ಎರ್ಮಾಳು : ಕಳಪೆ ಕಾಮಗಾರಿಗೆ ತೇಪೆ ; ಬೈಕ್ ಸವಾರರಿಗೆ ಕಂಟಕ
Team Udayavani, Jul 15, 2017, 2:20 AM IST
ಕಾಪು : ರಾ. ಹೆ. 66ರ ಎರ್ಮಾಳ್‌ನಿಂದ ಮುದರಂಗಡಿಗೆ ತೆರಳುವ ರಸ್ತೆಯ ನಡುವಿನ ಅದಮಾರು ರೈಲ್ವೇ ಗೇಟ್ ಸಮೀಪದ ಮೂಡಬೆಟ್ಟು ಸೇತುವೆಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಸೇತುವೆಯ ಮೇಲ್ಭಾಗದ ಕಾಂಕ್ರೀಟ್ ಕಾಮಗಾರಿಯು ಉದ್ಘಾಟನೆಗೆ ಮೊದಲೇ ಬಿರುಕು ಬಿಟ್ಟಿರುವ ಬಗ್ಗೆ ಉದಯವಾಣಿಯಲ್ಲಿ ಪ್ರಕಟಿತ ವರದಿಯನ್ನು ನೋಡಿ ಇಲಾಖೆ ಮತ್ತು ಗುತ್ತಿಗೆದಾರರು ಎಚ್ಚೆತ್ತುಕೊಂಡು ಹಾಕಿದ್ದ ತೇಪೆ ಎರಡೇ ದಿನದಲ್ಲಿ ಮತ್ತೆ ಕಿತ್ತು ಹೋಗಿದೆ.
ಸೇತುವೆ ಬಿರುಕು ಬಿಟ್ಟಿರುವ ಬಗ್ಗೆ ಜು. 12ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿದ್ದು, ಅದೇ ದಿನ ಸಂಜೆಯೊಳಗೆ ಬಿರಕು ಬಿಟ್ಟಿದ್ದ ಮತ್ತು ಒಡೆದು ಹೋಗಿದ್ದ ಸೇತುವೆಯ ಮೇಲಿನ ಕಾಂಕ್ರೀಟ್ ಕಾಮಗಾರಿಗೆ ಗುತ್ತಿಗೆದಾರರು ತೇಪೆ ಹಚ್ಚಿದ್ದರು. ಆದರೆ ಅಲ್ಲಿ ನಡೆಸಲಾಗಿರುವ ತೇಪೆ ಕಾಮಗಾರಿಯು ಮತ್ತೆ ಎರಡು ದಿನಗಲ್ಲೇ ಕೊಚ್ಚಿ ಹೋಗಿದ್ದು, ಗುತ್ತಿಗೆದಾರರ ತೇಪೆ ಕಾಮಗಾರಿಯ ಅವಸ್ಥೆ ಜನರನ್ನು ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿದೆ.
ತೇಪೆ ಹಚ್ಚಿದ ಬಳಿಕ ಅಪಘಾತದ ಸರದಿ ಬುಧವಾರ ಸಂಜೆಯ ವೇಳೆಗೆ ತೇಪೆ ಕಾಮಗಾರಿ ಮುಗಿಸಿದ ಗುತ್ತಿಗೆದಾರರ ಪರ ಕಾರ್ಮಿಕರು ಕಾಮಗಾರಿ ಹಾಳಾಗದಂತೆ ಮತ್ತು ಅದರ ಮೇಲೆ ವಾಹನಗಳು ಸಂಚರಿಸಬಾರದೆಂಬ ದೃಷ್ಠಿಯಿಂದ ಕಲ್ಲು ಮತ್ತು ಮರದ ತುಂಡುಗಳನ್ನು ಅಡ್ಡವಿರಿಸಿ ಹೋಗಿದ್ದರು. ಆದರೆ ಇದನ್ನು ಗಮನಿಸುವಲ್ಲಿ ವಿಫಲರಾದ ಕಾರಣ ಬೈಕ್ ಸವಾರರು ರಸ್ತೆಯಲ್ಲೇ ಮಗುಚಿ ಬೀಳುವಂತಾಗಿದ್ದು, ಕೆಲವು ಬೈಕ್‌ಗಳಿಗೆ ಇದರಿಂದಾಗಿ ಹಾನಿಯುಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
World Test Championship: ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ
Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.