ತೋಟಕ್ಕೆ ಬಿದ್ದ ಹವಾಮಾನ ಮಾಹಿತಿ ಸಂಗ್ರಹ ಯಂತ್ರ
ಬೋಳದಲ್ಲಿ ಗಾಬರಿ ಹುಟ್ಟಿಸಿದ ಬಲೂನ್
Team Udayavani, Nov 17, 2019, 12:59 AM IST
ಬೆಳ್ಮಣ್: ಬಿಳಿ ಬಣ್ಣದ ಬೃಹತ್ ಗಾತ್ರದ ಬಲೂನ್ ಸಹಿತ ಉಪಕರಣವೊಂದು ಕಾರ್ಕಳ ತಾಲೂಕಿನ ಬೋಳದ ಕಿಶೋರ್ ಅವರ ತೋಟಕ್ಕೆ ಶುಕ್ರವಾರ ರಾತ್ರಿ ಬಿದ್ದಿದ್ದು ಗಾಬರಿ ಮೂಡಿಸಿತು. ಕಾರ್ಕಳ ಪೊಲೀಸರು ಹಾಗೂ ಬೋಳ ಗ್ರಾಮ ಕರಣಿಕ ಸುದರ್ಶನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅದು ಹವಾಮಾನ ಮಾಹಿತಿ ಯಂತ್ರ ಎಂದು ತಿಳಿದ ಬಳಿಕ ಮನೆಯವರು ಹಾಗೂ ಪರಿಸರದವರು ನಿರಾಳರಾದರು.
ವಿದೇಶೀ ನಿರ್ಮಿತ
ಕೊರಿಯಾದಲ್ಲಿ ನಿರ್ಮಾಣಗೊಂಡಿರುವ ಈ ಉಪಕರಣದಲ್ಲಿ ಆರ್‌ಎಸ್‌ಡಬ್ಲೂ é ರೇಡಿಯೋ ಸೊಂಡೆ ಹಾಗೂ ರೇಡಿಯೋ ವಿಂಡ್ ಎಂದು ಬರೆದಿದ್ದು ಎಲ್ಲಿಂದ ಹಾರಿಬಿಡಲಾಗಿದೆ ಎಂದು ಮಾಹಿತಿ ಲಭಿಸಿಲ್ಲ. ಕಾರ್ಕಳ ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ ಬೋಳ ಗ್ರಾಮಕರಣಿಕ ಸುದರ್ಶನ್ ಈ ಉಪಕರಣವನ್ನು ಕೊಂಡೊಯ್ದು ಪಂಚಾಯತ್‌ನಲ್ಲಿರಿಸಿದ್ದಾರೆ.
ಬಂಟ್ವಾಳದಲ್ಲಿಯೂ ಬಿದ್ದಿತ್ತು
ಈ ಹಿಂದೆ ಬಂಟ್ವಾಳದ ಮಡಂತ್ಯಾರಿನ ಎಡೂರಿನಲ್ಲಿಯೂ ಇದೇ ರೀತಿಯ ಉಪಕರಣ ಆಕಾಶದಿಂದ ಬಿದ್ದು ಗಾಬರಿ ಹುಟ್ಟಿಸಿತ್ತು. ತನಿಖೆಯ ಬಳಿಕ ಅದು ಮಂಗಳೂರಿನ ಶಕ್ತಿನಗರದ ಹವಾಮಾನ ಇಲಾಖೆಯ ಕೇಂದ್ರದಿಂದ ಬಿಡಲಾಗುತ್ತಿರುವ ಉಪಕರಣವೆಂಬ ಮಾಹಿತಿ ಲಭ್ಯವಾಗಿತ್ತು. ಹಿಂದೆ ಪಣಂಬೂರಿನ ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಕೇಂದ್ರದಿಂದ 40 ವರ್ಷಗಳಿಂದ ಇಂತಹ ಉಪಕರಣಗಳನ್ನು ಹಾರಿ ಬಿಡಲಾಗುತ್ತಿದ್ದು, ಇದೀಗ ಮಂಗಳೂರಿನ ಶಕ್ತಿನಗರದ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ
Udupi ಹೊಸ ವರ್ಷಾಚರಣೆ: ಹಾನಿಕಾರಕ ಸಂದೇಶ ಎಚ್ಚರ ವಹಿಸಲು ಎಸ್‌ಪಿ ಸೂಚನೆ
Padubidri: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಸಮುದ್ರಪಾಲು, ಓರ್ವನ ರಕ್ಷಣೆ
Manipal: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಹಗ್ಗ ತುಂಡಾಗಿ ಬಿದ್ದು ಸಾವು
Udupi: ರೈಲಿನಲ್ಲಿ ಬ್ಯಾಗ್ ಬಾಕಿ; ಸುರಕ್ಷಿತವಾಗಿ ಮರಳಿ ಪಡೆದ ಯಾತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Contracter Case: ಸಚಿನ್ ಪಾಂಚಾಳ್ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ
Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.