ಪ್ರಸಾದ್‌ರಾಜ್‌ ಕಾಂಚನ್‌ ಗೆಲುವಿಗೆ ಉಡುಪಿಯಾದ್ಯಂತ ಪೂರಕ ವಾತಾವರಣ: ಅಮೃತ್‌ ಶೆಣೈ

ಅಂಬಲಪಾಡಿ ಕಿದಿಯೂರು ಭಾಗದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆ

Team Udayavani, May 5, 2023, 5:16 PM IST

1-aaa

ಮಲ್ಪೆ: ಸಹೃದಯಿ, ವಿನಯಶೀಲ ಅಭ್ಯರ್ಥಿ ಪ್ರಸಾದ್‌ರಾಜ್‌ ಕಾಂಚನ್‌ ಗೆಲ್ಲುವುದರಲ್ಲಿ ಸಂಶಯವಿಲ್ಲ. ಗೆಲುವಿಗೆ ಪೂರಕ ವಾತಾವರಣ ಉಡುಪಿಯಾದ್ಯಂತ ಕಾಣ ಸಿಗುತ್ತಿದೆ. ಪ್ರಸಾದ್‌ರಾಜ್‌ ಅವರ ಹಮ್ಮು ಅಹಂಕಾರ ಇಲ್ಲದ ಎಲ್ಲರನ್ನೂ ಪ್ರೀತಿಯಿಂದ ಗೌರವದಿಂದ ಮಾತನಾಡಿಸುವ ಗುಣ ನಡತೆಗೆ ಜನ ಅವರನ್ನು ಈಗಾಗಲೇ ಸ್ವೀಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಮಾಧ್ಯಮ ಹಾಗೂ ಸಂವಹನ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೃತ್‌ ಶೆಣೈ ಹೇಳಿದರು.ಅಂಬಲಪಾಡಿ ಕಿದಿಯೂರು ಭಾಗದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತಾಡಿದರು.

ಅಹಂಕಾರ ಇಲ್ಲದೆ ಜನಸೇವೆ
ಅಭ್ಯರ್ಥಿ ಪ್ರಸಾದ್‌ರಾಜ್‌ ಮಾತನಾಡಿ, ತಾನು ಸಭ್ಯತೆಯ ಚೌಕಟ್ಟನ್ನು ಮೀರಿ ಯಾವತ್ತೂ ಜೀವನದಲ್ಲಿ ನಡೆದಿಲ್ಲ, ತನ್ನ ತಂದೆ ಬಿ.ಬಿ. ಕಾಂಚನ್‌,ತಾಯಿ ಸರಳಾ ಕಾಂಚನ್‌ ಅವರು ನನ್ನಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿದ್ದಾರೆ. ಎಲ್ಲ ವರ್ಗಗಳ ಜತೆ ಒಡನಾಟದಿಂದ ಬೆಳೆಯುತ್ತಾ ಬಂದ ತನಗೆ ಎಲ್ಲರ ನೋವು ಗೊತ್ತಿದೆ. ಹಾಗಾಗಿ ಗೆದ್ದು ಬಂದ ನಂತರ ಒಂದಿಷ್ಟು ಅಧಿಕಾರದ ಅಹಂಕಾರ ತನ್ನ ಬಳಿ ಸುಳಿಯಲೂ ಬಿಡದೆ ಜನ ಸೇವೆ ಮಾಡುವೆನು ಎಂದು ಪ್ರಮಾಣ ನೀಡಿದರು.

