ಇಪಿಎಫ್‌, ಇಎಸ್‌ಐ: ಉದ್ಯೋಗದಾತರು, ಉದ್ಯೋಗಿಗಳಿಗೆ ಪರಿಹಾರ

Team Udayavani, May 22, 2020, 5:49 AM IST

ಇಪಿಎಫ್‌, ಇಎಸ್‌ಐ: ಉದ್ಯೋಗದಾತರು, ಉದ್ಯೋಗಿಗಳಿಗೆ ಪರಿಹಾರ

ಉಡುಪಿ: ಕೋವಿಡ್‌-19 ಹರಡುವುದನ್ನು ತಡೆಗಟ್ಟಲು ಮತ್ತು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಇತರ ಅಡೆತಡೆಗಳನ್ನು ತಡೆಗಟ್ಟಲು ಲಾಕ್‌ಡೌನ್‌ನಿಂದ ತೊಂದರೆ ಗೀಡಾದ ಇಪಿಎಫ್‌ ಮತ್ತು ಎಂಪಿ ಕಾಯ್ದೆ 1952ರ ವ್ಯಾಪ್ತಿಯಲ್ಲಿರುವ ಸಂಸ್ಥೆಗಳ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಪರಿಹಾರ ನೀಡಲು ಕಾಲ ಕಾಲಕ್ಕೆ ವಿವಿಧ ಕ್ರಮಗಳನ್ನು ಘೋಷಿಸಲಾಗಿದೆ.

ಕೇಂದ್ರ ಸರಕಾರ ಮೇ 13ರಂದು ಇಪಿಎಫ್‌, ಎಂಪಿ ಕಾಯ್ದೆ 1952ರ ವ್ಯಾಪ್ತಿಯ ಎಲ್ಲ ವರ್ಗದ ಸಂಸ್ಥೆಗಳಿಗೆ ಮೇ, ಜೂನ್‌, ಜುಲೈ ತಿಂಗಳ ಶಾಸನ ಬದ್ಧ ದರಗಳನ್ನು ಶೇ. 12ರಿಂದ 10ಕ್ಕೆ ಇಳಿಸಿದೆ. ಅಧಿಸೂಚನೆ ಇಪಿಎಫ್‌ಒ ವೆಬ್‌ಸೈಟ್‌ನ ಮುಖಪುಟದಲ್ಲಿ ಖಅಆ  ಕೋವಿಡ್‌-19 ಅಡಿಯಲ್ಲಿ ಲಭ್ಯವಿದೆ. ಮೇಲಿನ ದರ ಕಡಿತವು ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮ ಗಳಿಗೆ ಅಥವಾ ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಅಥವಾ ನಿಯಂತ್ರಿಸಲ್ಪಡುವ ಯಾವುದೇ ಸಂಸ್ಥೆ ಗಳಿಗೆ ಅನ್ವಯಿಸುವುದಿಲ್ಲ.

ಕಡಿಮೆಗೊಳಿಸಿದ ದರವು ಪಿಎಂಜಿಕೆವೈ ಫಲಾನುಭವಿಗಳಿಗೆ ಸಹ ಅನ್ವಯಿಸುವುದಿಲ್ಲ. ಸರಕಾರ ಇಪಿಎಫ್‌ ದರವನ್ನು ಶೇ. 12ರಿಂದ 10ಕ್ಕೆ ಇಳಿಸಿರುವುದರಿಂದ 4.3 ಕೋಟಿ ಉದ್ಯೋಗಿಗಳು / ಸದಸ್ಯರು ಮತ್ತು 6.5 ಲಕ್ಷ ಉದ್ಯೋಗದಾತರಿಗೆ ತತ್‌ಕ್ಷಣದ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸಲು ಸಹಾಯವಾಗುತ್ತದೆ. ಶಾಸನ ಬದ್ಧ ದರವನ್ನು ಶೇ. 12ರಿಂದ 10ಕ್ಕೆ ಇಳಿಸಿದ ಪರಿಣಾಮ, ಉದ್ಯೋಗಿಯು ಹೆಚ್ಚಿನ ಟೇಕ್‌ ಹೋಂ ವೇತನವನ್ನು ಪಡೆಯುತ್ತಾನೆ. ಉದ್ಯೋಗದಾತನ ಹೊಣೆಗಾರಿಕೆ ಕೂಡ ಶೇ. 2ರಷ್ಟು ಕಡಿಮೆಯಾಗುತ್ತದೆ. ನೌಕರರ ಮಾಸಿಕ ಇಪಿಎಫ್‌ ವೇತನ 10,000 ರೂ. ಇದ್ದರೆ 1,200 ರೂ.ಗಳ ಬದಲಿಗೆ 1,000 ರೂ. ಮಾತ್ರ ವೇತನದಿಂದ ಕಡಿತವಾಗುತ್ತದೆ. ಉದ್ಯೋಗದಾತರು ಅಷ್ಟೇ ಪಾವತಿಸುತ್ತಾರೆ.

