜರ್ ಡಾ| ಮುರಳೀಧರ ಬಲ್ಲಾಳ್ ಮಾತನಾಡಿ, ಮೊಬೈಲ್ ಇಲ್ಲದ ಕಾಲಘಟ್ಟದಲ್ಲಿ ತರಂಗ, ತುಷಾರ, ಉದಯವಾಣಿ ಪತ್ರಿಕೆ ಓದುಗರಿಗೆ ಕಲೆ, ಸಾಹಿತ್ಯ, ಸಾಮಾಜಿಕ ವಿದ್ಯಮಾನಗಳ ಬಗ್ಗೆ ಅತ್ಯುತ್ತಮ ಜ್ಞಾನವನ್ನು ಉಣಬಡಿಸು ತ್ತಿತ್ತು ಎಂದು ಅವರು ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲ್ಯ ಕಳೆದ ನಮ್ಮೆಲ್ಲರ ಜ್ಞಾನವನ್ನು ಉದಯವಾಣಿ, ತರಂಗ ಹೆಚ್ಚಿಸಿತ್ತು. ಇಂದಿಗೂ ಅದೇ ಸಾರವನ್ನು, ಗುಣ ಮಟ್ಟವನ್ನು ಕಾಪಾಡಿಕೊಂಡು ಉತ್ತಮ ಸಮಾಜಕ್ಕಾಗಿ ಸಂಸ್ಥೆಯು ಪ್ರಯೋಗ ಶೀಲವಾಗಿ ಮುನ್ನಡೆಯುತ್ತಿದೆ. ಈ ಜ್ಞಾನವನ್ನು ಪ್ರಸರಿಸುವ ಕಾರ್ಯ ಹೀಗೇ ಮತ್ತಷ್ಟು ವರ್ಷಗಳ ಕಾಲ ಮುಂದುವರೆಯಲಿ ಎಂದು ಹೇಳಿ ಎಲ್ಲ ವಿಜೇತರಿಗೆ ಶುಭ ಹಾರೈಸಿದರು.
ಎಂಎಂಎನ್‌ಎಲ್ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಿ, ಅದೃಷ್ಟಶಾಲಿಗಳಿಗೆ ಶುಭ ಹಾರೈಸಿದರು.
ಎಂಎಂಎನ್‌ಎಲ್‌ನ ಸಿಇಒ ಮತ್ತು ಎಂಡಿ ವಿನೋದ್ ಕುಮಾರ್ ಮಾತನಾಡಿ, ತರಂಗ ವಾರಪತ್ರಿಕೆ ಜನಮಾನಸದಲ್ಲಿ ನೆಲೆಯೂರಲು ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರ ಸಮರ್ಥ ಮಾರ್ಗದರ್ಶನ ಕಾರಣ. ಅವರ ಮುಂದಾಳತ್ವದಲ್ಲಿ ಉತ್ತಮ ಗುಣ ಮಟ್ಟದ ಮಾಹಿತಿಪೂರ್ಣ ವಿಷಯ, ಲೇಖನಗಳನ್ನು ಓದುಗರಿಗೆ ತರಂಗ ನೀಡುತ್ತಿದೆ. ಹಲವು ವಿಶಿಷ್ಟಗಳಮೂಲಕ ಇಂದಿಗೂ ತರಂಗ ಓದುಗರ ಮೆಚ್ಚಿನ ವಾರಪತ್ರಿಕೆಯಾಗಿದೆ ಎಂದರು.
ಮ್ಯಾಗಜಿನ್ ಮತ್ತು ಸ್ಪೆಶಲ್ ಇನಿಶಿಯೇಟಿವ್ಸ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರ್ ಸ್ವಾಗತಿಸಿ ಪ್ರಸ್ತಾವಿಸಿದರು. ಉಡುಪಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಕೊಡವೂರು ವಂದಿಸಿದರು.