ಗ್ಯಾರಂಟಿ ಘೋಷಣೆಗಳು ಜನ ಮನ ಗೆದ್ದಿವೆ
ರೂ. 3 ಲಕ್ಷ ಎರಡು ಸಾವಿರ ಕೋಟಿ ಈ ಬಾರಿ ಕರ್ನಾಟಕದ ಬಜೆಟ್‌, ಅದರಲ್ಲಿ ಸುಮಾರು 50 ಸಾವಿರ ಕೋಟಿ ಈ ಯೋಜನೆಗಳಿಗೆ ಖರ್ಚಾಗುವುದು. ಆರ್ಥಿಕ ತಜ್ಞರ ಬಳಿ ಸಮಾಲೋಚನೆ ಮಾಡಿ ಘೋಷಿಸಿದ ಈ ಯೋಜನೆಗಳು ಎಲ್ಲರಿಗೂ ತಲುಪುತ್ತವೆ. ರೂ. 2000 ತಿಂಗಳಿಗೆ ಮನೆಯ ಓರ್ವ ಮಹಿಳೆಗೆ, 200 ಯುನಿಟ್‌ ಉಚಿತ ವಿದ್ಯುತ್‌ ಪ್ರತಿ ಮನೆಗೆ ಪ್ರತಿ ತಿಂಗಳು, ಪದವೀಧರರಿಗೆ ರೂ. 3000 ಮಾಸಿಕ ಪ್ರೋತ್ಸಾಹಧನ, ಡಿಪ್ಲೋಮಾದಾರರಿಗೆ ರೂ. 1500, ಇವೆಲ್ಲಾ ಜನ ಮತ್ತೆ ಮಾರುಕಟ್ಟೆಯಲ್ಲಿ ಚಲಾವಣೆ ಮಾಡುವ ಮೂಲಕ ಸರಕಾರಕ್ಕೆ ತೆರಿಗೆ ಹಾಗೂ ಜಿಡಿಪಿ ವೃದ್ದಿಗೆ ಸಹಾಕಾರಿ ಆಗುತ್ತದೆ. ಬಿಜೆಪಿ ಹೇಳಿದ ಕಪ್ಪು ಹಣ ಇನ್ನೂ ಬಂದಿಲ್ಲ, ಉದ್ಯೋಗ ಕೇಳಿದ ಪದವೀಧರರಿಗೆ ಪಕೋಡಾ ಮಾರಿ ಬದುಕಿ ಎಂದು ಒಮ್ಮೆ ಅಮಿತ್‌ ಶಾ ಹೇಳಿದ್ದನ್ನು ಜನ ಮರೆತಿಲ್ಲ ಎಂದು ಮಾಧ್ಯಮ ಹಾಗೂ ಸಂವಹನ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೃತ್‌ ಶೆಣೈ ಹೇಳಿದರು.

ಬಿಟ್ಟಿ ಭರವಸೆಗಳ ಪ್ರಣಾಳಿಕೆ
ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರ ನಡೆಸಿದಾಗ ನೀಡಿದ ಎಲ್ಲಾ ಭರವಸೆಗಳನ್ನು ಪೊರೈಸಿದ್ದು ಈ ಬಾರಿ ಕೂಡ ಅಧಿಕಾರಕ್ಕೆ ಬಂದರೆ ಜನರಿಗೆ ಉತ್ತಮ ಯೋಜನೆಯ ಗ್ಯಾರಂಟಿಯನ್ನು ನೀಡಿದ್ದು ಅದನ್ನು ಪೂರೈಸಲು ಬದ್ಧವಾಗಿದೆ. ಬಿಜೆಪಿಗರು ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡಿಕೊಂಡು ಬಂದಿದ್ದು ಈಗ ಪೂರೈಸಲು ಸಾಧ್ಯವಾಗದ ಸುಳ್ಳು ಭರವಸೆಗಳ ಬಿಟ್ಟಿ ಭಾಗ್ಯಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿದೆ. ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸದವರು ಈಗ ನೀಡಿದ ಭರವಸೆಯನ್ನು ಈಡೇರಿಸುವರು ಎಂದು ಯಾವ ಗ್ಯಾರಂಟಿ? ಎಂದು ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌ ಪ್ರಶ್ನಿಸಿದರು.

