‘ಭೂತಾರಾಧನೆ ಪರಂಪರೆಗೆ ನಂಬಿಕೆಯೇ ಬುನಾದಿ’
Team Udayavani, Apr 5, 2022, 11:39 AM IST
ಮಣಿಪಾಲ: ಮಾಹೆ ವಿ.ವಿ.ಯ ಮಣಿಪಾಲ್ ಸೆಂಟರ್ ಫಾರ್ ಯುರೋಪಿಯನ್ ಸ್ಡಡೀಸ್ ವಿಭಾಗದ ಸೆಂಟರ್ ಫಾರ್ ಇಂಟರ್ ಕಲ್ಚರಲ್ ಸ್ಡಡೀಸ್ ಆ್ಯಂಡ್ ಡಯಲಾಗ್ ನ(ಸಿಐಎಸ್‌ಡಿ) ಆಶ್ರಯದಲ್ಲಿ ಪರ್ಫಾರ್ಮೆನ್ಸ್ ಆ್ಯಂಡ್ ಫೈಥ್: ಎ ಡಯಲಾಗ್ ಆನ್ ಭೂತ ವರ್ಶಿಪ್’ ಕುರಿತ ಸಂವಾದ ಎ. 2ರಂದು ನಡೆಯಿತು.
ಪ್ರಸಿದ್ಧ ದೈವ ನರ್ತಕ, ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವದ ನರ್ತಕ ಕಲಾವಿದರೂ ಆಗಿರುವ ಹಿರಿಯಡಕದ ರವಿ ಪಾಣಾರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ತುಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಾದ ನಡೆಯಿತು.
ರವಿ ಪಾಣಾರ ಅವರು ದೈವ ಮತ್ತು ಭಕ್ತರ ನಡುವಿನ ನಂಬಿಕೆಯ ಸಂಬಂಧವನ್ನು ವಿವರಿಸಿದರು. ಇಡೀ ಬದುಕು ನಿಂತಿರುವುದೇ ನಂಬಿಕೆಯ ಮೇಲೆ. ಮನುಷ್ಯ- ಮನುಷ್ಯನ ಮೇಲೆ ನಂಬಿಕೆಯನ್ನು ಹೊಂದಿದ್ದಾನೆ. ತಾಯಿಗೆ ಮಗುವಿನ ಮೇಲೆ, ಮಗುವಿಗೆ ತಾಯಿ ಮೇಲೆ ನಂಬಿಕೆ ಇರುತ್ತದೆ. ಇಂಥ ನಂಬಿಕೆ ದೈವದ ಕುರಿತು ಇರುತ್ತದೆ. ದೈವ ತನ್ನನ್ನು ರಕ್ಷಿಸುತ್ತದೆ ಎಂಬುದು ಭಕ್ತನ ನಂಬಿಕೆಯಾದರೆ, ಭಕ್ತ ಒಳಿತನ್ನೇ ಮಾಡುತ್ತಾನೆ ಎಂಬ ನಂಬಿಕೆ ದೈವಗಳಲ್ಲಿರುತ್ತದೆ. ಇಂಥ ನಂಬಿಕೆಯೇ ದೈವ ಅಥವಾ ಭೂತಾರಾಧನೆ ಪರಂಪರೆಯು ಸಾವಿರ ವರ್ಷಗಳಿಂದ ನಡೆದುಕೊಂಡು ಬರಲು ಕಾರಣವಾಗಿದೆ ಎಂದು ಹೇಳಿದರು.
ಯುರೋಪಿಯನ್ ಸ್ಡಡೀಸ್‌ನ ಮುಖ್ಯಸ್ಥೆ ಡಾ| ನೀತಾ ಇನಾಂದಾರ್ ಅವರು ರವಿ ಪಾಣಾರ ಅವರನ್ನು ಗೌರವಿಸಿದರು. ಎಂಐಟಿಯ ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಸಿಐಎಸ್‌ಡಿ ಸಂಯೋಜಕ ಡಾ| ಪ್ರವೀಣ್ ಶೆಟ್ಟಿ ಸಂವಾದದ ಸಮನ್ವಯಕಾರರಾಗಿದ್ದರು. ಮಣಿಪಾಲ್ ಯುನಿವರ್ಸಲ್ ಪ್ರಸ್‌ನ ಸಂಪಾದಕ ಡಾ| ಪೃಥ್ವೀರಾಜ ಕವತ್ತಾರು ಮತ್ತು ಸಿಐಎಸ್‌ಡಿ ಸಂಶೋಧಕ ನಿತೇಶ್ ಪಡುಬಿದ್ರಿ ಸಂಯೋಜಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.