ಬಂಪರ್ ಬಹುಮಾನ ಒಬ್ಬರಿಗೆ 8 ಗ್ರಾಂ ಚಿನ್ನದ ನಾಣ್ಯ, ಪ್ರಥಮ ಬಹುಮಾನ ಇಬ್ಬರಿಗೆ 4 ಗ್ರಾಂ ಚಿನ್ನದ ನಾಣ್ಯ, ದ್ವಿತೀಯ ಬಹುಮಾನ ಮೂವರಿಗೆ 2 ಗ್ರಾಂ ಚಿನ್ನದ ನಾಣ್ಯ, ತೃತೀಯ ಬಹುಮಾನ ನಾಲ್ಕು ಜನರಿಗೆ 1 ಗ್ರಾಂ ಚಿನ್ನದ ನಾಣ್ಯ, ಪ್ರೋತ್ಸಾಹಕ ಬಹುಮಾನ 30 ಮಂದಿಗೆ 10 ಗ್ರಾಂ ಬೆಳ್ಳಿ ನಾಣ್ಯ ನೀಡಲಾಗುತ್ತದೆ. ಮಂಗಳೂರಿನ ಹಂಪನಕಟ್ಟೆಯ ಲ್ಲಿರುವ ಎಸ್. ಎಲ್. ಶೇಟ್ ಜುವೆಲರಿ ಆ್ಯಂಡ್ ಡೈಮಂಡ್ ಹೌಸ್ ಆವರು ಪ್ರಾಯೋಜಿಸಿದ್ದಾರೆ.
ಬಹುಮಾನ ವಿಜೇತರ ವಿವರ ಬಂಪರ್ ಬಹುಮಾನ: ವೀರೇಶ್ ಆರ್. ಪರಿತ್ ಕಲ್ಮೂಡ, ಕಲಬುರಗಿ.
ಪ್ರಥಮ 1: ಮಮತಾ ಕೊಡಚವಾಡ ಮಿಶ್ರಿಕೋಟೆ, ಧಾರವಾಡ.
ಪ್ರಥಮ 2: ಎಸ್. ಚಂದ್ರಾಯ ಆಚಾರ್ ತಡಂಬೈಲ್, ಸುರತ್ಕಲ್.
ದ್ವಿತೀಯ 1: ಅಕ್ಷರಾ ಕುಂದರ್ ಕೊಕ್ಕರ್ಣೆ ಮತ್ತು ಹುಬ್ಬಳ್ಳಿ-ಧಾರವಾಡ.
ದ್ವಿತೀಯ 2: ಚನ್ನಪ್ಪ ಮಲ್ಲದ ಶಾನವಾಡ ಧಾರವಾಡ.
ದ್ವಿತೀಯ 3: ರತ್ನಾ ಎಂ. ಕೆ. ಹುಬ್ಬಳ್ಳಿ.
ತೃತೀಯ 1: ಎಂ. ಶಕುಂತಳಾ ನಾಗರಬಾವಿ, ಬೆಂಗಳೂರು.
ತೃತೀಯ 2: ಸಚಿನ್ ರಮೇಶ್ ಜಾಧವ್ ಸಾವಳಗಿ, ಬಾಗಲಕೋಟೆ.
ತೃತೀಯ 3: ಶ್ರೀಕಾಂತ್ ಪಿ. ಚಿತ್ರಗಿ ಕುಮಟಾ, ಉ.ಕ.
ತೃತೀಯ 4: ಪ್ರಕಾಶ್ ರಾಥೋಡ್, ವಿಜಯಪುರ.