ಬಿಜೆಪಿ ಭರವಸೆಗೆ ಮರಳಾಗದಿರಿ
ಬಿಜೆಪಿ ಘೋಷಿಸಿದ ವರ್ಷದ ಮೂರು ಹಬ್ಬಗಳಿಗೆ ಮೂರು ಸಿಲಿಂಡರ್‌ ಉಚಿತ ಎಂಬ ಭರವಸೆಗೆ ಮತದಾರರು ಮರುಳು ಆಗಬಾರದು. ಇದನ್ನು ಉತ್ತರ ಪ್ರದೇಶದಲ್ಲಿ ಘೋಷಿಸಿದ ಯೋಗಿಯವರು ಇನ್ನೂ ಜಾರಿಗೆ ತಂದಿಲ್ಲ, ಒಂದು ವೇಳೆ ಜಾರಿಗೆ ತಂದರೂ ಕ್ರಯಕ್ಕೆ ಪಡೆಯುವ ಸಿಲಿಂಡರ್‌ ಬೆಲೆ ರೂ. 3000 ಮಾಡಿದರೆ ಜನರ ಪರಿಸ್ಥಿತಿಗೆ ದೇವರೇ ಗತಿ ಎಂದು ಕೊಕ್ಕರ್ಣೆ ಕಾಂಗ್ರೆಸ್‌ ಮುಖಂಡೆ ಡಾ| ಸುನೀತಾ ಶೆಟ್ಟಿ ಹೇಳಿದರು.

ಮುಖಂಡರಾದ ನರಸಿಂಹ ಮೂರ್ತಿ, ದಿನೇಶ್‌ ಪುತ್ರನ್‌, ಹರೀಶ್‌ ಕಿಣಿ, ಕುಶಲ ಶೆಟ್ಟಿ, ದಿವಾಕರ ಕುಂದರ್‌, ಸದಾಶಿವ ಅಮೀನ್‌ ಕಟ್ಟೆಗುಡ್ಡೆ, ವಾಮನ ಬಂಗೇರಾ, ಕೀರ್ತಿ ಶೆಟ್ಟಿ ಅಂಬಪಾಡಿ, ಮಹಾಬಲಕುಂದರ್‌, ವೆರೋನಿಕಾ ಕರ್ನೇಲಿಯೋ, ಮಮತಾ ಶೆಟ್ಟಿ, ಮಹಮ್ಮದ್‌ ಶೀಶ್‌, ಗಣೇಶ್‌ ನೆರ್ಗಿ, ಪ್ರಶಾಂತ್‌ ಪೂಜಾರಿ, ಸುಕೇಶ್‌ ಕುಂದರ್‌, ಜ್ಯೋತಿ ಹೆಬ್ಟಾರ್‌, ಶ್ರೀನಿವಾಸ ಹೆಬ್ಟಾರ್‌, ಹಬೀಬ್‌ ಅಲಿ, ಪ್ರಭಾಕರ ನಾಯಕ್‌, ಭಾಸ್ಕರ ರಾವ್‌ ಕಿದಿಯೂರು, ಅಣ್ಣಯ್ಯ ಸೇರಿಗಾರ, ನಾಸೀರ್‌, ಹಮ್ಮದ್‌, ರವಿರಾಜ್‌, ಜಯಶ್ರೀ ಶೇಟ್‌, ಶಶಿರಾಜ್‌ ಕುಂದರ್‌, ಚಂದ್ರಮೋಹನ್‌, ಯಾದವ ಆಚಾರ್ಯ, ಆರ್‌. ಕೆ. ರಮೇಶ್‌ ಪೂಜಾರಿ, ಹರ್ಮಿಸ್‌ ನೊರೊನ್ಹಾ, ಜನಾರ್ದನ್‌ ಶೆಣೈ ತೆಂಕಪೇಟೆ, ಸುರೇಂದ್ರ ಆಚಾರ್ಯ, ವಿಲ್ಸನ್‌ ಸಿಕ್ವೇರಾ, ಸತೀಶ್‌ ಕುಮಾರ್‌ ಮಂಚಿ, ಶರತ್‌ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.