ಇಪಿಎಫ್‌ ಯೋಜನೆಯಡಿ 1952ರಲ್ಲಿ ಯಾವುದೇ ಸದಸ್ಯರಿಗೆ ಶಾಸನಬದ್ಧ ದರಕ್ಕಿಂತ (ಶೇ. 10) ಹೆಚ್ಚಿನ ದರದಲ್ಲಿ ಕೊಡುಗೆ ನೀಡುವ ಅವಕಾಶವಿದೆ ಮತ್ತು ಉದ್ಯೋಗದಾತನು ಅಂತಹ ಉದ್ಯೋಗಿಗೆ ಸಂಬಂಧಿಸಿದಂತೆ ತನ್ನ ಕೊಡುಗೆಯನ್ನು ಶೇ. 10 (ಶಾಸನಬದ್ಧ ದರ) ನಿರ್ಬಂಧಿಸಬಹುದು.

ಮಂಗಳೂರು: ಇಎಸ್‌ಐ ಯೋಜನೆ ವ್ಯಾಪ್ತಿಗೆ ಒಳಪಟ್ಟ ನೌಕರರು ಉದ್ಯೋಗಿಗಳಾಗಿದ್ದು, ಅನಂತರ ನಿರುದ್ಯೋಗಿಗಳಾದರೆ ಅವರಿಗೆ ಇಎಸ್‌ಐಸಿಯ ಆರ್‌ಜಿಎಸ್‌ಕೆವೈ ಮತ್ತು ಎಬಿವಿಕೆವೈ ಯೋಜನೆಯಡಿ ಆರ್ಥಿಕ ಸಹಾಯ ದೊರೆಯುತ್ತದೆ ಎಂದು ಇಎಸ್‌ಐಸಿ ಸಂಸ್ಥೆ ತಿಳಿಸಿದೆ.

ಕೈಗಾರಿಕಾ ವಿವಾದ ಅಧಿನಿಯಮ 1947ರ ಕಾಯಿದೆಯನ್ವಯ ಉದ್ಯೋಗಿ ಗಳಾಗಿದ್ದು ನಿರುದ್ಯೋಗಿಗಳಾದರೆ ಮೊದಲ 12 ತಿಂಗಳು ಅವರ ವೇತನದ ಶೇ. 50, ಒಂದು ವೇಳೆ 12 ತಿಂಗಳ ಅನಂತರವೂ ಮತ್ತೆ ಉದ್ಯೋಗ ಪಡೆಯದಿದ್ದರೆ ಅನಂತರದ 12 ತಿಂಗಳ ಅವಧಿಗೆ ವೇತನದ ಶೇ. 25ರಷ್ಟು ನಿರುದ್ಯೋಗ ಭತ್ತೆ ದೊರೆಯುತ್ತದೆ. ಒಂದು ವೇಳೆ ಸಂಸ್ಥೆ/ಕಾರ್ಖಾನೆಯ ಮುಚ್ಚುವಿಕೆ ಅಥವಾ ಕೆಲಸದಿಂದ ತೆಗೆದು ಹಾಕಿರುವುದನ್ನು ಹೊರತುಪಡಿಸಿ ನಿರುದ್ಯೋಗಿಗಳಾದರೆ 90 ದಿನಗಳ ಅವಧಿಗೆ ವೇತನದ ಶೇ. 25ರಷ್ಟು ನಿರುದ್ಯೋಗ ಭತ್ತೆ ಪಡೆಯಲು ಅರ್ಹರಾಗಿರುತ್ತಾರೆ. ನೌಕರರು ಅಗತ್ಯ ದಾಖಲೆಗಳೊಂದಿಗೆ ಇಎಸ್‌ಐಸಿಯ ಕಚೇರಿಗಳನ್ನು ಸಂಪರ್ಕಿಸಬಹುದು.

ಉದ್ಯೋಗದಾತರಿಗೂ ವಿನಾಯಿತಿ
ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉದ್ಯೋಗದಾತರು ಇಎಸ್‌ಐಸಿಗೆ ಸಲ್ಲಿಸುವ ವಂತಿಗೆಯ ಅವಧಿಯನ್ನು ವಿಸ್ತರಿಸಿ ವಿನಾಯಿತಿ ನೀಡಲಾಗಿದೆ. 2019ರ ಅಕ್ಟೋಬರ್‌ನಿಂದ 2020ರ ಮಾರ್ಚ್‌ವರೆಗಿನ ವಂತಿಗೆ ಸಲ್ಲಿಸಲು ಮೇ 11 ಕೊನೆಯ ದಿನಾಂಕವಾಗಿತ್ತು. ಇದೀಗ ಅದನ್ನು ಜೂ. 11ರ ವರೆಗೆ ವಿಸ್ತರಿಸಲಾಗಿದೆ. ಅಂದರೆ ವಂತಿಗೆ ಸಲ್ಲಿಸಲು ಹೆಚ್ಚುವರಿಯಾಗಿ ಒಂದು ತಿಂಗಳ ಅವಧಿಯನ್ನು ನೀಡಲಾಗಿದೆ ಎಂದು ಇಎಸ್‌ಐಸಿ ಮಂಗಳೂರು ಉಪ ಪ್ರಾದೇಶಿಕ ಕಚೇರಿಯ ಪ್ರಭಾರ ನಿರ್ದೇಶಕ ಎಸ್‌. ಶಿವರಾಮಕೃಷ್ಣನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ: ಇಪಿಎಫ್‌ ಉಡುಪಿ ಕಾರ್ಯಾಲಯ:
0824   2531172 / 2531174 ಇ-ಮೇಲ್‌ [email protected]

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.