ಪ್ರೋತ್ಸಾಹಕರ ಬಹುಮಾನ ಶಶಾಂಕ್ ಎಸ್. ಭಟ್ ಸಿದ್ಧಾಪುರ, ಎಚ್. ಎಸ್. ಅರವಿಂದ ಬಸವನಹಳ್ಳಿ, ಚಿಕ್ಕಮಗಳೂರು, ಶಾಂತಾ ಉಮೇಶ್ ಕಾಮತ್ ಮೂಡುಬಿದಿರೆ, ಭರತ್ ನಾಯಕ್ ಎಂ. ಬೆಳ್ಳಂದೂರು, ಬೆಂಗಳೂರು, ಜಾಸ್ಮಿàನ್ ಡಿ’ಸೋಜಾ ಉಳ್ಳಾಲ ಬೈಲ್ ಮಂಗಳೂರು, ಅಮೆಲಿಯಾ ಸಾರಾ ಡಯಾಸ್ ಕೋರ್ಟ್ ರೋಡ್ ಉಡುಪಿ, ಸಚಿನ್ ಒರ್ರ ಫೈನ್ ಜುವೆಲರಿ ಉಡುಪಿ, ವಿಜೇತಾ ಚಾಮರಾಜಪೇಟೆ , ಬೆಂಗಳೂರು, ಸುಪ್ರೀತಾ ಬಿಜೂರು ಬೈಂದೂರು, ಶಾರದಾ ಕೃಷ್ಣಮೂರ್ತಿ ಗೋರೆಗಾಂವ್ ಮುಂಬಯಿ, ನಂದೀಶ್ ಬಿ. ಯು. ಬಿದರಕೋಟೆ ಮಂಡ್ಯ, ಉಷಾ ಕಾವೇರಿ ಗುಡ್ಡಡ್ಕ, ಸುಳ್ಯ, ಎಂ. ಆರ್. ಜಯಶ್ರೀ ಉತ್ತರ ಬಡಾವಣೆ ಹಾಸನ, ಕಲ್ಪನಾ ಬಾಪಟ್ ಸಾಗರ ಶಿವಮೊಗ್ಗ, ಬಾಬು ಎಸ್. ಕೆ. ಇರ್ವತ್ತೂರು ಕಾರ್ಕಳ, ಎ. ಶಂಕರನಾರಾಯಣ ಭಟ್ಟ ಮದೂರು ಅಳಕ್ಕೆ ಕಾಸರಗೋಡು, ಗಾಯತ್ರಿ ಪಿ. ದಾಮ್ಲೆ ಪಡೀಲ್, ವಿಶ್ವನಾಥ್ ಎಂ. ಕೊಟ್ಟಾರ ಚೌಕಿ ಮಂಗಳೂರು, ಕೆ.ಪಿ. ವಿದ್ಯಾರ್ಥಿ ಸುರತ್ಕಲ್ ಮಂಗಳೂರು, ನವಿಕಾ ಡಿ. ಶೆಟ್ಟಿ ಐರೋಡಿ ಸಾಸ್ತಾನ, ಮೋಹಿನಿ ಮಣ್ಣಗುಡ್ಡೆ ಮಂಗಳೂರು, ತೀರ್ಥ ಪ್ರಸಾದ್ ಹೊಳಲ್ಕೆರೆ ಚಿತ್ರದುರ್ಗ, ಎ. ಅಬೂಬಕ್ಕರ್ ಅನಿಲ ಕಟ್ಟೆ ವಿಟ್ಲ, ಅಕ್ಷತಾ ಜಿ. ಎಸ್. ಪಾವಗಡ ತುಮಕೂರು, ಬಾಲಚಂದ್ರ ಬಜ್ಪೆ, ಎಂ. ಎ. ದೇವಯ್ಯ ಮಡಿಕೇರಿ ಕೊಡಗು, ವಿಸ್ಮಿತಾ ಎಸ್. ಪಿ., ಬಂಟ್ವಾಳ, ನಾಗೇಶ್ ಆಚಾರ್ಯ ಗುರುಶಾಂತ್ ಆಶ್ರಮ ದಾವಣಗೆರೆ, ಕಸ್ತೂರಿ ಎಸ್. ಶೇಟ್ ಕೊಯ್ಯೂರು ಬೆಳ್ತಂಗಡಿ, ಪ್ರಾಪ್ತಿ ಎಸ್. ಶೆಟ್ಟಿ ಮೂಡುಬೆಳ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.